ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಯಸುವ ಜನರಲ್ಲಿ ಹೆಚ್ಚಿನವರು ಎಸ್ಐಪಿ (Mutual Fund SIP) ಮಾರ್ಗ ಹಿಡಿಯುತ್ತಾರೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ನಲ್ಲಿ ಜನರು ಆರ್ಡಿ (RD- Recurring Deposit) ರೀತಿಯಲ್ಲಿ ಪ್ರತೀ ತಿಂಗಳು ನಿಯಮಿತವಾಗಿ ನಿಗದಿತ ಕಂತನ್ನು ಪಾವತಿಸಬಹುದು. ಹೆಚ್ಚಿನ ಮ್ಯೂಚುವಲ್ ಫಂಡ್ಗಳು ದೀರ್ಘಾವಧಿಯಲ್ಲಿ ವರ್ಷಕ್ಕೆ ಶೇ. 10ರಿಂದ 20ರಂತೆ ಲಾಭ ತರಬಹುದು. ಷೇರುಗಳ ಮೇಲೆ ನೇರವಾಗಿ ಹೂಡಿಕೆ ಮಾಡುವುದು ಹೆಚ್ಚಿನ ಜನರಿಗೆ ರಿಸ್ಕಿ ಎನಿಸಬಹುದು. ಹೀಗಾಗಿ, ಮ್ಯೂಚುವಲ್ ಫಂಡ್ ಬಹಳ ಜನಪ್ರಿಯವಾಗಿದೆ. ಲಂಪ್ಸಮ್ ಹಣ ಇಲ್ಲದಿದ್ದರೆ ಎಸ್ಐಪಿ ಮೂಲಕ ಹೂಡಿಕೆ ಮಾಡುವುದು ಇನ್ನೂ ಸುಗಮವಾದ ಸಂಗತಿ.
ಎಸ್ಐಪಿ ಆಯ್ದುಕೊಂಡರೆ ಸಾಲಕ್ಕೆ ಕಂತುಗಳನ್ನು ಕಟ್ಟುವ ರೀತಿಯಲ್ಲೇ ನಿಯಮಿತವಾಗಿ ಎಸ್ಐಪಿ ಕಂತುಗಳನ್ನು ಪಾವತಿಸಬೇಕು. ಬ್ಯಾಂಕುಗಳ ಸಾಲದ ಕಂತುಗಳನ್ನು ಕಟ್ಟದಿದ್ದರೆ ದಂಡ ವಿಧಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ಗೆ ಹೊಡೆತ ಬೀಳುತ್ತದೆ. ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಕಂತು ಕಟ್ಟುವುದು ತಪ್ಪಿದರೆ ಇದೇ ರೀತಿ ದಂಡ ಬೀಳುತ್ತಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?
ಇದನ್ನೂ ಓದಿ: ಸಂಬಳ ಕಡಿಮೆಯಾ? ಆದರೂ ಒಂದು ಕೋಟಿ ರೂ ಕೂಡಿಡಬಹುದು; ಇಲ್ಲಿದೆ ಟಿಪ್ಸ್
ಎಸ್ಐಪಿಯಲ್ಲಿ ಒಂದು ಅಥವಾ ಎರಡು ಕಂತು ಕಟ್ಟದೇ ಹೋದರೆ ತೊಂದರೆ ಇಲ್ಲ. ದಂಡ ವಿಧಿಸಲಾಗುವುದಿಲ್ಲ. ಆದರೆ, ಸತತ ಮೂರು ಕಂತುಗಳನ್ನು ಕಟ್ಟಲು ವಿಫಲವಾದಲ್ಲಿ ನಿಮ್ಮ ಎಸ್ಐಪಿ ರದ್ದುಗೊಳ್ಳಬಹುದು. ಇದು ಬಹಳ ಮುಖ್ಯ.
ಎಸ್ಐಪಿ ಕಂತು ಕಟ್ಟಲು ವಿಫಲವಾಗುವುದರಿಂದ ಇತರ ಕೆಲ ಹಿನ್ನಡೆಗಳಾಗಬಹುದು. ನಿಮ್ಮ ಹೂಡಿಕೆಯಿಂದ ಸಿಗಬಹುದಾದ ಲಾಭ ತುಸು ಕಡಿಮೆ ಆಗಬಹುದು. ನಿಮ್ಮ ಹಣಕಾಸು ಶಿಸ್ತು ಸಡಿಲಗೊಂಡಂತಾಗಬಹುದು. ಇವು ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಎಸ್ಐಪಿ ಕಂತು ಮಿಸ್ ಆಯಿತೆಂದು ಪರಿತಪಿಸಬೇಕಿಲ್ಲ.
ಇದನ್ನೂ ಓದಿ: 40ರ ಬಳಿಕ ಮನೆ ಮಾಡಲು ಹೊರಟಿದ್ದೀರಾ? ಈ ಅಂಶಗಳು ಗಮನದಲ್ಲಿರಲಿ
ಸತತ ಮೂರು ಬಾರಿ ಕಂತು ಕಟ್ಟುವುದು ತಪ್ಪದಂತೆ ಎಚ್ಚರ ವಹಿಸಿ. ಸಾಧ್ಯವಾದಷ್ಟೂ ಪ್ರತೀ ತಿಂಗಳು ನಿಯಮಿತವಾಗಿ ಕಂತು ಕಟ್ಟಿರಿ. ಆಟೊಮ್ಯಾಟಿಕ್ ಪೇಮೆಂಟ್ ಆಗುವಂತೆ ಎಸ್ಐಪಿ ಸೆಟ್ ಮಾಡಿ. ಪಾವತಿ ದಿನದಂದು ಬ್ಯಾಂಕ್ನಲ್ಲಿ ಅಷ್ಟು ಫಂಡ್ ಇರುವುದನ್ನು ಖಾತ್ರಿಪಡಿಸಿಕೊಳ್ಳಿ.
ಮ್ಯೂಚುವಲ್ ಫಂಡ್ ಎಸ್ಐಪಿ ದೀರ್ಘಾವಧಿ ಹೂಡಿಕೆಗೆ ಅತ್ಯುತ್ತಮವಾಗಿದೆ. ಹೀಗಾಗಿ, ನೀವು ಹಣಕಾಸು ಶಿಸ್ತು ಸಾಧಿಸುವುದು ಅನಿವಾರ್ಯವಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 24 May 24