ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾದ ಎಲ್ಐಸಿ ಹೊಸ ಆ್ಯನ್ಯುಟಿ ಪ್ಲಾನ್ವೊಂದನ್ನು ಆರಂಭಿಸಿದೆ. ಸ್ಮಾರ್ಟ್ ಪೆನ್ಷನ್ ಪ್ಲಾನ್ ಎಂದು ಹೆಸರಿಲಾಗಿರುವ ಈ ಸ್ಕೀಮ್ ನಿವೃತ್ತರ ವಿಶ್ರಾಂತ ಜೀವನಕ್ಕೆ ಪೂರಕವಾಗಿ ನಿಯಮಿತ ಆದಾಯ ನೀಡುತ್ತದೆ. ಒಂದೇ ಪ್ರೀಮಿಯಮ್ ಇದ್ದು, ಅದಕ್ಕೆ ಅನುಗುಣವಾಗಿ ತತ್ಕ್ಷಣದಿಂದಲೇ ನಿಯಮಿತ ಆದಾಯ ಬರತೊಡಗುತ್ತದೆ. ವಿವಿಧ ಹಣಕಾಸು ಸ್ಥಿತಿ, ಆದಾಯ ಅಗತ್ಯಗಳಿಗೆ ತಕ್ಕಂತೆ ಪ್ರೀಮಿಯಮ್ ಮೊತ್ತವನ್ನು ಆಯ್ದುಕೊಳ್ಳಬಹುದು.
ಇದು ನಾನ್ ಪಾರ್ಟಿಸಿಪೇಟಿಂಗ್, ನಾನ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಆಗಿದೆ. ಅಂದರೆ, ಇದು ಮಾರುಕಟ್ಟೆಗೆ ಜೋಡಿತವಾಗಿರುವುದಿಲ್ಲ. ಪೂರ್ವನಿಗದಿತ ಆದಾಯದ ಖಾತ್ರಿ ನೀಡುತ್ತದೆ.
ಇದನ್ನೂ ಓದಿ: ಒಂದು ವರ್ಷದೊಳಗೆ ಇನ್ಷೂರೆನ್ಸ್ ಪಾಲಿಸಿ ರದ್ದುಗೊಳಿಸಲು ಸಾಧ್ಯವಾ? ಫ್ರೀಲುಕ್ ಅವಧಿ ವಿಸ್ತರಿಸಲು ಸರ್ಕಾರದ ಯೋಜನೆ
ನ್ಯಾಷನಲ್ ಪೆನ್ಷನ್ ಸ್ಕೀಮ್ ಪಡೆದಿರುವವರು ನಿವೃತ್ತರಾದಾಗ ನಿರ್ದಿಷ್ಟ ಮೊತ್ತವನ್ನು ಆ್ಯನುಟಿ ಖರೀದಿಸಲು ಬಳಸಬೇಕೆಂಬ ನಿಯಮ ಇದೆ. ಇಂಥವರು ಎಲ್ಐಸಿಯ ಸ್ಮಾರ್ಟ್ ಪೆನ್ಷನ್ ಪ್ಲಾನ್ ಅನ್ನು ಖರೀದಿಸಬಹುದು. ತತ್ಕ್ಷಣದಿಂದಲೇ ಆ್ಯನುಟಿ ಅಥವಾ ರೆಗ್ಯುಲರ್ ಇನ್ಕಮ್ ಬರತೊಡಗುತ್ತದೆ.
ಎಲ್ಐಸಿ ಸ್ಮಾರ್ಟ್ ಪೆನ್ಷನ್ ಸ್ಕೀಮ್ನಲ್ಲಿ ಒಂದೇ ಬಾರಿಗೆ ಪ್ರೀಮಿಯಮ್ ಪಾವತಿಸುವುದಿರುತ್ತದೆ. ಕನಿಷ್ಠ ಪ್ರೀಮಿಯಮ್ ದರ ಒಂದು ಲಕ್ಷ ರೂ ಇದೆ. ಗರಿಷ್ಠ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಭಾರತೀಯರ ಆದಾಯದ ಹೆಚ್ಚಿನ ಭಾಗ ಸಾಲಕ್ಕೆ ಚುಕ್ತಾ; ಬೇರೆ ಯಾವ್ಯಾವುದಕ್ಕೆಷ್ಟು ಖರ್ಚು? ಇಲ್ಲಿದೆ ಪಿಡಬ್ಲ್ಯುಸಿ ವರದಿ
ಕನಿಷ್ಠ ಆ್ಯನುಟಿ ಅಥವಾ ರೆಗ್ಯುಲರ್ ರಿಟರ್ನ್ ಮೊತ್ತ ತಿಂಗಳಿಗೆ ಒಂದು ಸಾವಿರ ರೂ ಇರುತ್ತದೆ. ಕ್ವಾರ್ಟರ್ ಅವಧಿಯ ರಿಟರ್ನ್ ಆಯ್ದುಕೊಂಡರೆ ಕನಿಷ್ಠ ಆ್ಯನುಟಿ 3,000 ರೂ ಇದೆ. ಅರ್ಧವರ್ಷವಾದರೆ ಆರು ಸಾವಿರ ರೂ, ಒಂದು ವರ್ಷದ್ದಾದರೆ 12,000 ರೂ ಆದಾಯ ನಿಯಮಿತವಾಗಿ ಬರುತ್ತಾ ಹೋಗುತ್ತದೆ.
ಪಾಲಿಸಿದಾರನಿಗೆ ಈ ಆ್ಯನುಟಿ ಕೊನೆಗಾಲದವರೆಗೂ ಬರುತ್ತಿರುತ್ತದೆ. ಸತ್ತ ಬಳಿಕ ನಾಮಿನಿಗಳಿಗೆ ಬೆನಿಫಿಟ್ ಇರುತ್ತದೆ. ನಾಮಿನಿಗೆ ಇದೇ ರೀತಿ ಆ್ಯನುಟಿ ಮುಂದುವರಿಸಬೇಕೋ ಅಥವಾ ಲಂಪ್ಸಮ್ ಹಣ ಕೊಡಬೇಕೋ ಎಂಬುದನ್ನು ಪಾಲಿಸಿದಾರ ಮೊದಲೇ ನಿರ್ಧರಿಸಿರಬೇಕು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ