
ಕೇಂದ್ರ ಸರ್ಕಾರ ನಿರ್ವಹಿಸುವ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ (AB- PMJAY) ದೇಶದ ಕೋಟ್ಯಂತರ ಜನರಿಗೆ ಆಪದ್ಬಾಂಧವ ಎನಿಸಿದೆ. ಬಡವರು, ದುರ್ಬಲರು, ನಿರ್ಗತಿಕರು, ಹಿಂದುಳಿದವರು, ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ನೀಡಲಾಗುತ್ತದೆ. ಇತ್ತೀಚೆಗಷ್ಟೇ ಸರ್ಕಾರವು ಈ ಸ್ಕೀಮ್ ಅನ್ನು 70 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ವಿಸ್ತರಿಸಿದೆ. ಈ ಯೋಜನೆಯಲ್ಲಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರೂ ಹೆಲ್ತ್ ಕವರೇಜ್ ಇರುತ್ತದೆ.
ಜೀವಕ್ಕೆ ಆಪತ್ತು ತರುವ ಬಹುತೇಕ ಎಲ್ಲಾ ಆರೋಗ್ಯ ತೊಂದರೆಗಳಿಗೆ ನೀಡಲಾಗುವ ಚಿಕಿತ್ಸೆಯ ವೆಚ್ಚವನ್ನು ಈ ಇನ್ಷೂರೆನ್ಸ್ನಲ್ಲಿ ಕವರ್ ಮಾಡಲಾಗುತ್ತದೆ. ಆಸ್ಪತ್ರೆಗೆ ದಾಖಲಾಗಿ ಪಡೆಯಲಾಗುವ ಬಹುತೇಕ ಎಲ್ಲಾ ಚಿಕಿತ್ಸೆಗಳು ಈ ಇನ್ಷೂರೆನ್ಸ್ ವ್ಯಾಪ್ತಿಗೆ ಬರುತ್ತವೆ. ಕೆಲವಿಷ್ಟು ಚಿಕಿತ್ಸೆಗಳು ಈ ವ್ಯಾಪ್ತಿಯಿಂದ ಹೊರಗಿವೆ.
ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ನ್ಯಾಷನಲ್ ಹೆಲ್ತ್ ಬೆನಿಫಿಟ್ ಪ್ಯಾಕೇಜ್ ಗೈಡ್ಲೈನ್ಸ್ ಪ್ರಕಾರ ಯಾವ್ಯಾವ ರೋಗಗಳು ಹಾಗೂ ಚಿಕಿತ್ಸೆಗಳು ಆಯುಷ್ಮಾನ್ ಭಾರತ್ ಇನ್ಷೂರೆನ್ಸ್ ವ್ಯಾಪ್ತಿಯಿಂದ ಹೊರಗಿರುತ್ತವೆ ಎಂಬುದನ್ನು ಪಟ್ಟಿ ಮಾಡಿದೆ. ಅದರ ವಿವರ ಕೆಳಕಂಡಂತಿದೆ:
ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲದ ಜ್ವರ, ನೆಗಡಿ ಇತ್ಯಾದಿ ಸಾಮಾನ್ಯ ಸಮಸ್ಯೆಗೆ ಒಪಿಡಿಯಲ್ಲಿ ಪಡೆಯಲಾಗುವ ರೆಗ್ಯುಲರ್ ಟ್ರೀಟ್ಮೆಂಟ್ಗೆ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ.
ಕೆಲವೊಮ್ಮೆ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಸಂಪೂರ್ಣ ತಪಾಸಣೆ ಮಾಡಿ, ವಿಟಮಿನ್ ಇತ್ಯಾದಿ ಟಾನಿಕ್ಗಳನ್ನು ಕೊಟ್ಟು ಡಿಸ್ಚಾರ್ಜ್ ಮಾಡುವುದುಂಟು. ಇಂಥ ಟ್ರೀಟ್ಮೆಂಟ್ ಅಥವಾ ವೆಚ್ಚಕ್ಕೆ ಆಯುಷ್ಮಾನ್ ಭಾರತ್ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ.
ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ
ಹೆಚ್ಚಿನ ದಂತ ಚಿಕಿತ್ಸೆಗಳು ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ ಅಡಿ ಇನ್ಷೂರೆನ್ಸ್ ವ್ಯಾಪ್ತಿಗೆ ಬರುವುದಿಲ್ಲ.
ಸಂತಾನಹೀನತೆಯ ಸಮಸ್ಯೆ, ಲಸಿಕೆ ಯೋಜನೆ, ಸೌಂದರ್ಯವರ್ದಕ ಕಾಸ್ಮೆಟಿಕ್ ಸರ್ಜರಿ, ಶಿಶುಗಳ ಶಿಶ್ನ ಚರ್ಮ ತೆಗೆಯುವಿಕೆ, ಕೃತಕ ಉಸಿರಾಟದಲ್ಲಿರುವವರಿಗೆ ಇನ್ಷೂರೆನ್ಸ್ ಕವರೇಜ್ ಸಿಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎಬಿ ಜೆಎವೈ ಇನ್ಷೂರೆನ್ಸ್ ಸ್ಕೀಮ್ನ ಹೆಚ್ಚಿನ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ: pmjay.gov.in/
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ