ಆರ್ಡಿ ಎಂದೇ ಚಿರಪರಿಚಿತವಾಗಿರುವ ರೆಕರಿಂಗ್ ಡೆಪಾಸಿಟ್ ಸ್ಕೀಮ್ (Recurring deposit plan) ಬಹಳ ಸಾಮಾನ್ಯವಾಗಿ ಬಳಕೆಯಾಗುವ ಉಳಿತಾಯ ಮತ್ತು ಹೂಡಿಕೆ ಯೋಜನೆ (Investment Scheme) ಆಗಿದೆ. ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಕಟ್ಟುವ ಮೂಲಕ ನೀವು ಹಣ ಉಳಿತಾಯ ಮಾಡಬಹುದು. ಅದೇ ವೇಳೆ ಹೂಡಿಕೆಯನ್ನು ಬೆಳೆಸಬಹುದು. ಇದು ಬಹಳ ಸರಳ ಹಾಗೂ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಪಿಪಿಎಫ್, ಎನ್ಎಸ್ಸಿ, ಕೆವಿಪಿ, ಬ್ಯಾಂಕ್ ಎಫ್ಡಿ ಇತ್ಯಾದಿ ಇತರ ಹೂಡಿಕೆ ಯಂತ್ರಗಳಲ್ಲಿ ಸಿಗುವಷ್ಟೇ ರಿಟರ್ನ್ ಆರ್ಡಿಯಿಂದಲೂ ಪಡೆಯಬಹುದು. ನಿಯಮಿತವಾಗಿ ಹಣ ಹೂಡಿಕೆ ಮಾಡುವುದರಿಂದ ಹೆಚ್ಚು ಅನುಕೂಲಗಳನ್ನು ಒದಗಿಸುತ್ತದೆ. ನಿಮ್ಮ ಮಧ್ಯಮ, ದೀರ್ಘಾವಧಿ ಹಣಕಾಸು ಗುರಿಗಳಿಗೆ ತಕ್ಕಂತೆ ಆರ್ಡಿಯನ್ನು ಆರಂಭಿಸಬಹುದು.
ಇದನ್ನೂ ಓದಿ: ನಿವೃತ್ತಿ ಬಳಿಕ ಪಿಂಚಣಿ ಸಿಗಲ್ಲವಾ? ವೃದ್ಧಾಪ್ಯದಲ್ಲಿ ಉತ್ತಮ ಮಾಸಿಕ ಆದಾಯ ಸೃಷ್ಟಿಸಲು ಏನು ಮಾಡಬೇಕು?
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಪೈಕಿ ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕುಗಳು ಶೇ. 6.70ರಷ್ಟು ಬಡ್ಡಿ ನೀಡುತ್ತವೆ. ಇತರ ಬಹುತೇಕ ಬ್ಯಾಂಕುಗಳು ಶೇ. 6.50ರಷ್ಟು ಬಡ್ಡಿ ನೀಡುತ್ತವೆ. ಪೋಸ್ಟ್ ಆಫೀಸ್ನಲ್ಲೂ ರೆಕರಿಂಗ್ ಡೆಪಾಸಿಟ್ ಸ್ಕೀಮ್ ಇದ್ದು, ಅಲ್ಲಿಯೂ ಶೇ. 6.50ರಷ್ಟು ಬಡ್ಡಿ ಸಿಗುತ್ತದೆ.
ಇನ್ನು, ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಸ್ಕೀಮ್ಗಳಿಗೆ ಅತಿಹೆಚ್ಚು ಬಡ್ಡಿ ಇರುತ್ತದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇತ್ಯಾದಿ ಕಡೆ ಶೇ. 8ಕ್ಕಿಂತಲೂ ಹೆಚ್ಚು ವಾರ್ಷಿಕ ರಿಟರ್ನ್ ಇರುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಕಟ್ಟದೇ ಲ್ಯಾಪ್ಸ್ ಆಗಿದೆಯಾ? ಮರುಚಾಲನೆಗೆ ಡಂಡಕಟ್ಟಬೇಕಾ? ಈ ವಿವರ ಓದಿ
ಖಾಸಗಿ ಬ್ಯಾಂಕುಗಳಲ್ಲಿ ಹೆಚ್ಚಿನವು ಆರ್ಡಿ ಠೇವಣಿಗಳಿಗೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ. ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಡಿಸಿಬಿ ಬ್ಯಾಂಕ್, ಐಸಿಐಸಿಐ, ಐಡಿಎಫ್ಸಿ ಮೊದಲಾದ ಬ್ಯಾಂಕುಗಳಲ್ಲಿ ಶೇ. 7 ಹಾಗೂ ಅದಕ್ಕಿಂತಲೂ ಹೆಚ್ಚು ಬಡ್ಡಿ ಕೊಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ