ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಇಂದು (ಜುಲೈ 31) ಕೊನೆಯ ದಿನವಾಗಿದೆ. ಸಂಬಳದಾರರಾಗಿರುವ ಮತ್ತು ಆಡಿಟಿಂಗ್ (Non-auditing case) ನಡೆಸುವ ಅಗತ್ಯ ಇಲ್ಲದಿರುವ ತೆರಿಗೆ ಪಾವತಿದಾರರಿಗೆ ಇವತ್ತು ಡೆಡ್ಲೈನ್ ಇರುವುದು. ಆದಾಯ ತೆರಿಗೆ ಇಲಾಖೆಯ ಇಫೈಲಿಂಗ್ ಪೋರ್ಟಲ್ನಲ್ಲಿರುವ ಮಾಹಿತಿ ಪ್ರಕಾರ ಈವರೆಗೆ (ಜುಲೈ 31ರ ಬೆಳಗ್ಗೆ) 6.13 ಕೋಟಿ ಮಂದಿ ಐಟಿಆರ್ ಸಲ್ಲಿಕೆ (ITR Filing) ಮಾಡಿದ್ದಾರೆ. ಇಲಾಖೆ ನಿಮ್ಮ ಮಧ್ಯಾಹ್ನ ನೀಡಿದ ಮಾಹಿತಿ ಪ್ರಕಾರ ಐಟಿಆರ್ಗಳು ಸಲ್ಲಿಯಾದ ಪ್ರಮಾಣ 5.83 ಕೋಟಿ ಇತ್ತು. ಮಧ್ಯಾಹ್ನ 1 ಗಂಟೆ ಬಳಿಕ 30 ಲಕ್ಷಕ್ಕೂ ಹೆಚ್ಚು ಮಂದಿ ರಿಟರ್ನ್ ಫೈಲ್ ಮಾಡಿದ್ದಾರೆ.
ಒಂದು ವೇಳೆ ಇಲಾಖೆ ನಿಗದಿಪಡಿಸಿದ ಗಡುವಿನೊಳಗೆ ನೀವು ಐಟಿ ರಿಟರ್ನ್ ಸಲ್ಲಿಸದಿದ್ದರೆ ಕೆಲ ಪ್ರಮುಖ ನಷ್ಟಗಳು ತಲೆದೋರಬಹುದು. ಉದಾಹರಣೆಗೆ ನೀವು ತಡವಾಗಿ ರಿಟರ್ನ್ ಫೈಲ್ ಮಾಡಿದಾಗ, ತೆರಿಗೆ ಬಾಕಿ ಹಣಕ್ಕೆ ಶೇ. 50ರಿಂದ ಶೇ. 200ರಷ್ಟು ಮೊತ್ತವನ್ನು ಸೇರಿಸಿ ದಂಡವಾಗಿ ಕಟ್ಟಬೇಕಾಗುತ್ತದೆ. ನೀವು 2,000 ರೂ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ 1,000 ರೂನಿಂದ 4,000 ರೂವರೆಗೆ ದಂಡ ಸೇರಿಸಿ ಕಟ್ಟಬೇಕು. ಅಂದರೆ 3,000 ರೂನಿಂದ 6,000 ರೂವರೆಗೂ ನೀವು ಕಟ್ಟಬೇಕಾಗಬಹುದು.
ಹಾಗೆಯೇ, ನೀವು ಡೆಡ್ಲೈನ್ ತಪ್ಪಿಸಿದಾಗ ಕಾನೂನು ಕ್ರಮ ಜರುಗಿಸಲು ನೋಟೀಸ್ ಕೊಡಲಾಗುತ್ತದೆ.
ಇದನ್ನೂ ಓದಿ: IT Notice: ಐಟಿ ನೋಟೀಸ್ ಬಂದಾಗ ಗಾಬರಿಯಾಗದಿರಿ; ಏನು ಮಾಡಬೇಕು, ಮಾಡಬಾರದು, ಇಲ್ಲಿದೆ ವಿವರ
2022-23 ರ ಹಣಕಾಸು ವರ್ಷದಲ್ಲಿ ನೀವು ಕಟ್ಟಬೇಕಿರುವ ತೆರಿಗೆ ಹಣಕ್ಕೆ ಶೇ. 200ರಷ್ಟು ದಂಡ ವಿಧಿಸಲಾಗುತ್ತದೆ.
ನಿಮಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟವಾಗಿದ್ದರೆ ಅದನ್ನು ಬಳಸಿ ತೆರಿಗೆ ರಿಯಾಯಿತಿ ಪಡೆಯಲು ಅವಕಾಶ ಇರುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡದೇ ಹೋದಾಗ ಈ ನಷ್ಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ.
ಜೊತೆಗೆ, ಐಟಿ ಇಲಾಖೆಯಿಂದ ಕಾನೂನು ಕ್ರಮ ಜಾರಿಗೊಳಿಸಲು ನೋಟೀಸ್ ಸ್ವೀಕರಿಸಬೇಕಾಗುತ್ತದೆ.
ಇದನ್ನೂ ಓದಿ: ITR: ಹೊಸ ಪೋರ್ಟಲ್ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವುದು ಬಹಳ ಸುಲಭ; ಯಾರೂ ಬೇಕಾದರೂ ಐಟಿಆರ್ ಸಲ್ಲಿಕೆ ಮಾಡುವಷ್ಟು ಸರಳ ಕ್ರಮಗಳು
ಕಳೆದ ಹಣಕಾಸು ವರ್ಷದಂದು (2022-23) ನಿಮ್ಮ ಒಟ್ಟಾರೆ ಎಲ್ಲಾ ಆದಾಯಗಳು, ಹೂಡಿಕೆಗಳು, ಸಾಲಗಳು ಇತ್ಯಾದಿಯನ್ನು ನೀವು ಘೋಷಿಸಲು ಐಟಿಆರ್ ಸಲ್ಲಿಸಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಅಥವಾ ಹೆಚ್ಚಾಗಿ ತೆರಿಗೆ ಕಟ್ಟಿದ್ದರೆ ಅದನ್ನು ಕ್ಲೈಮ್ ಮಾಡಿಕೊಳ್ಳುವ ಅವಕಾಶವೂ ಇರುತ್ತದೆ.
ಐಟಿ ರಿಟರ್ನ್ ಸಲ್ಲಿಸುವುದು ಹಲವು ಕಾರಣಗಳಿಗೆ ಅಗತ್ಯ ಎನಿಸಿದೆ. ಬ್ಯಾಂಕ್ ಸಾಲದಿಂದ ಹಿಡಿದು ಹಲವು ಕಾರ್ಯಗಳಿಗೆ ಐಟಿಆರ್ಗಳನ್ನು ಕೇಳಲಾಗುತ್ತದೆ. ನಿಮ್ಮ ಆದಾಯವು ತೆರಿಗೆ ವಿಂಗಡಣೆಯಿಂದ ಹೊರತಾಗಿದ್ದರೂ ಕೂಡ ಐಟಿಆರ್ ಸಲ್ಲಿಸಲು ಅಡ್ಡಿ ಇಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Mon, 31 July 23