ಫಿಕ್ಸೆಡ್ ಡೆಪಾಸಿಟ್ ಇದೆಯಾ? ಬಹಳ ಸುಲಭವಾಗಿ ಮತ್ತು ತೀರಾ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ

Loans on Fixed Deposit: ವಿವಿಧ ಆಸ್ತಿಗಳ ಮೇಲೆ ಸಾಲ ಪಡೆದಂತೆ ನಿಶ್ಚಿತ ಠೇವಣಿ ಮೇಲೂ ಸಾಲ ಸಿಗುತ್ತದೆ. ಇದರ ಪ್ರಕ್ರಿಯೆ ಬಹಳ ಸುಲಭ. ಬಡ್ಡಿದರವೂ ಬಹಳ ಕಡಿಮೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿ ಮಾಡಬಹುದು.

ಫಿಕ್ಸೆಡ್ ಡೆಪಾಸಿಟ್ ಇದೆಯಾ? ಬಹಳ ಸುಲಭವಾಗಿ ಮತ್ತು ತೀರಾ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ
ಫಿಕ್ಸೆಡ್ ಡೆಪಾಸಿಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 07, 2023 | 1:19 PM

ತುರ್ತು ಅಗತ್ಯ ಇದ್ದಾಗ ಸುಲಭ ಸಾಲಕ್ಕಾಗಿ ಹಲವು ಆಯ್ಕೆಗಳಿವೆ. ಪರ್ಸನಲ್ ಲೋನ್ ಪಡೆಯಬಹುದು. ಚಿನ್ನ, ಇನ್ಷೂರೆನ್ಸ್, ಬಾಂಡ್ ಇತ್ಯಾದಿ ಅಸ್ತಿಗಳ (Asset Loan) ಮೇಲೆ ಸಾಲ ಇನ್ನೂ ಸುಲಭವಾಗಿ ಸಿಗುತ್ತದೆ. ಈ ಪಟ್ಟಿಗೆ ಫಿಕ್ಸೆಡ್ ಡೆಪಾಸಿಟ್ (FD) ಸೇರುತ್ತದೆ. ಗೋಲ್ಡ್ ಲೋನ್​ಗಿಂತಲೂ ಸುಲಭವಾಗಿ ಮತ್ತು ಕಡಿಮೆ ಬಡ್ಡಿದರದಲ್ಲಿ ಎಫ್​ಡಿ ಮೇಲೆ ಸಾಲ ಸಿಗುತ್ತದೆ ಎಂಬುದು ಗಮನಾರ್ಹ. ಆದರೆ, ಈ ಎಫ್​ಡಿ ಸಾಲ ಪಡೆಯಬೇಕಾದರೆ ನೀವು ಬ್ಯಾಂಕ್​ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿರಬೇಕು. ತುರ್ತು ಹಣ ಬೇಕಾದಾಗ ಎಫ್​ಡಿ ಹಿಂಪಡೆಯದೆಯೇ ನೀವು ಅದರ ಮೇಲೆ ಸಾಲ ಪಡೆಯಬಹುದು.

ಸುಲಭವಾಗಿ ಸಿಗುತ್ತೆ ಎಫ್​ಡಿ ಸಾಲ

ಹೆಚ್ಚು ಅರ್ಜಿ ಭರ್ತಿ ಮಾಡುವ ಅವಶ್ಯತೆ ಇಲ್ಲದೇ ಬಹಳ ಸುಲಭ ಪ್ರಕ್ರಿಯೆಯಲ್ಲಿ ಬೇಗನೇ ಎಫ್​ಡಿ ಸಾಲ ಪಡೆಯಲು ಸಾಧ್ಯ. ಗೋಲ್ಡ್ ಲೋನ್​ನಂತೆ ಎಫ್​ಡಿ ಸಾಲದಲ್ಲೂ ಮರುಪಾವತಿ ಕಾರ್ಯ ಸುಲಭವಾಗಿರುತ್ತದೆ. ತಮ್ಮಿಚ್ಛೆಯ ಪ್ರಕಾರ ಸಾಲದ ಮರುಪಾವತಿ ಮಾಡಬಹುದು.

ನಿಮ್ಮ ಫಿಕ್ಸೆಡ್ ಡೆಪಾಸಿಟ್​ನ ಒಟ್ಟು ಮೊತ್ತದ ಶೇ. 70ರಿಂದ 90 ಭಾಗದ ಹಣವನ್ನು ಸಾಲವಾಗಿ ಕೊಡಲಾಗುತ್ತದೆ. ಇದಕ್ಕೆ ಇರುವ ಬಡ್ಡಿದರ ಗೋಲ್ಡ್ ಲೋನ್​ನದಕ್ಕಿಂತಲೂ ಬಹಳ ಕಡಿಮೆ. ಪರ್ಸನಲ್ ಲೋನ್​ಗಿಂತಲೂ ತೀರಾ ಕಡಿಮೆ ಇರುತ್ತದೆ. ಎಫ್​ಡಿ ಸಾಲವು ಸುರಕ್ಷಿತ ಸಾಲದ ವರ್ಗಕ್ಕೆ ಸೇರಿರುವುದರಿಂದ ಬಡ್ಡಿದರ ಕಡಿಮೆ ಇರುತ್ತದೆ.

ಇದನ್ನೂ ಓದಿ: ಹೂಡಿಕೆ ಟಿಪ್ಸ್; 1 ಕೋಟಿ ಸಂಪತ್ತು ಸಂಗ್ರಹಕ್ಕೆ 15X15X15 ಸೂತ್ರ

ಎಫ್​ಡಿ ಸಾಲ ಹೇಗೆ ಪಡೆಯುವುದು?

ಫಿಕ್ಸೆಡ್ ಡೆಪಾಸಿಟ್ ಲೋನ್ ಪಡೆಯಲು ಮೂರು ಮಾರ್ಗಗಳಿವೆ. ಡಿಮ್ಯಾಂಡ್ ಲೋನ್, ಓವರ್​ಡ್ರಾಫ್ಟ್ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಆಧಾರಿತ ಸಾಲ. ಈ ಮೂರು ರೀತಿಯ ಎಫ್​ಡಿ ಸಾಲದ ವಿವರ ಇಲ್ಲಿದೆ…

ಡಿಮ್ಯಾಂಡ್ ಲೋನ್: ಇಲ್ಲಿ ಸಾಲ ಪಡೆದವರು ಎಫ್​ಡಿ ಮೆಚ್ಯೂರಿಟಿ ಅವಧಿಯೊಳಗೆ ತೀರಿಸಬೇಕು. ಒಂದು, ಎರಡು, ಮೂರು, ಹೀಗೆ ಎಷ್ಟು ಕಂತುಗಳಲ್ಲಿ ಬೇಕಾದರೂ ಸಾಲದ ಮರುಪಾವತಿ ಮಾಡಬಹುದು. ಬಹಳ ಸರಳವಾದ ವ್ಯವಸ್ಥೆ ಇದು.

ಇದನ್ನೂ ಓದಿ: Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

ಓವರ್ ಡ್ರಾಫ್ಟ್: ನಿಶ್ಚಿತ ಠೇವಣಿಗಳ ಮೇಲೆ ಬ್ಯಾಂಕುಗಳು ಓವರ್​ಡ್ರಾಫ್ಟ್ ಸೌಲಭ್ಯ ಕೊಡಬಹುದು. ಡೆಪಾಸಿಟ್​ನ ಶೇ. 95ರಷ್ಟು ಮೊತ್ತದವರೆಗೂ ಕ್ರೆಡಿಟ್ ಲಿಮಿಟ್ ಕೊಡಬಹುದು. ಈ ಕ್ರೆಡಿಟ್ ಲಿಮಿಟ್​ನೊಳಗೆ ನೀವು ಎಷ್ಟು ಬೇಕಾದರೂ ಹಣ ವಿತ್​ಡ್ರಾ ಮಾಡಬಹುದು. ನೀವು ಹಿಂಪಡೆದ ಹಣಕ್ಕೆ ಮಾತ್ರವೇ ಬಡ್ಡಿ ಅನ್ವಯ ಆಗುತ್ತದೆ.

ಕ್ರೆಡಿಟ್ ಕಾರ್ಡ್ ಆಧಾರಿತ ಸಾಲ: ಫಿಕ್ಸೆಡ್ ಡೆಪಾಸಿಟ್ ಸಾಲಕ್ಕೆ ಕ್ರೆಡಿಟ್ ಕಾರ್ಡ್ ಅವಕಾಶವೂ ಇರುತ್ತದೆ. ಓವರ್​ಡ್ರಾಫ್ಟ್ ರೀತಿಯಲ್ಲಿ ಈ ಕ್ರೆಡಿಟ್ ಕಾರ್ಡ್​ಗೆ ನಿರ್ದಿಷ್ಟ ಕ್ರೆಡಿಟ್ ಲಿಮಿಟ್ ಕೊಡಲಾಗುತ್ತದೆ. ಈ ಮೊತ್ತವನ್ನು ಯಾವಾಗ ಬೇಕಾದರೂ ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Mon, 7 August 23