ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಅತಿಹೆಚ್ಚು ರಿಟರ್ನ್ಸ್ ತಂದುಕೊಟ್ಟ ಮಲ್ಟಿಬ್ಯಾಗರ್ ಸ್ಟಾಕ್ಗಳ (Multibagger Stock) ಪೈಕಿ ಜೈಮಾತಾ ಗ್ಲಾಸ್ ಲಿಮಿಟೆಡ್ (Jai Mata Glass Ltd) ಕಂಪನಿಯ ಷೇರು ಮುಂಚೂಣಿಯಲ್ಲಿದೆ. ಈ ಸ್ಮಾಲ್ ಕ್ಯಾಪ್ ಷೇರು ಹೂಡಿಕೆದಾರರಿಗೆ ಒಂದೇ ತಿಂಗಳಿನಲ್ಲಿ ಶೇಕಡಾ 200ರ ರಿಟರ್ನ್ಸ್ ತಂದುಕೊಟ್ಟಿದೆ. ಈ ಷೇರು ನಿರಂತರವಾಗಿ ಉತ್ತಮ ವಹಿವಾಟು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2023ರ ಎಲ್ಲ ಟ್ರೇಡಿಂಗ್ ಸೆಷನ್ಗಳಲ್ಲಿಯೂ ಜೈಮಾತಾ ಗ್ಲಾಸ್ ಲಿಮಿಟೆಡ್ ಷೇರು ಅಪ್ಪರ್ ಸರ್ಕ್ಯೂಟ್ನಲ್ಲೇ ವಹಿವಾಟು ನಡೆಸಿದೆ. ಷೇರಿನ ಬೆಲೆ 0.49ರಿಂದ 1.58 ರೂ.ಗೆ ಹೆಚ್ಚಳವಾಗುವ ಮೂಲಕ ಶೇಕಡಾ 200ರಷ್ಟು ರಿಟರ್ನ್ಸ್ ತಂದುಕೊಟ್ಟಿದೆ. ಕಳೆದ ಆರು ತಿಂಗಳುಗಳಲ್ಲಿ ಈ ಪೆನ್ನಿ ಸ್ಟಾಕ್ 0.38ರಿಂದ 1.58 ರೂ.ವರೆಗೆ ಮೌಲ್ಯ ವೃದ್ಧಿಸಿಕೊಂಡಿದ್ದು, ಒಟ್ಟಾರೆಯಾಗಿ ಹೂಡಿಕೆದಾರರಿಗೆ ಶೇಕಡಾ 315ರ ಗಳಿಕೆ ತಂದುಕೊಟ್ಟಿದೆ. ದೀರ್ಘಾವಧಿಯ ಹೂಡಿಕೆದಾರರು ಶೇಕಡಾ 225ರ ವರೆಗೆ ರಿಟರ್ನ್ಸ್ ಗಳಿಸಿದ್ದಾರೆ.
ಜೈಮಾತಾ ಗ್ಲಾಸ್ ಲಿಮಿಟೆಡ್ನಲ್ಲಿ ಒಂದು ವಾರದ ಹಿಂದೆ ಹೂಡಿಕೆದಾರರೊಬ್ಬರು 1 ಲಕ್ಷ ರೂ. ಹೂಡಿಕೆ ಮಾಡಿದ್ದರು ಎಂದಿಟ್ಟುಕೊಂಡರೆ, ಅವರ ಸಂಪತ್ತು ಈಗ ಈಗಿನ ಷೇರು ಮೌಲ್ಯ ಲೆಕ್ಕಾಚಾರದ ಪ್ರಕಾರ, 1.20 ಲಕ್ಷ ರೂ. ಆಗಿರುತ್ತದೆ. ಒಂದು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಅದೀಗ 3 ಲಕ್ಷ ರೂ. ಆಗಿರುತ್ತದೆ. ಆರು ತಿಂಗಳ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಈಗ 4.15 ಲಕ್ಷ ರೂ. ಆಗಿರುತ್ತದೆ. ಒಂದು ವರ್ಷದ ಹಿಂದೆ 1 ಲಕ್ಷ ರೂ. ಹೂಡಿಕೆ ಮಾಡಿದ್ದರೆ ಇದೀಗ 3.25 ಲಕ್ಷ ರೂ. ರಿಟರ್ನ್ಸ್ ಬಂದಿರುತ್ತದೆ. ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಬಿಎಸ್ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಯಲ್ಲಿ ಮಾತ್ರ ಲಭ್ಯವಿದೆ.
ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಅಥವಾ ಷೇರು ಎಂದರೆ ಅತಿ ಕಡಿಮೆ ಬೆಲೆಗೆ ಷೇರು ಮಾರುಕಟ್ಟೆಯಲ್ಲಿ ದೊರೆಯುವ ಷೇರುಗಳಾಗಿವೆ. ಸಾಮಾನ್ಯವಾಗಿ ಹೂಡಿಕೆಯ ಸಂದರ್ಭದಲ್ಲಿ ಅತಿ ಕಡಿಮೆ ಮುಖ ಬೆಲೆಗೆ ಬಿಡುಗಡೆ ಮಾಡಿರುವ ಷೇರುಗಳನ್ನು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ; ಒಬ್ಬ ಹೂಡಿಕೆದಾರ ನಿರ್ದಿಷ್ಟ ಅವಧಿಗೆ 5 ರೂ. ಹೂಡಿಕೆ ಮಾಡಿ ಒಂದು ಷೇರು ಕೊಳ್ಳುತ್ತಾನೆ ಎಂದುಕೊಂಡರೆ, ಅದು ಆತನಿಗೆ 10 ರೂ. ರಿಟರ್ನ್ಸ್ ತಂದುಕೊಟ್ಟರೆ ಅದನ್ನು ಎರಡು ಬ್ಯಾಗರ್ ಷೇರು ಎಂದು ಕರೆಯಲಾಗುತ್ತದೆ. ಇದೇ ರೀತಿ ಹಲವು ಪಟ್ಟು ರಿಟರ್ನ್ಸ್ ತಂದುಕೊಡುವ ಷೇರುಗಳು ಮಲ್ಟಿಬ್ಯಾಗರ್ ಎಂದು ಪರಿಗಣಿಸಲ್ಪಡುತ್ತವೆ.