Property Loan: ಅಡಮಾನ ಸಾಲ; ಗಮನಿಸಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ

ಈಗ ಅಡಮಾನ ಸಾಲಗಳಿಗೆ ಬಡ್ಡಿ ದರ ತೀರಾ ಕಡಿಮೆಯೇ ಇರುತ್ತದೆ. ಅಡಮಾನ ಸಾಲ ಸೆಕ್ಯೂರ್ಡ್ ಲೋನ್ ಆಗಿರುವುದರಿಂದ ಬಹಳ ಬೇಗ ಕೂಡ ಸಾಲ ಸಿಗುತ್ತದೆ. ತೆರಿಗೆ ರಿಯಾಯಿತಿ ಇತ್ಯಾದಿ ಸೌಲಭ್ಯವೂ ಇರುತ್ತದೆ.

Property Loan: ಅಡಮಾನ ಸಾಲ; ಗಮನಿಸಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Jan 07, 2023 | 12:33 PM

ನಮ್ಮ ಜೀವನ ನಿರ್ವಹಣೆಗೆ ಒಂದಲ್ಲ ಒಂದು ಹಂತದಲ್ಲಿ ಸಾಲ ಮಾಡಬೇಕಾದ ಸ್ಥಿತಿ ಬರುತ್ತದೆ. ಆಸ್ತಿ ಖರೀದಿಸಲೋ, ಮನೆ ಕಟ್ಟಲೋ, ಕಾರು ಕೊಳ್ಳಲೋ ಹೀಗೆ ಸಾಲ ಮಾಡುತ್ತೇವೆ. ಈಗ ಸ್ವಲ್ಪ ಹಣಕಾಸು ಸದಭ್ಯಾಸಗಳನ್ನು (Good Credit Score) ಇಟ್ಟುಕೊಂಡಿದ್ದರೆ ಸಾಲ (Loan) ಸಿಗುವುದು ಬಹಳ ಸುಲಭ. ಬಡ್ಡಿ ದರಗಳೂ ಈಗ ಕಡಿಮೆಯೇ. ಖಾಸಗಿ ಫೈನಾನ್ಷಿಯರುಗಳ ಬಳಿ ತಿಂಗಳಿಗೆ ಶೇ. 5ರಿಂದ 10ರಷ್ಟು ಬಡ್ಡಿಗೆ ಸಾಲ ಪಡೆಯುವ ಪ್ರಮೇಯ ಈಗ ಇಲ್ಲ. ಈಗ ಅಡಮಾನ ಸಾಲಗಳಿಗೆ (Loan against Property) ಬಡ್ಡಿ ದರ ತೀರಾ ಕಡಿಮೆಯೇ ಇರುತ್ತದೆ. ಅಡಮಾನ ಸಾಲ ಸೆಕ್ಯೂರ್ಡ್ ಲೋನ್ (Secured Loan) ಆಗಿರುವುದರಿಂದ ಬಹಳ ಬೇಗ ಕೂಡ ಸಾಲ ಸಿಗುತ್ತದೆ. ತೆರಿಗೆ ರಿಯಾಯಿತಿ ಇತ್ಯಾದಿ ಸೌಲಭ್ಯವೂ ಇರುತ್ತದೆ.

ನಿಮ್ಮ ಮಾಲಿಕತ್ವದ ಚಿನ್ನ, ಮನೆ ಆಸ್ತಿಪತ್ರ ಇತ್ಯಾದಿಯನ್ನು ಅಡವಾಗಿ ಇಟ್ಟು ಪಡೆಯುವ ಸಾಲವೇ ಅಡಮಾನ ಸಾಲ. ಆಸ್ತಿಪತ್ರವನ್ನು ಅಡವಾಗಿ ಇಟ್ಟು ಪಡೆಯುವ ಗೃಹ ಸಾಲಕ್ಕೆ ಬಡ್ಡಿ ದರ ಅತಿ ಕಡಿಮೆ ಮತ್ತು ತೆರಿಗೆ ರಿಯಾಯಿತಿಯೂ ಲಭ್ಯ ಇರುತ್ತದೆ.

ಸಾಲ ಪಡೆಯುವ ಮುನ್ನ ಈ ಅಂಶಗಳು ಗಮನದಲ್ಲಿರಲಿ;

  • ನೀವು ಈವರೆಗೆ ಪಡೆದುಕೊಂಡಿದ್ದ ಸಾಲಗಳನ್ನು ನಿಯಮಿತವಾಗಿ ಕಂತುಗಳನ್ನು ಕಟ್ಟಿದ್ದರೆ ಮತ್ತು ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಹೊಸ ಸಾಲ ಬಹಳ ಸುಲಭವಾಗಿ ಸಿಗುತ್ತದೆ. ಸಾಲ ನಿಮ್ಮ ಒಪ್ಪಿಗೆಗಾಗಿ ಕಾಯುತ್ತಿರುತ್ತದೆ.
  • ಒಂದು ವೇಳೆ ನೀವು ಶಿಸ್ತುಬದ್ಧವಾಗಿ ಹಳೆಯ ಸಾಲದ ಕಂತುಗಳನ್ನು ಕಟ್ಟಿಲ್ಲದೇ ಹೋಗಿದ್ದಲ್ಲಿ ಬಡ್ಡಿ ದರ ಹೆಚ್ಚು ವಿಧಿಸಬಹುದು. ಸಾಲ ಅನುಮೋದನೆ ಆಗುವುದು ತಡವಾಗಬಹುದು.
  • ನೀವು ಅಡ ಇಡುವ ಆಸ್ತಿಯ ಒಟ್ಟು ಮೌಲ್ಯದ ಶೇ. 70ರಷ್ಟು ಹಣವನ್ನು ಬ್ಯಾಂಕಿನವರು ನಿಮಗೆ ಸಾಲವಾಗಿ ನೀಡುತ್ತಾರೆ. ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ಈ ಮೊತ್ತದ ಏರಿಳಿತವಾಗಬಹುದು. ಆದರೆ, ಸಾಮಾನ್ಯವಾಗಿ ನಿಮಗೆ ಎಷ್ಟು ಸಾಲ ಸಿಗಬಹುದು ಎಂಬುದನ್ನು ಮೊದಲೇ ಅಂದಾಜು ಮಾಡಬಹುದು.
  • ಗೃಹ ಸಾಲವಾದರೆ ಸಾಮಾನ್ಯವಾಗಿ 20 ವರ್ಷಗಳವರೆಗೆ ಕಂತುಗಳನ್ನು ಕಟ್ಟುವ ಅವಕಾಶ ಇರುತ್ತದೆ. ಆದರೆ, ಹೆಚ್ಚು ಕಂತುಗಳಾದಷ್ಟೂ ಬಡ್ಡಿ ಮೊತ್ತ ಹೆಚ್ಚು ಎಂಬುದು ನೆನಪಿರಲಿ. ನಿಮಗೆ ಸಾಧ್ಯವಾದರೆ ಕಡಿಮೆ ಕಂತುಗಳನ್ನು ಆಯ್ದುಕೊಳ್ಳುವುದು ಉತ್ತಮ.
  • ನೀವು ಬೇಕಾದರೆ ಅವಧಿಗೆ ಮುನ್ನವೇ ಸಾಲವನ್ನು ತೀರಿಸಬಹುದು. ಅದಕ್ಕೆ ಕೆಲ ನೂರು ರೂಗಳಷ್ಟು ಶುಲ್ಕ ಪಾವತಿಸಬೇಕಾಗಬಹುದು. ಫ್ಲೋಟಿಂಗ್ ಇಂಟ್ರೆಸ್ಟ್ (Floating Interest) ಮೇಲೆ ಸಾಲ ಪಡೆದಿದ್ದರೆ ಪ್ರೀ-ಕ್ಲೋಷರ್ ಶುಲ್ಕ ಕೂಡ ಕಟ್ಟುವ ಅಗತ್ಯ ಇರುವುದಿಲ್ಲ. ಇಲ್ಲಿ ಫ್ಲೋಟಿಂಗ್ ಇಂಟ್ರೆಸ್ಟ್ ಎಂದರೆ ಬ್ಯಾಂಕ್ ಆಗಾಗ್ಗೆ ಬಡ್ಡಿ ಬದಲಾಯಿಸಿದಾಗೆಲ್ಲಾ ನಿಮ್ಮ ಸಾಲಕ್ಕೂ ಅದು ಅನ್ವಯ ಆಗುತ್ತಿರುತ್ತದೆ. ನಾನ್-ಫ್ಲೋಟಿಂಗ್ ಇಂಟ್ರೆಸ್ಟ್ ನಲ್ಲಿ ಮೊದಲಿಂದ ಕೊನೆಯವರೆಗೂ ಬಡ್ಡಿ ಬದಲಾಗುವುದಿಲ್ಲ.
  • ಸದ್ಯದ ಮಾರುಕಟ್ಟೆ ಸ್ಥಿತಿಯಲ್ಲಿ ಅಡಮಾನ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 9ರಿಂದ ಶೇ. 13ರವರೆಗೆ ಇದೆ. ನಿಮ್ಮ ಆಸ್ತಿ ಜೊತೆಗೆ ಕ್ರೆಡಿಟ್ ಸ್ಕೋರ್, ನಿಮ್ಮ ಆದಾಯ ಇತ್ಯಾದಿ ಎಲ್ಲವೂ ಸರಿಯಾಗಿದ್ದಲ್ಲಿ ಅತೀ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ. ನೀವು ಶೇ. 9.5 ಬಡ್ಡಿ ದರದಲ್ಲಿ 15 ಲಕ್ಷ ರೂ ಸಾಲ ಪಡೆದಿರಾದರೆ ತಿಂಗಳಿಗೆ 25 ಸಾವಿರ ರೂ ಕಂತುಗಳಂತೆ ಏಳು ವರ್ಷಗಳವರೆಗೆ ಕಟ್ಟಬೇಕಾಗುತ್ತದೆ. ಮೇಲೆ ಹೇಳಿರುವುದು ನಿಖರ ಅಂಕಿ ಅಲ್ಲ, ಒಂದು ಅಂದಾಜು ಮಾತ್ರ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್