ಪೋಸ್ಟ್ ಆಫೀಸ್ ಸ್ಕೀಮ್​ಗಿಂತಲೂ ಒಂದೂವರೆ ಪಟ್ಟು ಹೆಚ್ಚು ಆದಾಯ; ಟ್ಯಾಕ್ಸ್ ಕಟ್ಟಬೇಕಿಲ್ಲ; ಇಲ್ಲಿದೆ ಎಸ್​ಡಬ್ಲ್ಯುಪಿ ಟ್ರಿಕ್ಸ್

|

Updated on: Sep 29, 2024 | 6:39 PM

Monthly income from SWP: ಮ್ಯೂಚುವಲ್ ಫಂಡ್​ಗಳು ಸರಾಸರಿಯಾಗಿ ಶೇ. 12ರ ವಾರ್ಷಿಕ ದರದಲ್ಲಿ ರಿಟರ್ನ್ಸ್ ಕೊಡುತ್ತವೆ. ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಮೂಲಕ ನಿಮ್ಮ ಹೂಡಿಕೆಯ ಲಾಭವನ್ನು ನಿಯಮಿತವಾಗಿ ಹಿಂಪಡೆಯುತ್ತಾ ಹೋಗಬಹುದು. 10 ಲಕ್ಷ ರೂ ಬಂಡವಾಳದಲ್ಲಿ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಹೊರೆ ಬೀಳದ ರೀತಿಯಲ್ಲಿ 10,000 ರೂವರೆಗೆ ಮಾಸಿಕ ಆದಾಯ ಸೃಷ್ಟಿಸುವ ಟ್ರಿಕ್ಸ್ ಇಲ್ಲಿದೆ...

ಪೋಸ್ಟ್ ಆಫೀಸ್ ಸ್ಕೀಮ್​ಗಿಂತಲೂ ಒಂದೂವರೆ ಪಟ್ಟು ಹೆಚ್ಚು ಆದಾಯ; ಟ್ಯಾಕ್ಸ್ ಕಟ್ಟಬೇಕಿಲ್ಲ; ಇಲ್ಲಿದೆ ಎಸ್​ಡಬ್ಲ್ಯುಪಿ ಟ್ರಿಕ್ಸ್
ಆದಾಯ
Follow us on

ಇವತ್ತು ಹೆಚ್ಚು ಲಾಭ ತಂದುಕೊಡುವ ಹೂಡಿಕೆಗಳಲ್ಲಿ ಮ್ಯೂಚುವಲ್ ಫಂಡ್ ಮಾರ್ಗವೂ ಒಂದು. ಭಾರತದ ಆರ್ಥಿಕತೆ ಈಗ ಬೆಳವಣಿಗೆಯ ಮಹತ್ತರ ಘಟ್ಟದಲ್ಲಿದೆ. ಅಂತೆಯೇ ಷೇರು ಮಾರುಕಟ್ಟೆ ಕೂಡ ಮಿಂಚಿನಂತೆ ಓಡುತ್ತಿದೆ. ಮ್ಯೂಚುವಲ್ ಫಂಡ್, ಷೇರುಗಳಲ್ಲಿ ಹೂಡಿಕೆ ಮಾಡುವುದು ಬಹಳ ಲಾಭದಾಯಕ ಎನಿಸಿದೆ. ನೀವು ಸ್ಥಿರ ಆದಾಯ ಸೃಷ್ಟಿಸಬೇಕೆಂದಿದ್ದರೆ ಮ್ಯೂಚುವಲ್ ಫಂಡ್ ಬಳಸುವುದು ಸೂಕ್ತ. ಎಸ್​ಐಪಿ ಮೂಲಕ ನೀವು ಹೂಡಿಕೆ ಮಾಡಬಹುದು. ಎಸ್​ಡಬ್ಲ್ಯುಪಿ (Systematic Withdrawal Plan) ಮೂಲಕ ನೀವು ರೆಗ್ಯುಲರ್ ಇನ್ಕಮ್ ಸೃಷ್ಟಿಸಬಹುದು.

ಮ್ಯೂಚುವಲ್ ಫಂಡ್ ಅಥವಾ ಷೇರಿನ ಮೇಲೆ ಕ್ಯಾಪಿಟಲ್ ಗೇಯ್ನ್ ತೆರಿಗೆಗಳಿವೆ. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​​ಗಳಿವೆ. ಎಸ್​ಟಿಸಿಜಿ ಅಥವಾ ಶಾರ್ಟ್ ಟರ್ಮ್ ಟ್ಯಾಕ್ಸ್ ಶೇ. 20ರಷ್ಟಿದೆ. ಎಲ್​ಟಿಸಿಜಿ ಅಥವಾ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ಶೇ. 12.5ರಷ್ಟಿದೆ. ಇದು ನೀವು ಗಳಿಸುವ ಲಾಭಕ್ಕೆ ವಿಧಿಸುವ ತೆರಿಗೆಗಳಾಗಿರುತ್ತವೆ.

ಈ ತೆರಿಗೆಯನ್ನು ಪಾವತಿಸುವ ಅಗತ್ಯ ಇಲ್ಲದೇ ನೀವು ಮ್ಯೂಚುವಲ್ ಫಂಡ್​ನಿಂದ ಹಣ ಹಿಂಪಡೆಯಲು ಅವಕಾಶ ಇದೆ. ಅದಕ್ಕೆ ಒಂದು ಟ್ರಿಕ್ಸ್ ಇದೆ. ನಿಯಮದ ಪ್ರಕಾರವೇ ಮಾಡಬಹುದಾದ ಟ್ರಿಕ್ಸ್ ಇದು.

ಇದನ್ನೂ ಓದಿ: ಇಪಿಎಫ್ ಅಪ್​ಡೇಟ್; ಸಂಬಳ ಮಿತಿ ಹೆಚ್ಚಳ; ನಿವೃತ್ತಿ ವೇಳೆ ಕೋಟ್ಯಾಧಿಪತಿಯಾಗಲು ಸಾಧ್ಯ; ಏನಿದು ವೇಜ್ ಸೀಲಿಂಗ್?

ಹೂಡಿಕೆಯಾಗಿ ಒಂದು ವರ್ಷದೊಳಗೆ ನೀವು ಲಾಭವನ್ನು ಹಿಂಪಡೆದುಕೊಂಡರೆ ಅದಕ್ಕೆ ಶೇ. 20ರಷ್ಟು ಎಸ್​ಟಿಸಿಜಿ ಹಾಕಲಾಗುತ್ತದೆ. ಅದಕ್ಕೂ ಮೇಲಾದರೆ ಶೇ. 12.5ರಷ್ಟು ಎಲ್​ಟಿಸಿಜಿ ಟ್ಯಾಕ್ಸ್ ಇರುತ್ತದೆ. ಹಾಗೆಯೇ, ಎಲ್​ಟಿಸಿಜಿ ವಿಚಾರದಲ್ಲಿ ವರ್ಷದಲ್ಲಿ 1.25 ಲಕ್ಷ ರೂವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಎರಡು ಟ್ರಿಕ್ಸ್ ಉಪಯೋಗಿಸಿ 10,000 ರೂವರೆಗೆ ನೀವು ರೆಗ್ಯುಲರ್ ಇನ್ಕಮ್ ಸೃಷ್ಟಿಸಲು ಸಾಧ್ಯ.

10 ಲಕ್ಷ ರೂ ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ

ನೀವು ಮ್ಯೂಚುವಲ್ ಫಂಡ್ ಎಸ್​ಡಬ್ಲ್ಯುಪಿ ಪ್ಲಾನ್ ಆಯ್ಕೆ ಮಾಡಿಕೊಂಡು 10 ಲಕ್ಷ ರೂ ಹೂಡಿಕೆ ಮಾಡಿರಿ. ಹಣ ಇದ್ದರೆ ಇನ್ನೂ ಹೆಚ್ಚಿನ ಹೂಡಿಕೆ ಮಾಡಬಹುದು. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್​ಗಳು ಸರಾಸರಿಯಾಗಿ ಶೇ. 12ರಷ್ಟು ರಿಟರ್ನ್ ಕೊಡುತ್ತವೆ. ನಿಮಗೆ ಮೊದಲ ವರ್ಷದಲ್ಲಿ 10 ಲಕ್ಷ ರೂ ಹೂಡಿಕೆಗೆ 1.2 ಲಕ್ಷ ಲಾಭ ಬರಬಹುದು. ಈಗ ಪ್ರಾಫಿಟ್ ವಿತ್​ಡ್ರಾ ಮಾಡಿದರೆ ಶೇ. 20ರಷ್ಟು ಎಸ್​ಟಿಸಿಜಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಆದ್ದರಿಂದ ಮೊದಲ ವರ್ಷದ ಸುಮ್ಮನಿದ್ದು ಎರಡನೇ ವರ್ಷದಿಂದ ಪ್ರಾಫಿಟ್ ಹಿಂಪಡೆಯಲು ಆರಂಭಿಸಬಹುದು.

ಇದನ್ನೂ ಓದಿ: POMIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್​ಗಿಂತಲೂ ಹೆಚ್ಚು ಬಡ್ಡಿ

ನೀವು ಎರಡನೇ ವರ್ಷದಿಂದ ತಿಂಗಳಿಗೆ 10,000 ರೂ ಅನ್ನು ಪಡೆಯಬಹುದು. ಆಗ ಅದು ವರ್ಷಕ್ಕೆ ತೆರಿಗೆ ವಿನಾಯಿತಿ ಮಿತಿಯಾದ 1.25 ಲಕ್ಷ ರೂ ಒಳಗೆ ಬರುತ್ತದೆ. ಈ ಮೂಲಕ ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ನಿಂದ ಬಚಾವಾಗಬಹುದು.

ಪೋಸ್ಟ್ ಆಫೀಸ್ ಸ್ಕೀಮ್​ಗಿಂತಲೂ ಬೆಟರ್

ನೀವು ಅಂಚೆ ಕಚೇರಿಯ ಮಂಥ್ಲಿ ಇನ್ಕಮ್ ಸ್ಕೀಮ್​ನಲ್ಲಿ 9 ಲಕ್ಷ ರೂ ಹೂಡಿಕೆ ಮಾಡಿದರೆ ತಿಂಗಳಿಗೆ ಬರುವ ಆದಾಯ ಐದೂವರೆ ಸಾವಿರ ರೂಗಿಂತಲೂ ಕಡಿಮೆ. ಇದಕ್ಕೆ ಹೋಲಿಸಿದರೆ ಮ್ಯೂಚುವಲ್ ಫಂಡ್​ನ ಎಸ್​ಡಬ್ಲ್ಯುಪಿ ಯೋಜನೆ ಒಂದೂವರೆ ಪಟ್ಟು ಹೆಚ್ಚು ರಿಟರ್ನ್ ತಂದುಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ