Masked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್

|

Updated on: Jun 08, 2023 | 2:42 PM

How To Get Masked Aadhaar: ಆಧಾರ್ ಕಾರ್ಡ್​ನಲ್ಲಿ ಪೂರ್ಣ 12 ಅಂಕಿಗಳ ಬದಲು 8 ಅಂಕಿಗಳು ಕಾಣುವ ಫೀಚರ್ ಅನ್ನು ಯುಐಡಿಎಐ ನೀಡುತ್ತದೆ. ಗೌಪ್ಯತೆ ರಕ್ಷಣೆ ಬಯಸುವವರಿಗೆ ಈ ಮಸುಕುಮಾಡಿದ ಆಧಾರ್ ಕಾರ್ಡ್ ಅನುಕೂಲವಾಗುತ್ತದೆ.

Masked Aadhaar: ಮಸುಕು ಮಾಡಿದ ಆಧಾರ್ ಕಾರ್ಡ್ ಯಾಕೆ ಅಗತ್ಯ? ಹೇಗೆ ಪಡೆಯುವುದು, ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್
Follow us on

ಆಧಾರ್ ಕಾರ್ಡ್​ನಲ್ಲಿ ವೈಯಕ್ತಿಕ ಮಾಹಿತಿ ಕಳುವಾಗುತ್ತದೆ ಎಂದು ಹಲವರು ಅಳುಕುವುಂಟು. ಈ ಭಯ ನಿವಾರಣೆಗೆ ಯುಐಡಿಎಐ ಮಸುಕು ಮಾಡಿದ ಆಧಾರ್ ಕಾರ್ಡ್ (Aadhaar Card) ಸೌಲಭ್ಯ ನೀಡಿದೆ. ಈ ಮಾಸ್ಕ್ಡ್ ಆಧಾರ್​ನಲ್ಲಿ (Masked Aadhaar) ಹೆಚ್ಚಿನ ಮಾಹಿತಿ ಹೊರಗೆ ಕಾಣುವುದಿಲ್ಲ. ವ್ಯಕ್ತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಇಂಥ ಫೀಚರ್ ಅನ್ನು ಜಾರಿಗೆ ತರಲಾಗಿದೆ. ಈ ಮಸುಕಾದ ಆಧಾರ್​ನಲ್ಲಿ ಪೂರ್ಣ 12 ಅಂಕಿಗಳು ಕಾಣುವುದಿಲ್ಲ. ಕೆಲವೇ ಅಂಕಿಗಳಿದ್ದು ಉಳಿದವನ್ನು ಮಾಸ್ಕ್ ಮಾಡಲಾಗಿರುತ್ತದೆ. ಒಟ್ಟು 12 ಅಂಕಿಗಳ ಪೈಕಿ ಮೊದಲ 8 ಅಂಕಿಗಳು ಕಾಣುತ್ತವೆ. ಉಳಿದ 4 ಅಂಕಿಗಳ ಜಾಗದಲ್ಲಿ X ಕಾಣುತ್ತದೆ. ಆದರೆ, ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೆಸರು, ಫೋಟೋ, ಕ್ಯೂಆರ್ ಕೋಡ್ ಇತ್ಯಾದಿ ಡೆಮಾಗ್ರಾಫಿಕ್ ಮಾಹಿತಿ ಮಾತ್ರ ಕಾಣುತ್ತದೆ.

ಮಸುಕು ಮಾಡಿದ ಆಧಾರ್​ನಿಂದ ಏನು ಉಪಯೋಗ?

  • ಗೌಪ್ಯತೆಯ ಪಾಲನೆ
  • ಆಧಾರ್ ನಂಬರ್ ದುರ್ಬಳಕೆ ಆಗದಂತೆ ತಡೆಯುವುದು
  • ಮಸುಕು ಮಾಡಿದ ಆಧಾರ್ ಕೂಡ ಅಧಿಕೃತ ದಾಖಲೆಯಾಗಿರುತ್ತದೆ.

ನೀವು ಯಾರಿಗಾದರೂ ಆಧಾರ್ ದಾಖಲೆ ನೀಡುವ ಅಗತ್ಯ ಇದ್ದರೆ ನಿಶ್ಚಿಂತೆಯಿಂದ ಮಾಸ್ಕ್ಡ್ ಆಧಾರ್ ಅನ್ನು ಕೊಡಬಹುದು. ಇದರಿದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗಬಹುದು ಎನ್ನುವ ಭಯ ಇರುವುದಿಲ್ಲ.

ಇದನ್ನೂ ಓದಿGpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ

ಮಸುಕು ಮಾಡಿದ ಆಧಾರ್ ಎಲ್ಲಿ ಪಡೆಯುವುದು?

ಇದನ್ನು ಯುಐಡಿಎಐನ ಅಧಿಕೃತ ವೆಬ್​ಸೈಟ್ ಮೂಲಕವೇ ಪಡೆಯಬಹುದು. ಅದರ ಕ್ರಮಗಳು ಇಲ್ಲಿವೆ

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ
  • ವೆಬ್​ಸೈಟ್​ನಲ್ಲಿ ಮೈ ಆಧಾರ್ ಸೆಕ್ಷನ್ ಅಡಿಯಲ್ಲಿ ಡೌನ್​ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಆಧಾರ್ ಕಾರ್ಡ್​ನ 12 ಅಂಕಿಗಳನ್ನು ನಮೂದಿಸಿ. ಅಥವಾ 16 ಅಂಕಿಗಳ ವರ್ಚುವಲ್ ಐಡಿ ನಂಬರ್ ನಮೂದಿಸಿ.
  • ನಿಮ್ಮ ಹೆಸರು, ಪಿನ್ ಕೋಡ್ ಮತ್ತು ಸೆಕ್ಯೂರಿಟಿ ಕೋಡ್ ಮೊದಲಾದ ವಿವರ ತುಂಬಿರಿ
  • ಬಳಿಕ ಸೆಲೆಕ್ಟ್ ಯುವರ್ ಪ್ರಿಫರೆನ್ಸ್ ಸೆಕ್ಷನ್​ನಲ್ಲಿ ಮಾಸ್ಕ್ಡ್ ಆಧಾರ್ ಆಯ್ಕೆ ಆರಿಸಿಕೊಳ್ಳಿ.
  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಒಟಿಪಿ ಬರುವ ಆಯ್ಕೆ ಅರಿಸಿ.
  • ಒಟಿಪಿ ಬಂದ ಬಳಕ ಅದನ್ನು ನಮೂದಿಸಿದರೆ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಈಗ ನೀವು ಮಸುಕುಮಾಡಿದ ಆಧಾರ್ ಅನ್ನು ಪಿಡಿಎಫ್ ಫೈಲ್​ನಲ್ಲಿ ಡೌನ್​​ಲೋಡ್ ಮಾಡಿಕೊಳ್ಳಬಹುದು. ಪಾಸ್​ವರ್ಡ್ ರಕ್ಷಣೆ ಒಳಗೊಂಡಿರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ