4% Rule: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ

How much money needed for retirement planning: ಭವಿಷ್ಯದ ಬಗ್ಗೆ ಯಾವ ಭಯ ಇಲ್ಲದೆ ನಿಶ್ಚಿಂತೆಯಿಂದ ಇರಬೇಕೆಂದರೆ ಎಷ್ಟು ಹಣ ಬೇಕಾಗಬಹುದು? ಗರಿಷ್ಠ ಹಣಕ್ಕೆ ಮಿತಿ ಇಲ್ಲ. ಆದರೆ, ಕನಿಷ್ಠ ಹಣ ಎಷ್ಟು ಬೇಕು ಎಂದು ತಿಳಿಯಲು 4 ಪರ್ಸೆಂಟ್ ಸೂತ್ರ ಮುಂದಿಡುತ್ತಾರೆ ತಜ್ಞರು. ನೀವು ನಿವೃತ್ತರಾದಾಗ ನಿಮ್ಮ ಬಳಿ ಇರುವ ಹಣವು ನಿಮ್ಮ ವಾರ್ಷಿಕ ವೆಚ್ಚಕ್ಕಿಂತ 25 ಪಟ್ಟು ಹೆಚ್ಚು ಇದ್ದಲ್ಲಿ ಆಗ ಹಣಕಾಸು ಸ್ಥಿತಿ ಭದ್ರವಾಗಿರಬಹುದು.

4% Rule: ನಿಮ್ಮ ಹಣಕಾಸು ಭವಿಷ್ಯ ಭದ್ರವಾ? ಖಾತ್ರಿಪಡಿಸಲು ಬಳಸಿ ಈ 4 ಪರ್ಸೆಂಟ್ ಸೂತ್ರ
ಹಣ

Updated on: May 05, 2025 | 11:38 AM

ಸರ್ಕಾರಿ ನೌಕರರಿಗೆ ತಾವು ನಿವೃತ್ತರಾದರೆ ಎಷ್ಟು ಪಿಂಚಣಿ ಸಿಗುತ್ತೆ, ತಮ್ಮ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಿಕೊಳ್ಳಲು ಅವಕಾಶ ಇರುತ್ತದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಹೂಡಿಕೆ ಪ್ಲಾನಿಂಗ್ ಇಟ್ಟುಕೊಂಡಿರುವವರು ಭವಿಷ್ಯಕ್ಕೆ ಒಂದಷ್ಟು ಸೇವಿಂಗ್ಸ್ ಮಾಡಿಕೊಳ್ಳಬಹುದು. ಆದರೆ, ಹೆಚ್ಚಿನವರು ದಿಕ್ಕೆಟ್ಟ ಸ್ಥಿತಿಯಲ್ಲಿರುತ್ತಾರೆ. ನಿಮ್ಮ ಭವಿಷ್ಯದ ಹಣಕಾಸು ಸ್ಥಿತಿ (Financial stability) ಹೇಗಿರಬೇಕು, ಎಷ್ಟು ಹಣ ಇದ್ದರೆ ಕ್ಷೇಮ ಎಂಬ ಪ್ರಶ್ನೆ ಪ್ರಮುಖವಾಗಿ ಉದ್ಭವಿಸುತ್ತದೆ. ಆದರೆ, ಇಷ್ಟೇ ಹಣ ಬೇಕು ಎಂದು ನಿರ್ಧರಿಸಲು ಆಗೋದಿಲ್ಲ. ಆದರೂ ಹಣಕಾಸು ಭವಿಷ್ಯ ಉತ್ತಮ ಇದೆಯಾ ಇಲ್ಲವಾ ಎಂದು ತಿಳಿಯಲು ಕೆಲ ಸೂತ್ರಗಳಿವೆ. ನಾಲ್ಕು ಪರ್ಸೆಂಟ್ ಸೂತ್ರವೂ ಒಂದು.

ಏನಿದು ನಾಲ್ಕು ಪರ್ಸೆಂಟ್ ಸೂತ್ರ..?

ನಿಮ್ಮ ಬಳಿ ಇರುವ ಒಟ್ಟಾರೆ ಲಿಕ್ವಿಡ್ ಅಸೆಟ್​​ನಲ್ಲಿ ಶೇ. 4ರಷ್ಟು ಭಾಗದ ಹಣವು ನಿಮ್ಮ ವಾರ್ಷಿಕ ವೆಚ್ಚಕ್ಕೆ ಸರಿಹೋಗುತ್ತದೆ ಎಂದಾದಲ್ಲಿ ಆಗ ನಿಮ್ಮ ಹಣಕಾಸು ಪರಿಸ್ಥಿತಿ ಭದ್ರವಾಗಿದೆ ಎಂದು ಭಾವಿಸಬಹುದು. ಸುಲಭವಾಗಿ ನೀವು ರಿಟೈರ್ಮೆಂಟ್ ಆಲೋಚನೆ ಮಾಡಬಹುದು ಎಂದರ್ಥ.

ಇದನ್ನೂ ಓದಿ: 24 ಕ್ಯಾರಟ್ ಚಿನ್ನಗಳಲ್ಲೇ ಬೆಲೆಗಳಲ್ಲಿ ಹೇಗೆ ವ್ಯತ್ಯಾಸ? ಜಿಎಸ್​​ಟಿ ಸೇರಿ ವಿವಿಧ ಹೆಚ್ಚುವರಿ ಬೆಲೆ ಬಗ್ಗೆ ತಿಳಿದಿರಿ

ಇದನ್ನೂ ಓದಿ
ಸಾಲ ಉಪಯೋಗಿಸಿ ಶ್ರೀಮಂತರಾಗೋದು ಹೇಗೆ?
ಷೇರುಪೇಟೆಯಲ್ಲಿ ಗೆಲ್ಲೋದು ಹೇಗೆ? ಶ್ರೀಮಂತರಾಗುವ 7 ಟ್ರಿಕ್ಸ್
ಕ್ರೆಡಿಟ್ ಸ್ಕೋರ್ ಇಲ್ಲದವರಿಗೆ ಸಿಗಲ್ವಾ ಸಾಲ?
ಹಣಕಾಸು ಭದ್ರತೆಗೆ 1% ತಂತ್ರ: ನಿತಿನ್ ಕಾಮತ್

ಆದರೆ, ಇಲ್ಲಿ ನಿಮ್ಮ ಲಿಕ್ವಿಡ್ ಅಸೆಟ್ ಎಂದರೆ ಸೇವಿಂಗ್ಸ್ ಹಣ, ಇನ್ವೆಸ್ಟ್​​ಮೆಂಟ್ ಹಣ ಇತ್ಯಾದಿ. ನಿಮ್ಮಲ್ಲಿ ಯಾವುದೇ ಸಾಲ ಅಥವಾ ಇಎಂಐ ಕಮಿಟ್​​ಮೆಂಟ್ ಇರಕೂಡದು. ಅದು ಬಿಟ್ಟು ನಿಮ್ಮ ಜೀವನಶೈಲಿಗೆ ಅಗತ್ಯವಾಗಿರುವ ವಾರ್ಷಿಕ ವೆಚ್ಚದ ನಿಖರ ಪಟ್ಟಿ ಮಾಡಿಕೊಳ್ಳಿ. ಆಗ ನಿಮಗೊಂದು ಅಂದಾಜು ಸಿಗುತ್ತದೆ.

ನೀವು ನಿವೃತ್ತರಾಗುವ ಮುನ್ನ ಸಾಲಗಳಿಂದ ಮುಕ್ತರಾಗುವುದು ಬಹಳ ಮುಖ್ಯ. ಅದು ಬಿಟ್ಟು ನೀವೆಷ್ಟು ಹಣ ಸಂಪಾದಿಸಿದ್ದೀರಿ ಎಂಬುದು ಮುಖ್ಯ. ಮೇಲೆ ಹೇಳಿದ ನಾಲ್ಕು ಪರ್ಸೆಂಟ್ ಸೂತ್ರದ ಪ್ರಕಾರ ನೀವು ಹಣ ಹೊಂದಿದ್ದೀರಾ ನೋಡಿ. ಅಥವಾ ನಿಮ್ಮ ವಾರ್ಷಿಕ ವೆಚ್ಚದ 25 ಪಟ್ಟು ಹಣ ನಿಮ್ಮಲ್ಲಿ ಇದೆಯಾ ಖಾತ್ರಿಪಡಿಸಿಕೊಳ್ಳಿ.

ಈ ಸೂತ್ರವು ಒಂದು ಅಂದಾಜು ಮಾತ್ರವೇ. ನೀವು ನಿವೃತ್ತರಾದ ಬಳಿಕ 25 ವರ್ಷ ಬದುಕಬಹುದು ಎನ್ನುವ ಅಂದಾಜಿನಲ್ಲಿ ಮಾಡಿರುವ ಸೂತ್ರ. ಒಬ್ಬ ವ್ಯಕ್ತಿಯ ಆಯಸ್ಸು ಕಡಿಮೆಯೇ ಇರಬಹುದು, ಅಥವಾ ಹೆಚ್ಚೇ ಇರಬಹುದು. ವೃದ್ಧಾಪ್ಯದಲ್ಲಿ ರೋಗರುಜಿನಗಳಿಗೆ ಹೆಚ್ಚು ವ್ಯಯವಾಗಬಹುದು. ಹೀಗಾಗಿ, ನಿವೃತ್ತಿಗೆ ಮುನ್ನ ಈ ಕೆಳಗಿನ ಪ್ಲಾನಿಂಗ್ ಖಂಡಿತ ಮಾಡಿ:

ಇದನ್ನೂ ಓದಿ: 1 ಪರ್ಸೆಂಟ್ ತಂತ್ರ: ಇದು ಹಣಕಾಸು ಭದ್ರತೆಗೆ ನಿತಿನ್ ಕಾಮತ್ ಸೂತ್ರ

  • ಸಾಲಗಳಿಂದ ಮುಕ್ತರಾಗಿರಬೇಕು
  • ನಿಮಗೆ ಹಾಗೂ ಅವಲಂಬಿತರಿಗೆ ಹೆಲ್ತ್ ಇನ್ಷೂರೆನ್ಸ್ ಇರಬೇಕು
  • ನಿಮ್ಮ ದೈನಂದಿನ ಖರ್ಚು, ಇನ್ಷೂರೆನ್ಸ್ ಪ್ರೀಮಿಯಮ್ ಇತ್ಯಾದಿ ಎಲ್ಲವೂ ಸೇರಿ ವಾರ್ಷಿಕ ವೆಚ್ಚಕ್ಕಿಂತ 25 ಪಟ್ಟು ಹೆಚ್ಚು ಹಣವಂತರಾಗಿರಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ