
ನವದೆಹಲಿ, ಮೇ 5: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಗೃಹಸಾಲಗಳ ದರಗಳನ್ನು (Home loan rates) ಇಳಿಸಿದೆ. ಕಳೆದ ತಿಂಗಳು ಆರ್ಬಿಐ ರಿಪೋ ದರ ಇಳಿಸಿದ ಬೆನ್ನಲ್ಲೇ ಬಿಒಬಿ ತನ್ನ ಸಾಲದ ದರಗಳನ್ನು ಕಡಿಮೆಗೊಳಿಸಿದೆ. ಗೃಹಸಾಲಗಳಿಗೆ ಅದು ಈ ಮೊದಲು ವರ್ಷಕ್ಕೆ ವಿಧಿಸುತ್ತಿದ್ದ ಬಡ್ಡಿದರ ಶೇ. 8.40ರಿಂದ ಆರಂಭವಾಗುತ್ತಿತ್ತು. ಈಗ ಈ ಕನಿಷ್ಠ ಬಡ್ಡಿದರವನ್ನು ಶೇ. 8ಕ್ಕೆ ಇಳಿಸಿದೆ. ಹೊಸ ಮನೆಗಳಿಗೆ ಸಾಲ ಹಾಗೂ ಗೃಹ ನವೀಕರಣಕ್ಕೆ ಸಾಲಗಳಿಗೆ ಈ ಹೊಸ ದರಗಳು ಅನ್ವಯ ಆಗುತ್ತವೆ.
15 ಲಕ್ಷ ರೂಗೂ ಮೇಲ್ಪಟ್ಟ ಸಾಲಗಳಿಗೆ ಹೊಸ ಬಡ್ಡಿದರ ಅನ್ವಯ ಆಗುತ್ತದೆ. 40 ವರ್ಷದೊಳಗಿನ ವಯಸ್ಸಿನ ಯುವಜನರಿಗೆ 10 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆ ಮಾಡಲಾಗುತ್ತದೆ. ಮಹಿಳೆಯರಾದರೆ 5 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆ ಮಾಡಲಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಇಂದು ಸೋಮವಾರ (ಮೇ 5) ಹೇಳಿದೆ.
ಇದನ್ನೂ ಓದಿ: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ
ಇಲ್ಲಿ ಬ್ಯಾಂಕ್ ಆಫ್ ಬರೋಡಾ ಹೇಳಿದ ಶೇ. 8ರ ಬಡ್ಡಿದರವು ಎಲ್ಲರಿಗೂ ಅನ್ವಯ ಆಗುವುದಿಲ್ಲ. ನೀವು ಮನೆಪತ್ರವನ್ನು ಅಡಮಾನವಾಗಿ ಇಟ್ಟರೂ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರವಾಗಿ ಬಡ್ಡಿದರವನ್ನು ಬ್ಯಾಂಕ್ ನಿರ್ಧರಿಸುತ್ತದೆ. ಕ್ರೆಡಿಟ್ ಸ್ಕೋರ್ ಅತ್ಯುತ್ತಮ ಸ್ಥಿತಿಯಲ್ಲಿ ಇದ್ದು, ನಿಮ್ಮ ಸಾಲ ತೀರಿಸುವಿಕೆಯ ಶಕ್ತಿ ಬಗ್ಗೆ ಬ್ಯಾಂಕ್ಗೆ ವಿಶ್ವಾಸ ಬಂದಲ್ಲಿ ಶೇ. 8ರ ವಾರ್ಷಿಕ ಬಡ್ಡಿದರದಲ್ಲಿ ಗೃಹ ಸಾಲ ಸಿಗುತ್ತದೆ.
ಬ್ಯಾಂಕ್ ಆಫ್ ಬರೋಡಾ ‘ಹೋಮ್ ಲೋನ್ ಬ್ಯಾಲನ್ಸ್ ಟ್ರಾನ್ಸ್ಫರ್’ ಸ್ಕೀಮ್ ಅನ್ನು ಆಫರ್ ಮಾಡಿದೆ. ಹೆಚ್ಚಿನ ಬಡ್ಡಿದರ ಇರುವ ಇತರ ಬ್ಯಾಂಕು ಹಾಗೂ ಎನ್ಬಿಎಫ್ಸಿಗಳಲ್ಲಿ ಗೃಹಸಾಲ ಇದ್ದರೆ ಅದನ್ನು ಬ್ಯಾಂಕ್ ಆಫ್ ಬರೋಡಾಗೆ ವರ್ಗಾಯಿಸಲು ಅವಕಾಶ ಇದೆ. ಇದರ ಪ್ರಕ್ರಿಯೆ ಕೂಡ ಸರಳವಾಗಿರುವುದರಿಂದ ಗ್ರಾಹಕರಿಗೆ ತಲೆನೋವು ಕಡಿಮೆ.
ಇದನ್ನೂ ಓದಿ: ಆರ್ಬಿಐ ಬಡ್ಡಿದರ ಕಡಿತದ ಬಳಿಕ ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್ಡಿ ದರಗಳಿವು
ಬ್ಯಾಂಕ್ ಆಫ್ ಬರೋಡಾ ಭಾರತದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದು. ಭಾರತದಾದ್ಯಂತ ಸುಮಾರು 10,000 ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲೇ ನೂರಕ್ಕೂ ಹೆಚ್ಚು ಬ್ರ್ಯಾಂಚ್ಗಳಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Mon, 5 May 25