FD vs PPF: ಎಫ್ಡಿ ಉತ್ತಮವೋ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉತ್ತಮವೋ? ಇಲ್ಲೊಂದು ಹೋಲಿಕೆ
Savings and Investments Instruments: ಫಿಕ್ಸೆಡ್ ಡೆಪಾಸಿಟ್ ಹೆಚ್ಚು ಬಡ್ಡಿ ನೀಡಬಲ್ಲುದು. ಅಲ್ಪಾವಧಿ ಹೂಡಿಕೆಗೆ ಉತ್ತಮ ಎನಿಸಬಹುದು. ಪಿಪಿಎಫ್ ಕಡಿಮೆ ಬಡ್ಡಿಯಾದರೂ ತೆರಿಗೆ ಉಳಿತಾಯಕ್ಕೆ ದಾರಿಯಾಗಿದೆ. ದೀರ್ಘಾವಧಿ ಹೂಡಿಕೆಗೆ ಉತ್ತಮ ಆಯ್ಕೆ ಇದು.
ಭಾರತದಲ್ಲಿ ಉಳಿತಾಯ ಯೋಜನೆಗಳು (Savings Schemes) ಹಲವಿವೆ. ಹಣ ಉಳಿತಾಯ ಮತ್ತು ಹೂಡಿಕೆಗಳಿಗೆ ಹಲವು ಆಯ್ಕೆಗಳಿವೆ. ಬಹಳ ಸಾಮಾನ್ಯವಾಗಿ ಬಳಕೆಯಾಗುವ ಉಳಿತಾಯ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮತ್ತು ಪಿಪಿಎಫ್ (Public Provident Fund) ಇವೆ. ಎರಡೂ ಕೂಡ ಉತ್ತಮ ರಿಟರ್ನ್ ನೀಡಬಲ್ಲುವು. ಇವೆರಡರಲ್ಲಿ ಕೆಲವಿಷ್ಟು ಬದಲಾವಣೆಗಳಿದ್ದು ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು ಎಂದು ನಿರ್ಧರಿಸಿ.
ಫಿಕ್ಸೆಡ್ ಡೆಪಾಸಿಟ್ ಸ್ಕೀಮ್
ಇದು ಎಲ್ಲಾ ಬ್ಯಾಂಕು, ಸಹಕಾರಿ ಸಂಸ್ಥೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ದೊರೆಯುತ್ತದೆ. ನಿರ್ದಿಷ್ಟ ಮೊತ್ತದ ಹಣವನ್ನು ಒಮ್ಮೆ ಠೇವಣಿ ಇಟ್ಟರೆ ನಿಶ್ಚಿತ ವಾರ್ಷಿಕ ಬಡ್ಡಿದರದಲ್ಲಿ ಹಣ ಬೆಳೆದು ನಿಮಗೆ ಲಾಭ ತರುತ್ತದೆ. 7 ದಿನಗಳಿಂದ ಹಿಡಿದು 10 ವರ್ಷದವರೆಗೆ ಯಾವುದೇ ಅವಧಿಗೆ ನೀವು ಠೇವಣಿ ಇಡಬಹುದು. ಮಾಸಿಕವಾಗಿಯೋ, ತ್ರೈಮಾಸಿಕವಾಗಿಯೋ, ಅರ್ಧವಾರ್ಷಿಕವಾಗಿಯೋ ಬಡ್ಡಿ ಜಮೆ ಆಗುತ್ತಾ ಹೋಗುತ್ತದೆ.
ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ಗೆ ಶೇ. 8ರವರೆಗೂ ಬಡ್ಡಿ ಸಿಗುತ್ತದೆ. ಸಹಕಾರಿ ಬ್ಯಾಂಕುಗಳಲ್ಲಿ ಶೇ. 9ರವರೆಗೂ ಬಡ್ಡಿ ಸಿಗುತ್ತದೆ. ನಿಶ್ಚಿತ ಠೇವಣಿಗಳಲ್ಲಿ ಸಿಗುವ ಬಡ್ಡಿಹಣಕ್ಕೆ ಟಿಡಿಎಸ್ ಕಡಿತ ಆಗುತ್ತದಾದರೂ, ಐಟಿ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ಡಿಡಕ್ಷನ್ ಕ್ಲೇಮ್ ಮಾಡಲು ಸಾಧ್ಯ.
ಇದನ್ನೂ ಓದಿ: ಹೊಸ ಪಿಂಚಣಿ ಸ್ಕೀಮ್: ಶೇ. 40-45ರಷ್ಟು ಪಿಂಚಣಿ ಕೊಡುವ ಪ್ರಸ್ತಾಪ ಇಲ್ಲ ಎಂದ ಹಣಕಾಸು ಸಚಿವಾಲಯ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಬಗ್ಗೆ
ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸರ್ಕಾರದಿಂದ ನಡೆಸುವ ಉಳಿತಾಯ ಯೋಜನೆ. ಇದು ಈಗೀಗ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ಸಿಗತ್ತದೆ. ವಾರ್ಷಿಕವಾಗಿ ಬಡ್ಡಿ ಜಮೆ ಆಗುತ್ತದೆ.
ಪಿಪಿಎಫ್ ದೀರ್ಘಕಾಲದ ಹೂಡಿಕೆ ಇರುವ ಸ್ಕೀಮ್. ಇದರ ಕನಿಷ್ಠ ಅವಧಿ 15 ವರ್ಷದ್ದಾಗಿದೆ. ಇನ್ನೂ ಹೆಚ್ಚಿನ ಅವಧಿ ಬೇಕೆಂದರೆ 15 ವರ್ಷದ ಬಳಿಕ 5 ವರ್ಷಕ್ಕೊಮ್ಮೆ ವಿಸ್ತರಣೆ ಮಾಡಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ನಲ್ಲಿ ಕನಿಷ್ಠ ಹೂಡಿಕೆ ಒಂದು ವರ್ಷದಲ್ಲಿ 500 ರೂ, ಗರಿಷ್ಠ ಹೂಡಿಕೆ 1.5 ಲಕ್ಷ ರೂ ಇದೆ. ನೀವು ಒಮ್ಮೆಗೇ ಎಲ್ಲಾ ಹಣವನ್ನು ಕಟ್ಟಬಹುದು. ಅಥವಾ 12 ವರ್ಷಗಳವರೆಗೆ ವರ್ಷಕ್ಕೆ 1,50,000 ರೂ ಮೀರದಷ್ಟು ಹಣವನ್ನು ಕಟ್ಟುತ್ತಾ ಹೋಗಬಹುದು. ನೀವು ವರ್ಷಕ್ಕೆ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಹಣವನ್ನು ಕಟ್ಟಬಹುದಾದರೂ ಹೆಚ್ಚುವರಿ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ.
ಇದನ್ನೂ ಓದಿ: SB Account: ಎಫ್ಡಿ ಬೇಡ, ಆರ್ಡಿ ಬೇಡ; ಹಾಗೇ ಸುಮ್ಮನೆ ಹಣ ಇದ್ದರೂ ಶೇ. 7.50ರವರೆಗೆ ಬಡ್ಡಿ ಕೊಡುತ್ತೆ ಈ ಬ್ಯಾಂಕ್
ಪಿಪಿಎಫ್ನ ಪ್ರಮುಖ ಅನುಕೂಲಗಳಲ್ಲಿ ತೆರಿಗೆ ಉಳಿತಾಯ ಒಂದು. ಇದರ ಮೇಲಿನ ಹೂಡಿಕೆಗೆ ನೀವು ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು.
ಎಫ್ಡಿ ವರ್ಸಸ್ ಪಿಪಿಎಫ್, ಯಾವುದು ಬೆಟರ್?
ಪಿಪಿಎಫ್ಗೆ ಹೋಲಿಸಿದರೆ ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ. 10 ವರ್ಷಕ್ಕಿಂತ ಕಡಿಮೆ ಅವಧಿಗೆ ಗುರಿ ಮಾಡಿ ಹೂಡಿಕೆ ಮಾಡುವುದಾದರೆ ಎಫ್ಡಿ ಉತ್ತಮ ಆಯ್ಕೆಯಾಗಬಹುದು. ಆದರೆ, ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಮಾಡುವುದಾದರೆ ಮತ್ತು ತೆರಿಗೆ ಉಳಿತಾಯ ಪಡೆಯಬಯಸಿದರೆ ಪಿಪಿಎಫ್ ಉತ್ತಮ ಆಯ್ಕೆ ಆಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ