Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

Tips To Manage Money: ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಹಣಕಾಸು ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಉಳಿತಾಯ, ಹೂಡಿಕೆ, ಹಣದ ಬೆಳವಣಿಗೆ ಬಗ್ಗೆ ಯುವಸಮುದಾಯಕ್ಕೆ ತಿಳಿವಳಿಕೆ ಇರಬೇಕು ಎಂದು ಕುಶಾಲ್ ಲೋಧಾ ಹೇಳುತ್ತಾರೆ.

Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 04, 2023 | 1:41 PM

ಹಣ ಸಂಪಾದನೆಯಂತೆ ಹಣ ನಿರ್ವಹಣೆಯೂ (Money Management) ಬಹಳ ಮುಖ್ಯ. ಇಲ್ಲದಿದ್ದರೆ ಕೂಡಿಟ್ಟ ಆಸ್ತಿ ಕರಗಿದಂತೆ, ಗಳಿಸಿದ ಸಂಪಾದನೆ ನೋಡನೋಡುತ್ತಿದ್ದಂತೆಯೇ ಶೂನ್ಯವಾಗಿ ಹೋಗುತ್ತದೆ. ಉಳಿತಾಯ, ಹೂಡಿಕೆಗಳ ಬಗ್ಗೆ ಸರಿಯಾದ ಮಾಹಿತಿ ಅಥವಾ ಮನೋಭಾವನೆ ಇಲ್ಲದೇ ಹೋದರೆ ಜೀವನ ಕಷ್ಟಕರ ಆಗುತ್ತದೆ. ಕೆಎಜಿಆರ್​ನ ಸಂಸ್ಥಾಪಕ ಕುಶಾಲ್ ಲೋಧಾ (Kushal Lodha, founder of KAGR) ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಯುವಜನರಲ್ಲಿಆರ್ಥಿಕ ಮತ್ತು ಹಣಕಾಸು ತಿಳಿವು ಬಹಳ ಬೇಗ ಮೂಡಬೇಕು ಎಂದು ವಾದಿಸಿದ್ದಾರೆ. ಅವರು ನೀಡಿರುವ ಕೆಲ ಪ್ರಮುಖ ಟಿಪ್ಸ್​ಗಳನ್ನು ಇಲ್ಲಿ ನೀವು ಓದಬಹುದು.

  • ಬಾಲ್ಯದಿಂದಲೇ ಮಕ್ಕಳಲ್ಲಿ ಪೋಷಕರು ಹಣದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಹಣ ಬೆಳೆಯುವ ವಿಧಾನದ ತಿಳಿವಳಿಕೆ ನೀಡಬೇಕು. ಉಳಿತಾಯ, ಹೂಡಿಕೆ ಇವುಗಳ ಬಗ್ಗೆ ಜ್ಞಾನದ ಬೀಜ ಬಿತ್ತಬೇಕು.
  • ಯುವ ಸಮುದಾಯವು ಪರ್ಸನಲ್ ಫೈನಾನ್ಸ್ ಅಥವಾ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಯಾವ್ಯಾವ ಹೂಡಿಕೆ ಆಯ್ಕೆಗಳಿವೆ ಎಂಬುದನ್ನು ಬಹಳ ಬೇಗನೇ ತಿಳಿದುಕೊಳ್ಳಬೇಕು.

ಇದನ್ನೂ ಓದಿ: FD vs PPF: ಎಫ್​ಡಿ ಉತ್ತಮವೋ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ? ಇಲ್ಲೊಂದು ಹೋಲಿಕೆ

  • ನಿಮ್ಮ ವೃತ್ತಿಜೀವನದ ಆರಂಭಿಕ ಹಂತದಿಂದಲೇ ನಿವೃತ್ತಿಗಾಗಿ ಹೂಡಿಕೆ ಮಾಡುವುದಕ್ಕೆ ತೊಡಗಬೇಕು
  • ನಿಮ್ಮ ದಿನದ ಮತ್ತು ತಿಂಗಳ ಖರ್ಚು, ವೆಚ್ಚ, ಆದಾಯ, ಉಳಿತಾಯ ಇವೆಲ್ಲವನ್ನೂ ದಾಖಲು ಮಾಡಿಟ್ಟುಕೊಳ್ಳಬೇಕು. ಡೈರಿಯಲ್ಲಾದರೂ ಸರಿ, ಎಕ್ಸೆಲ್​ನಲ್ಲಾದರೂ ಸರಿ ಇವುಗಳನ್ನು ಬರೆದಿಟ್ಟರೆ ನಮ್ಮ ಹಣವನ್ನು ಟ್ರ್ಯಾಕ್ ಮಾಡಲು ಸುಲಭವಾಗುತ್ತದೆ.
  • ಹೂಡಿಕೆ ಎಂದರೆ ಎಫ್​ಡಿ ಮಾತ್ರವಲ್ಲ. ಹೂಡಿಕೆ ವಿಸ್ತೃತ ಕ್ಷೇತ್ರದಲ್ಲಿ ಇರಬೇಕು. ಈಕ್ವಿಟಿ (ಷೇರು), ನಿಶ್ಚಿತ ಠೇವಣಿ, ಪಿಪಿಎಫ್, ಗೋಲ್ಡ್ ಬಾಂಡ್ ಇತ್ಯಾದಿಗಳಲ್ಲಿ ಹೂಡಿಕೆ ಹಣ ಹಂಚಬೇಕು. ಹೆಚ್ಚಿನ ಪಾಲು ಈಕ್ವಿಟಿಯತ್ತ ಇರಬೇಕು. ಎಫ್​ಡಿ, ಕಾರ್ಪೊರೇಟ್ ಬಾಂಡ್ ಇತ್ಯಾದಿ ಒಂದೇ ತೆರನಾದ ಕಡೆ ಹೂಡಿಕೆ ಮಾಡಿದರೆ ಹೆಚ್ಚು ಆಭ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

  • ನಿಮ್ಮ ಜೀವನದ ಗುರಿ ಏನು, ಅಗತ್ಯತೆಗಳು ಏನು ಎಂಬುದನ್ನು ಆರಂಭದಲ್ಲೇ ಕಂಡುಕೊಳ್ಳಬೇಕು. ಅದರಂತೆ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ, ಮನೆ ಕಟ್ಟುವುದು, ಕಾರು ಖರೀದಿಸುವುದು ಇತ್ಯಾದಿ.
  • ನಿಶ್ಚಿತ ಆದಾಯ ತರುವ ಆಸ್ತಿ ಗಳಿಸಲು ಯೋಜಿಸಿ. ಇದರಿಂದ ನೀವು ರಿಸ್ಕ್ ಇಲ್ಲದ ಆರಾಮ ಜೀವನ ನಡೆಸಬಹುದು.

(ಮಾಹಿತಿಕೃಪೆ: ಕುಶಾಲ್ ಲೋಧ, ಕೆಎಜಿಆರ್ ಸಂಸ್ಥಾಪಕರು)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ