ಬ್ಯಾಂಕ್ ಆಫ್ ಬರೋಡಾದಲ್ಲಿ ಠೇವಣಿ ದರ ಹೆಚ್ಚಳ; ಬೇರೆ ಬ್ಯಾಂಕುಗಳಲ್ಲಿ ಎಷ್ಟಿವೆ ಎಫ್​ಡಿ ಬಡ್ಡಿದರಗಳು?

|

Updated on: Oct 10, 2023 | 11:06 AM

Bank of Baroda FD Rates Hike: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದಲ್ಲಿ 3 ವರ್ಷದವರೆಗಿನ ವಿವಿಧ ಅವಧಿಗೆ ಎಫ್​ಡಿ ದರಗಳನ್ನು ಅರ್ಧಪ್ರತಿಶತದಷ್ಟು ಹೆಚ್ಚಿಸಲಾಗಿದೆ. 2ರಿಂದ 3 ವರ್ಷ ಅವಧಿಯ ಎಫ್​ಡಿ ಇಡುವ ಹಿರಿಯ ನಾಗರಿಕರು ಶೇ. 7.9ರಷ್ಟು ಬಡ್ಡಿ ಪಡೆಯಬಹುದು. ಸಣ್ಣ ಬ್ಯಾಂಕು, ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿದರೆ, ಪ್ರಮುಖ ವಾಣಿಜ್ಯ ಬ್ಯಾಂಕುಗಳಿಗಿಂತ ಬಿಒಬಿಯಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಠೇವಣಿ ದರ ಹೆಚ್ಚಳ; ಬೇರೆ ಬ್ಯಾಂಕುಗಳಲ್ಲಿ ಎಷ್ಟಿವೆ ಎಫ್​ಡಿ ಬಡ್ಡಿದರಗಳು?
ಬ್ಯಾಂಕು
Follow us on

ನವದೆಹಲಿ, ಅಕ್ಟೋಬರ್ 10: ಬ್ಯಾಂಕ್ ಆಫ್ ಬರೋಡಾದಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿದರಗಳು (Bank of Baroda fd rates) ಹೆಚ್ಚಾಗಿವೆ. ಬ್ಯಾಂಕ್​ನಿಂದ ಬಿಡುಗಡೆ ಆಗಿರುವ ಹೇಳಿಕೆ ಪ್ರಕಾರ 50 ಮೂಲಾಂಕಗಳಷ್ಟು ಬಡ್ಡಿದರ ಹೆಚ್ಚಳಗೊಂಡಿದೆ. 2 ಕೋಟಿ ರೂ ಒಳಗಿನ ಮತ್ತು 3 ವರ್ಷದವರೆಗಿನ ವಿವಿಧ ಅವಧಿಗಳ ಠೇವಣಿಗಳಿಗೆ ಬಡ್ಡಿ ಕಡಿಮೆ ಆಗಿದೆ. ಸಾಮಾನ್ಯ ಗ್ರಾಹಕರಿಗೆ ಗರಿಷ್ಠ ಶೇ. 7.40ರವರೆಗೂ ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.9ರವರೆಗೂ ಬಡ್ಡಿ ನೀಡಲಾಗುತ್ತದೆ. ಅವಧಿಗೆ ಮುನ್ನ ಹಿಂಪಡೆಯಲು ಅವಕಾಶ ಇಲ್ಲದಂತಹ ಠೇವಣಿಗಳಿಗೆ 15 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಪ್ರಾಪ್ತವಾಗುತ್ತದೆ. ಈ ಸ್ಕೀಮ್​ನಲ್ಲಿ ಹಿರಿಯ ನಾಗರಿಕರು ತಮ್ಮ ಠೇವಣಿಗಳಿಗೆ ಶೇ. 8.05ರಷ್ಟು ಬಡ್ಡಿ ಪಡೆಯಬಹುದು. ಅಕ್ಟೋಬರ್ 9ರಿಂದಲೇ ಹೊಸ ಎಫ್​ಡಿ ದರಗಳು ಜಾರಿಗೆ ಬರುತ್ತವೆ.

ಸಹಕಾರಿ ಬ್ಯಾಂಕುಗಳನ್ನು (cooperative banks) ಬಿಟ್ಟರೆ ಬೇರಾವುದೇ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಎಫ್​ಡಿಗಳಿಗೆ ಇಷ್ಟು ಬಡ್ಡಿ ಸಿಗುವುದಿಲ್ಲ. ಎಸ್​ಬಿಐನಲ್ಲಿ ಸರ್ವೋತ್ತಮ್ ಸ್ಕೀಮ್​ನಲ್ಲಿ ಹಿರಿಯ ನಾಗರಿಕರು ಶೇ. 7.9ರವರೆಗೆ ಬಡ್ಡಿ ಪಡೆಯಲು ಅವಕಾಶ ಇದೆ. ಆದರೆ ಇದು 15 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಠೇವಣಿಗೆ ಮಾತ್ರ ಅವಕಾಶ ಇದೆ. ಇನ್ನು, ಎಸ್​ಬಿಐನ ಜನಪ್ರಿಯ ಎಫ್​ಡಿ ಸ್ಕೀಮ್ ಆದ ಅಮೃತ್ ಕಳಶ್ ಯೋಜನೆಯಲ್ಲಿ ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ಪಡೆಯಬಹುದು. ಆದರೆ, ಬ್ಯಾಂಕ್ ಆಫ್ ಬರೋಡಾದಲ್ಲಿ ಇದಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್, ಬಹಳ ಸರಳ ಹಾಗೂ ಸುರಕ್ಷಿತ ಸ್ಕೀಮ್; ವರ್ಷಕ್ಕೆ ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿ ಕೊಡಬಲ್ಲುದು ಆರ್​ಡಿ

ಬೇರೆ ಬೇರೆ ಬ್ಯಾಂಕುಗಳಲ್ಲಿ ಗರಿಷ್ಠ ಬಡ್ಡಿದರ ನೀಡುವ ಎಫ್​ಡಿಗಳು

  • ಬ್ಯಾಂಕ್ ಆಫ್ ಬರೋಡಾ: 2ರಿಂದ 5 ವರ್ಷದ ಅವಧಿಯ ಠೇವಣಿಗೆ ಶೇ. 7.9 ರಷ್ಟು ಬಡ್ಡಿ
  • ಎಸ್​ಬಿಐ: 400 ದಿನಗಳ ಠೇವಣಿಗೆ (ಅಮೃತ್ ಕಳಶ್ ಸ್ಕೀಮ್) ಶೇ. 7.60ಯಷ್ಟು ಬಡ್ಡಿ
  • ಎಚ್​ಡಿಎಫ್​ಸಿ ಬ್ಯಾಂಕ್: 5ರಿಂದ 10 ವರ್ಷದ ಠೇವಣಿಗಳಿಗೆ ಶೇ. 7.75ರಷ್ಟು ಬಡ್ಡಿ
  • ಐಸಿಐಸಿಐ ಬ್ಯಾಂಕ್: 15 ತಿಂಗಳಿಂದ 2 ವರ್ಷದವರೆಗಿನ ವಿವಿಧ ಅವಧಿಗಳ ಠೇವಣಿಗಳಿಗೆ ಶೇ. 7.60ಯಷ್ಟು ಬಡ್ಡಿ
  • ಪಂಜಾಬ್ ನ್ಯಾಷನಲ್ ಬ್ಯಾಂಕ್: 2ರಿಂದ 3 ವರ್ಷದ ಅವಧಿಯ ಠೇವಣಿಗಳಿಗೆ ಶೇ. 7.50ರಷ್ಟು ಬಡ್ಡಿ

ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲದಿದ್ದರೆ ದಂಡ ಎಷ್ಟು ಕಟ್ಟಬೇಕು? ಶೂನ್ಯ ಬ್ಯಾಲನ್ಸ್ ಇದ್ದರೆ ಏನಾಗುತ್ತದೆ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಮೇಲೆ ನೀಡಲಾಗಿರುವ ಎಫ್​ಡಿ ದರಗಳು ಹಿರಿಯ ನಾಗರಿಕರ ಠೇವಣಿಗಳಿಗೆ ಸಿಗುವಂಥವು. ಇದೇ ಅವಧಿಗೆ ಸಾಮಾನ್ಯ ನಾಗರಿಕರು ಇರಿಸುವ ಠೇವಣಿಗಳಿಗೆ 50 ಬೇಸಿಸ್ ಅಂಕಗಳಷ್ಟು ಕಡಿಮೆ ಬಡ್ಡಿ ಸಿಗುತ್ತದೆ. ಬಹುತೇಕ ಎಲ್ಲಾ ಪ್ರಮುಖ ವಾಣಿಜ್ಯ ಬ್ಯಾಂಕುಗಳಿಗಿಂತ ಬಿಒಪಿ ಹೆಚ್ಚು ಬಡ್ಡಿ ಒದಗಿಸುತ್ತದೆ.

ಇನ್ನು, ಸಹಕಾರಿ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಠೇವಣಿ ದರಗಳು ಅಧಿಕ ಇರುತ್ತವೆ. ಶೇ. 9.5ರವರೆಗೂ ಬಡ್ಡಿ ನಿರೀಕ್ಷಿಸಬಹುದು. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರ 2ರಿಂದ 3 ವರ್ಷದ ಅವಧಿಯ ಠೇವಣಿಗಳಿಗೆ ಶೇ. 9.1ರಷ್ಟು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ