ಈಗ ಹಬ್ಬದ ಸೀಸನ್ ಇದೆ. ನವರಾತ್ರಿಯೂ ಶುರುವಾಗಿದೆ. ದೀಪಾವಳಿವರೆಗೂ ಸೀಸನ್ (festival season) ಮುಂದುವರಿಯುತ್ತದೆ. ಅಮೇಜಾನ್, ಫ್ಲಿಪ್ಕಾರ್ಟ್ಗಳಲ್ಲಿ ಶೇ. 70ರವರೆಗೂ ಡಿಸ್ಕೌಂಟ್ಗಳನ್ನು ನೋಡಬಹುದು. ಸಾಕಷ್ಟು ಕ್ಯಾಷ್ಬ್ಯಾಕ್ಗಳನ್ನೂ ಪಡೆಯಬಹುದು. ಅಮೇಜಾನ್ನ ಗ್ರೇಟ್ ಇಂಡಿಯಾ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ನ ಬಿಗ್ ಬಿಲಿಯನ್ ಡೇಸ್ ಸೇಲ್ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ ವಹಿವಾಟು ನಡೆಯುತ್ತವೆ. ಇ-ಕಾಮರ್ಸ್ ಪ್ಲಾಟ್ಫಾರ್ಮ್ ಮಾತ್ರವಲ್ಲ, ವಿವಿಧ ಮಳಿಗೆಗಳಲ್ಲೂ ಫೆಸ್ಟಿವಲ್ ಆಫರ್ಗಳು ರಾರಾಜಿಸುತ್ತಿವೆ.
ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಬಹಳಷ್ಟು ಕ್ಯಾಷ್ಬ್ಯಾಕ್ ಆಫರ್ಗಳನ್ನು ಕಾಣಬಹುದು. ಕೆಲ ನಿರ್ದಿಷ್ಟ ವರ್ಗದ ಉತ್ಪನ್ನಗಳಿಗೆ ಈ ಕ್ಯಾಷ್ಬ್ಯಾಕ್ ಹೆಚ್ಚು ಸೀಮಿತವಾಗಿರಬಹುದು. ಕ್ಯಾಷ್ಬ್ಯಾಕ್ ಆಸೆಗೆ ಬಿದ್ದು ಉತ್ಪನ್ನ ಖರೀದಿಸುವುದಕ್ಕಿಂತ, ಆ ಉತ್ಪನ್ನ ಉಪಯುಕ್ತ ಎನಿಸಿದಲ್ಲಿ ಮಾತ್ರ ಪಡೆಯಿರಿ. ಇಲ್ಲದಿದ್ದರೆ ಹೊರೆಯಾದೀತು.
ಹಾಗೆಯೇ, ಕ್ಯಾಷ್ ಬ್ಯಾಕ್, ಡಿಸ್ಕೌಂಟ್ ಆಫರ್ಗಳು ಯಾವ್ಯಾವ ಪ್ಲಾಟ್ಫಾರ್ಮ್ಗಳಲ್ಲಿ ಎಷ್ಟೆಷ್ಟು ಇವೆ ಎಂಬುದನ್ನು ಮೊದಲು ಅವಲೋಕಿಸಿ. ಕೆಲವೊಮ್ಮೆ ಐದತ್ತು ರುಪಾಯಿ ಕ್ಯಾಷ್ಬ್ಯಾಕ್ ಬರಬಹುದು. ಬೇರೆ ಇಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಹೆಚ್ಚಿನ ಕ್ಯಾಷ್ಬ್ಯಾಕ್ ಬರಬಹುದು.
ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ಗಳ ಮೂಲಕ ಶಾಪಿಂಗ್ ಮಾಡಿದರೆ ಸಾಕಷ್ಟು ಕ್ಯಾಷ್ಬ್ಯಾಕ್, ಡಿಸ್ಕೌಂಟ್ ಸಿಗುತ್ತದೆ. ಶೇ. 10ರವರೆಗೂ ರಿಯಾಯಿತಿ ಸಿಗಬಹುದು. ಕೆಲ ಪ್ಲಾಟ್ಫಾರ್ಮ್ಗಳಲ್ಲಿ ನಿರ್ದಿಷ್ಟ ಕಂಪನಿಯ ಮತ್ತು ವಿಧದ ಕ್ರೆಡಿಟ್ ಕಾರ್ಡ್ಗೆ ಹೆಚ್ಚಿನ ಆಫರ್ ಕೊಡಬಹುದು. ಶಾಪಿಂಗ್ ಮಾಡುವ ಮುನ್ನ ಇದೆಲ್ಲವನ್ನೂ ಪರಿಶೀಲಿಸಿ.
ಇದನ್ನೂ ಓದಿ: ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲವಾ? ಕ್ರೆಡಿಟ್ ಸ್ಕೋರ್ ಹೋದೀತೆಂಬ ಭಯವಾ? ನಿಮ್ಮ ಮುಂದಿರುವ ಆಯ್ಕೆಗಳು ಇಲ್ಲಿವೆ
ಅಧಿಕ ಮೊತ್ತದ ವಸ್ತುವನ್ನು ಖರೀದಿಸಿದರೆ ಇಎಂಐ ಸೌಲಭ್ಯ ಇರುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಅದನ್ನು ಇಎಂಐ ಆಗಿ ಪರಿವರ್ತಿಸಬಹುದು. ಝೀರೋ ಕಾಸ್ಟ್ ಇಎಂಐ ಎಂದಿರುತ್ತದೆ. ಕೆಲವೊಮ್ಮೆ ಬಡ್ಡಿ ಅಥವಾ ಪ್ರೋಸಸಿಂಗ್ ಶುಲ್ಕ ವಿಧಿಸಬಹುದು. ಹೀಗಾಗಿ, ಅದನ್ನು ವಿಚಾರಿಸಿ ಮುಂದುವರಿಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ