ನವದೆಹಲಿ, ಸೆಪ್ಟೆಂಬರ್ 30: ಇವತ್ತು ಸೋಮವಾರ ಷೇರು ಮಾರುಕಟ್ಟೆ ಸಾಕಷ್ಟು ಹಿನ್ನಡೆ ಕಂಡಿದೆ. ಇದೇ ಹೊತ್ತಲ್ಲಿ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಭಾರತೀಯ ಷೇರು ಮಾರುಕಟ್ಟೆ ಸದ್ಯೋಭವಿಷ್ಯದಲ್ಲಿ ಪ್ರಚಂಡವಾಗಿ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಈ ವರ್ಷಾಂತ್ಯದೊಳಗೆಯೇ ಸೆನ್ಸೆಕ್ಸ್ 1,00,000 ಅಂಕಗಳ ಗಡಿ ದಾಟಲಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ ಸದ್ಯ 84,300 ಆಸುಪಾಸಿನ ಮಟ್ಟದಲ್ಲಿದೆ. ಈ ವರ್ಷಾದ್ಯಂತ ಶೇ. 18ರಷ್ಟು ಏರಿರುವ ಸೆನ್ಸೆಕ್ಸ್, ಕೊನೆಯ ಮೂರು ತಿಂಗಳಲ್ಲಿ ಮತ್ತೆ ಶೇ. 18ರಷ್ಟು ಏರಿಕೆ ಆಗಬಲ್ಲುದಾ? ಮಾರ್ಕ್ ಮೋಬಿಯಸ್ ಪ್ರಕಾರ ಹೌದು.
ಭಾರತದ ಷೇರು ಮಾರುಕಟ್ಟೆ ಬಗ್ಗೆ ಬಹಳಷ್ಟು ಆಶಾದಾಯಕವಾಗಿರುವ ಮಾರ್ಕ್ ಮೋಬಿಯಸ್, ಮಾರ್ಕೆಟ್ ಕರೆಕ್ಷನ್ನಲ್ಲಿ ಒಳ್ಳೆಯ ಷೇರು ಬೆಲೆ ಕಡಿಮೆಗೆ ಸಿಕ್ಕಲ್ಲಿ ಅದನ್ನು ಖರೀದಿಸಿ ಎಂದು ರೀಟೇಲ್ ಹೂಡಿಕೆದಾರರಿಗೆ ಸಲಹೆಯನ್ನೂ ನೀಡಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಒಳ್ಳೆಯ ಕಾಲ. ಕಳೆದ 12 ತಿಂಗಳಲ್ಲಿ ಚಿನ್ನದ ಬೆಲೆ ಶೇ. 18ರಷ್ಟು ಏರಿದೆ. ಬೆಲೆ ಇನ್ನೂ ಹೆಚ್ಚಾಗಲಿದೆ. ಒಬ್ಬ ವ್ಯಕ್ತಿಯ ಹೂಡಿಕೆಯಲ್ಲಿ ಶೇ. 10ರಷ್ಟು ಹೂಡಿಕೆ ಚಿನ್ನದ ಮೇಲಿರಲಿ ಎಂದು ಮೋಬಿಯಸ್ ತಿಳಿಸುತ್ತಾರೆ.
ಇದನ್ನೂ ಓದಿ: 2016-17ರ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ನಿಂದ ಸಿಕ್ಕ ಲಾಭ ಶೇ. 140; ಹೂಡಿಕೆದಾರರ ಕೈಹಿಡಿದ ಚಿನ್ನ
ಮಾರ್ಕ್ ಮೋಬಿಯಸ್ ತಮ್ಮ ಹೂಡಿಕೆ ರಣತಂತ್ರವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಈಗ ನೂರು ಡಾಲರ್ ಹೂಡಿಕೆ ಮಾಡಬೇಕೆಂದಿದ್ದರೆ, ಭಾರತೀಯ ಮಾರುಕಟ್ಟೆಯಲ್ಲಿ ಶೇ. 50, ಚೀನಾ ಮತ್ತು ತೈವಾನ್ ಮಾರುಕಟ್ಟೆಯಲ್ಲಿ ಶೇ. 25, ಟರ್ಕಿ, ವಿಯೆಟ್ನಾಂ ಮತ್ತಿತರ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಶೇ. 25ರಷ್ಟು ಹೂಡಿಕೆ ಮಾಡುತ್ತೇನೆ ಎಂದಿದ್ದಾರೆ. ಹಾಗೆಯೇ, ತಮ್ಮ ಇನ್ವೆಸ್ಟ್ಮೆಂಟ್ ಪೋರ್ಟ್ಫೋಲಿಯೋದಲ್ಲಿ ಶೇ. 10ರಷ್ಟು ಹೂಡಿಕೆ ಚಿನ್ನದ ಮೇಲಿರುವಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಾರೆ ಅವರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ