AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪಿಂಚಣಿ ಸ್ಕೀಮ್: ಶೇ. 40-45ರಷ್ಟು ಪಿಂಚಣಿ ಕೊಡುವ ಪ್ರಸ್ತಾಪ ಇಲ್ಲ ಎಂದ ಹಣಕಾಸು ಸಚಿವಾಲಯ

NPS vs OPS: ಕೇಂದ್ರ ಸರ್ಕಾರೀ ಉದ್ಯೋಗಿಗಳು ನಿವೃತ್ತರಾದ ಬಳಿಕ ಪಿಂಚಣಿ ನೀಡಲು ಹಳೆಯ ಸ್ಕೀಮ್ ಮತ್ತೆ ಜಾರಿಗೊಳಿಸುವಂತೆ ವಿವಿಧ ರಾಜ್ಯಗಳಲ್ಲಿ ಒತ್ತಾಯಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೊನೆಯ ಸಂಬಳದ ಶೇ. 40-45ರಷ್ಟು ಮೊತ್ತವನ್ನು ಪಿಂಚಣಿಯಾಗಿ ನಿಗದಿ ಮಾಡಲು ಕೇಂದ್ರ ಒಪ್ಪಿದೆ ಎನ್ನುವಂತಹ ಸುದ್ದಿ ಇತ್ತು. ಇದೀಗ ಇಂಥದ್ದೊಂದು ಪ್ರಸ್ತಾಪ ಪರಿಗಣನೆಯಲ್ಲಿ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೊಸ ಪಿಂಚಣಿ ಸ್ಕೀಮ್: ಶೇ. 40-45ರಷ್ಟು ಪಿಂಚಣಿ ಕೊಡುವ ಪ್ರಸ್ತಾಪ ಇಲ್ಲ ಎಂದ ಹಣಕಾಸು ಸಚಿವಾಲಯ
ಪಿಂಚಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 03, 2023 | 6:23 PM

Share

ನವದೆಹಲಿ, ಆಗಸ್ಟ್ 3: ಕೇಂದ್ರ ಸರ್ಕಾರೀ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ ಬೇಕೆಂಬ ಒತ್ತಾಯಗಳಿಗೆ ಸರ್ಕಾರ ಬಗ್ಗುವ ಸಾಧ್ಯತೆ ಇಲ್ಲ. ಕೊನೆಯ ಸಂಬಳದ ಶೇ. 40-45ರಷ್ಟು ಹಣವನ್ನು ಪಿಂಚಣಿಯಾಗಿ ಕೊಡಬೇಕೆನ್ನುವ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿಲ್ಲ ಎಂದು ಸರ್ಕಾರ ಹೇಳಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಂದರೆ ಹೊಸ ಪಿಂಚಣಿ ಸ್ಕೀಮ್​ನಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲು ಸರ್ಕಾರ ಸಿದ್ಧ ಇಲ್ಲ ಎನ್ನುವಂತಹ ಸಂದೇಶ ರವಾನೆಯಾಗಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಡಾ. ಕನ್ವರ್ ದೀಪ್ ಸಿಂಗ್ ಅವರು ಹೊಸ ಪಿಂಚಣಿ ಯೋಜನೆ ಕುರಿತು ಮಾಹಿತಿ ಕೋರುತ್ತಾ, ಯಾವುದಾದರೂ ಬದಲಾವಣೆ ಮಾಡಲಾಗುತ್ತಾ ಎಂದು ಕೇಳಿದರು. ಹಾಗೆಯೇ, ಉದ್ಯೋಗಿಯ ಸೇವಾವಧಿಯಲ್ಲಿ ತನ್ನ ಕೊನೆಯ ಸಂಬಳದ ಹಣದ ಶೇ. 40-45ರಷ್ಟು ಮೊತ್ತವನ್ನು ಉದ್ಯೋಗಿ ನಿವೃತ್ತಿನಂತರದ ಮಾಸಿಕ ಪಿಂಚಣಿಯಾಗಿ ನಿಗದಿ ಮಾಡುವ ಸಾಧ್ಯತೆ ಇದೆಯಾ ಎಂದು ನಿರ್ದಿಷ್ಟವಾಗಿ ಪ್ರಶ್ನೆ ಕೇಳಿದರು. ಇದಕ್ಕೆ ಕೇಂದ್ರ ಸಚಿವರು, ಅಂಥ ಯಾವುದೇ ಪ್ರಸ್ತಾಪದ ಪರಿಗಣನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Development: ಚೀನಾದ್ದು ಆಯಿತು, ಮುಂದೇನಿದ್ದರೂ ಭಾರತದ ಯುಗ; ಕಡಿಮೆ ತಲಾದಾಯವೇ ದೇಶದ ಓಟಕ್ಕೆ ಶಕ್ತಿ- ಮಾರ್ಗನ್ ಸ್ಟಾನ್ಲೀ

ಹಳೆಯ ಪಿಂಚಣಿ ವ್ಯವಸ್ಥೆಗೂ ಹೊಸ ಪಿಂಚಣಿ ವ್ಯವಸ್ಥೆಗೂ ಏನು ವ್ಯತ್ಯಾಸ?

ಸರ್ಕಾರಿ ಉದ್ಯೋಗಿಗಳಿಗೆ ಹೊಸ ಪಿಂಚಣಿ ವ್ಯವಸ್ಥೆ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್ ಅನ್ನು 2001ರಲ್ಲಿ ರೂಪಿಸಲಾಯಿತು. ಅದಕ್ಕೆ ಮುಂಚೆ ಇದ್ದ ಪಿಂಚಣಿ ಸ್ಕೀಮ್ ಅನ್ನು ಓಲ್ಡ್ ಪೆನ್ಷನ್ ಸಿಸ್ಟಂ ಅಥವಾ ಒಪಿಎಸ್ ಎನ್ನಲಾಗುತ್ತದೆ. ಓಪಿಎಸ್ ಪ್ರಕಾರ, ಉದ್ಯೋಗಿ ನಿವೃತ್ತರಾದಾಗ, ಅವರು ಪಡೆದ ಕೊನೆಯ ಸಂಬಳದ ಶೇ. 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನಿಗದಿ ಮಾಡಲಾಗುತ್ತಿತ್ತು.

ಇದನ್ನೂ ಓದಿ: Restriction: ಕಂಪ್ಯೂಟರ್, ಲ್ಯಾಪ್​ಟಾಪ್, ಟ್ಯಾಬ್ಲೆಟ್​ಗಳ ಆಮದು ಮೇಲೆ ನಿರ್ಬಂಧ; ತತ್​ಕ್ಷಣದಿಂದಲೇ ಆಜ್ಞೆ ಜಾರಿ

ಹೊಸ ಪಿಂಚಣಿ ಸ್ಕೀಮ್ ಬಂದಾಗ ಸಂಬಳದ ನಿರ್ದಿಷ್ಟ ಭಾಗವನ್ನು ಪಿಂಚಣಿಯಾಗಿ ನಿಗದಿ ಮಾಡುವ ಕ್ರಮವನ್ನು ಹಿಂಪಡೆಯಲಾಗಿತ್ತು. ಉದ್ಯೋಗಿ ಸಂಬಳದಲ್ಲಿ ಕಡಿತ ಮಾಡುತ್ತಾ ಬಂದು ಕೂಡಿಸಿಟ್ಟ ಹಣವನ್ನು ಈಕ್ವಿಟಿ ಮತ್ತಿತರ ಕಡೆ ಹೂಡಿಕೆ ಮಾಡಿ, ಅದರಿಂದ ಬೆಳೆಯುವ ಹಣವನ್ನು ಉದ್ಯೋಗಿಯ ನಿವೃತ್ತಾನಂತರದ ಪಿಂಚಣಿಗೆ ಕೊಡಲಾಗುತ್ತದೆ.

ನ್ಯಾಷನಲ್ ಪೆನ್ಷನ್ ಸ್ಕೀಮ್ ಈಗ ಕೇಂದ್ರ ಉದ್ಯೋಗಿಗಳಿಗೆ ಮಾತ್ರವಲ್ಲ, ಸಾರ್ವತ್ರಿಕವಾಗಿ ಲಭ್ಯ ಇರುವ ಪಿಂಚಣಿ ಯೋಜನೆಯಾಗಿದೆ. ಷೇರುಮಾರುಕಟ್ಟೆಯ ಬೆಳವಣಿಗೆಗೆ ಜೋಡಿತವಾಗಿರುವ ಈ ಪೆನ್ಷನ್ ಸ್ಕೀಮ್ ಅನ್ನು 6.53 ಕೋಟಿ ಮಂದಿ ಪಡೆದಿದ್ದಾರೆ. ಇದರಲ್ಲಿ ಅಟಲ್ ಪೆನ್ಷನ್ ಸ್ಕೀಮ್ ಅನ್ನು ಪಡೆದವರೇ 4 ಕೋಟಿಗೂ ಹೆಚ್ಚು. ಆದರೆ, ಸರ್ಕಾರಿ ಉದ್ಯೋಗಿಗಳಿಗೆ ಹಿಂದೆ ಇದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮರಳಿ ಜಾರಿಗೆ ತನ್ನಿ ಎಂದು ವಿಪಕ್ಷಗಳು ವಿವಿಧ ರಾಜ್ಯಗಳಲ್ಲಿ ಹೋರಾಟ ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್