ಹಣ ಮಾಡುವ ಸಿಂಪಲ್ ಸೂತ್ರ ಎಂದರೆ, ಆದಾಯ ಹೆಚ್ಚಿಸಬೇಕು, ಖರ್ಚು ತಗ್ಗಿಸಬೇಕು, ಉಳಿತಾಯ ಹೆಚ್ಚಿಸಬೇಕು, ಹೂಡಿಕೆ ಹೆಚ್ಚಿಸಬೇಕು. ಈ ನಾಲ್ಕು ಅಂಶಗಳನ್ನು (Financial Tips) ಗಮನದಲ್ಲಿಟ್ಟುಕೊಂಡರೆ ಬಹಳ ಬೇಗ ಸಿರಿವಂತರಾಗಬಹುದು. ಹೇಳುವುದು ಸುಲಭ, ಆದರೆ, ಆಚರಣೆಗೆ ತರುವುದು ಕಷ್ಟವೇ. ಈ ನಾಲ್ಕು ಸೂತ್ರಗಳು ನಮ್ಮ ದೈನಂದಿನ ಆಲೋಚನೆಯ ಭಾಗವಾದರೆ ಸುಲಭವಾಗುತ್ತದೆ. ನಿಂತಲ್ಲಿ, ಕೂತಲ್ಲಿ ನಿಮ್ಮ ಕಣ್ಮುಂದೆ ಸಿರಿತನದ ಕನಸು ಬಂದು ಹೋಗುತ್ತಿರಬೇಕು. ಈಗ ನೀವು 10 ವರ್ಷದಲ್ಲಿ 1 ಕೋಟಿ ರೂ ಗಳಿಸಬೇಕು ಎಂಬ ಸಂಕಲ್ಪ ತೊಟ್ಟಿದ್ದೀರೆಂದರೆ, ಅದನ್ನು ಸಾಕಾರಗೊಳಿಸಲು ಏನು ಮಾಡಬೇಕು? ಮೇಲಿನ ನಾಲ್ಕು ಅಂಶಗಳನ್ನು ಅಳವಡಿಸುವುದರ ಜೊತೆಗೆ ಹೂಡಿಕೆಯ ಲೆಕ್ಕಾಚಾರವೂ ನಡೆಯಬೇಕು. 10 ವರ್ಷದಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ 1 ಕೋಟಿ ರೂ ಗಳಿಸಲು ಸಾಧ್ಯ ಎಂಬ ಲೆಕ್ಕಾಚಾರ ತಿಳಿದಿರಲಿ.
ಆದರೆ, ಎಲ್ಲಿ ಹೂಡಿಕೆ ಮಾಡುವುದು ಎಂಬುದೇ ಕ್ಲಿಷ್ಟಕರ ಪ್ರಶ್ನೆ. ಈಗ ಅತ್ಯಂತ ಜನಪ್ರಿಯ ಹೂಡಿಕೆ ಸ್ಕೀಮ್ಗಳೆಂದರೆ ಅವು ಮ್ಯೂಚುವಲ್ ಫಂಡ್ ಎಸ್ಐಪಿಗಳು. ಬಹಳಷ್ಟು ಎಸ್ಐಪಿಗಳು (SIP- Systematic Investment Plan) ಶೇ. 5ರಿಂದ ಶೇ. 40ರವರೆಗೂ ವಾರ್ಷಿಕ ಲಾಭ ತಂದುಕೊಡುತ್ತಿವೆ. ನಾವು ಅಳೆದು ತೂಗಿ ಆಯ್ಕೆ ಮಾಡಿದರೂ ಕೆಲವೊಮ್ಮೆ ಎಸ್ಐಪಿಯಿಂದ ನಾವು ನಿರೀಕ್ಷಿಸಿದಷ್ಟು ರಿಟರ್ನ್ ಬರದೇ ಹೋಗಬಹುದು. ಆದರೆ, ಹೆಚ್ಚಿನ ಸಂದರ್ಭದಲ್ಲಿ ಎಸ್ಐಪಿಗಳು ಶೇ. 12ಕ್ಕಿಂತ ಹೆಚ್ಚು ವಾರ್ಷಿಕವಾಗಿ ಲಾಭ ಕೊಡುತ್ತವೆ.
ಇದನ್ನೂ ಓದಿ: Company FD: ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್: ಏನು ಲಾಭ? ಎಚ್ಚರ ವಹಿಸಬೇಕಾದ ಸಂಗತಿಗಳು; ಇಲ್ಲಿದೆ ಡೀಟೇಲ್ಸ್
ಅನಿಶ್ಚಿತತೆಯ ಕಾರಣಕ್ಕೆ ಎಸ್ಐಪಿ ಲಾಭ ದರವನ್ನು ಶೇ. 8ರಿಂದ 14ರವರೆಗೂ ಪರಿಗಣಿಸಿ ಲೆಕ್ಕಾಚಾರ ಮಾಡೋಣ.
ಶೇ. 8ರ ರಿಟರ್ನ್ ರೇಟ್ ಇರುವ ಎಸ್ಐಪಿ
ನೀವು 10 ವರ್ಷದಲ್ಲಿ 1 ಕೋಟ್ಯಾಧೀಶ್ವರ ಆಗಬೇಕಾದರೆ ಈ ಎಸ್ಐಪಿಯಲ್ಲಿ ತಿಂಗಳಿಗೆ 1.56 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
ಶೇ. 9ರ ರಿಟರ್ನ್ ರೇಟ್ ಇರುವ ಎಸ್ಐಪಿ:
ಇಷ್ಟು ವಾರ್ಷಿಕ ಲಾಭ ತಂದುಕೊಡುವ ಎಸ್ಐಪಿಯಲ್ಲಿ ನೀವು 10 ವರ್ಷದಲ್ಲಿ 1 ಕೋಟಿ ಸಂಪಾದನೆ ಮಾಡಬೇಕಾದರೆ ತಿಂಗಳಿಗೆ 1.34 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
ಶೇ. 10ರ ದರದಲ್ಲಿ ಹಣ ಬೆಳೆಯುವ ಎಸ್ಐಪಿ:
ನೀವು ಹೂಡಿಕೆ ಮಾಡುವ ಎಸ್ಐಪಿ ಅಂತಿಮವಾಗಿ ಶೇ. 10ರ ವಾರ್ಷಿಕ ರಿಟರ್ನ್ ರೇಟ್ನಲ್ಲಿ ಲಾಭ ತಂದುಕೊಡುತ್ತದೆ ಎಂದು ಭಾವಿಸಿಸೋಣ. ಆಗ 10 ವರ್ಷದಲ್ಲಿ 1 ಕೋಟಿ ರೂ ಸಂಪಾದನೆಗೆ ನೀವು ತಿಂಗಳಿಗೆ 1.16 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
ಶೇ. 11ರ ರಿಟರ್ನ್ ರೇಟ್ ಇರುವ ಎಸ್ಐಪಿ:
ಶೇ. 11ರ ವಾರ್ಷಿಕ ಲಾಭ ದರ ಹೊಂದುವ ಎಸ್ಐಪಿ ಮೂಲಕ 10 ವರ್ಷದಲ್ಲಿ ನೀವು 1 ಕೋಟಿ ರೂ ಪಡೆಯಬೇಕೆಂದರೆ ತಿಂಗಳಿಗೆ 1 ಲಕ್ಷ ರೂ ಹೂಡಿಕೆ ಮಾಡಬೇಕಾಗುತ್ತದೆ.
ಶೇ. 12ರ ರಿಟರ್ನ್ ರೇಟ್ನ ಎಸ್ಐಪಿ:
ಈಗಿರುವ ಪ್ರಮುಖ ಎಸ್ಐಪಿ ಸ್ಕೀಮ್ಗಳು ತಂದುಕೊಡುವ ಲಾಭದ ವಾರ್ಷಿಕ ಸರಾಸರಿ ದರ ಪರಿಗಣಿಸಿದರೆ ಅದು ಶೇ. 12. ಇದನ್ನು ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಿದಾಗ, 10 ವರ್ಷದಲ್ಲಿ 1ಕೋಟಿ ರೂ ಗಳಿಸಲು ತಿಂಗಳಿಗೆ ಹೂಡಿಕೆ ಮಾಡಬೇಕಾದ ಹಣ 90,000 ರೂ ಆಗುತ್ತದೆ.
ನಿಮ್ಮ ಎಸ್ಐಪಿ ಶೇ. 13ರಷ್ಟು ರಿಟರ್ನ್ ಕೊಟ್ಟರೆ….
ನೀವು ತಿಂಗಳಿಗೆ 79,000 ರೂ ಹಣವನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡಿ, ಅದು ಶೇ. 13ರ ವಾರ್ಷಿಕ ದರದಲ್ಲಿ ಬೆಳೆದರೆ ನಿಮ್ಮ ಹಣ 10 ವರ್ಷದಲ್ಲಿ 1 ಕೋಟಿ ರೂ ಆಗುತ್ತದೆ.
ಶೇ. 14ರ ರಿಟರ್ನ್ ರೇಟ್ ಇರುವ ಎಸ್ಐಪಿ
ನಿಮ್ಮ ಎಸ್ಐಪಿ ಸ್ಕೀಮ್ ಶೇ. 14ರ ದರದಲ್ಲಿ ಬೆಳೆಯುತ್ತದೆ ಎಂದಾದರೆ ನೀವು 10 ವರ್ಷದಲ್ಲಿ 1 ಕೋಟಿ ರೂ ಗಳಿಸಬೇಕೆಂದರೆ ತಿಂಗಳಿಗೆ 71,000 ರೂ ಕಟ್ಟಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ