ನವದೆಹಲಿ: ಹೊಸ ವರ್ಷದಲ್ಲಿ ಉಳಿತಾಯ ಹೆಚ್ಚಿಸುವ ಉದ್ದೇಶದೊಂದಿಗೆ ಅಂಚೆ ಇಲಾಖೆಯ ಟರ್ಮ್ ಡಿಪಾಸಿಟ್ (post office term deposits), ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆಯ (senior citizen savings scheme) ಮೇಲಿನ ಬಡ್ಡಿ ದರವನ್ನು (Interest Rate) ಕೇಂದ್ರ ಸರ್ಕಾರ ಹೆಚ್ಚಿಸಿದೆ. ಜನವರಿ 1ರಿಂದ ಪರಿಷ್ಕೃತ ಬಡ್ಡಿ ದರ ಜಾರಿಗೆ ಬರಲಿದೆ. ಒಟ್ಟಾರೆಯಾಗಿ ಎಲ್ಲ ಠೇವಣಿಗಳ ಮೇಲೆ ಶೇಕಡಾ 1.1ರಷ್ಟು ಬಡ್ಡಿ ದರ ಹೆಚ್ಚಾಗಲಿದೆ. ಆದರೆ, ಪಿಪಿಎಫ್ ಮತ್ತು ಹೆಣ್ಣುಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿಯ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ ಅಥವಾ ಎನ್ಎಸ್ಸಿ ಬಡ್ಡಿ ದರ ಜನವರಿ 1ರಿಂದ ಶೇಕಡಾ 7ರಷ್ಟಾಗಲಿದೆ. ಸದ್ಯ ಇದು ಶೇಕಡಾ 6.8 ಇದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಈಗ ಶೇಕಡಾ 7.6 ಇರುವುದು ಶೇಕಡಾ 8 ಆಗಲಿದೆ. 1ರಿಂದ 5 ವರ್ಷಗಳ ಅವಧಿಯ ಅಂಚೆ ಕಚೇರಿ ಟರ್ಮ್ ಡಿಪಾಸಿಟ್ ಬಡ್ಡಿ ದರ ಶೇಕಡಾ 1.1ರಷ್ಟು ಹೆಚ್ಚಿಸಲಾಗಿದೆ. ತಿಂಗಳ ಆದಾಯ ಯೋಜನೆಯ ಬಡ್ಡಿ ದರವನ್ನು ಶೇಕಡಾ 6.7ರಿಂದ ಶೇಕಡಾ 7.1ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: India Post Payments Bank: ಅಂಚೆ ಇಲಾಖೆಯಿಂದ ಕೇವಲ 399 ರೂ.ಗೆ ಅಪಘಾತ ವಿಮೆ, 10 ಲಕ್ಷ ರೂ. ಕವರೇಜ್
Govt of India increases interest rates on small saving schemes upto 1.1% for the January to March 2023 quarter pic.twitter.com/1UYg92WZjt
— ANI (@ANI) December 30, 2022
ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಸ್ಕೀಮ್ ಸ್ಥಿರ ಠೇವಣಿ ಯೋಜನೆ ಮೂಲಕ ಸರ್ಕಾರ ಈಗಾಗಲೇ ವಿವಿಧ ಬ್ಯಾಂಕ್ಗಳ ಎಫ್ಡಿ ಬಡ್ಡಿ ದರಕ್ಕಿಂತಲೂ ಹೆಚ್ಚಿನ ಬಡ್ಡಿ ನೀಡುತ್ತಿದೆ. ಟೈಮ್ ಡಿಪಾಸಿಟ್ ಸ್ಕೀಮ್ ಅಡಿ ಕನಿಷ್ಠ 1 ವರ್ಷ ಹಾಗೂ ಗರಿಷ್ಠ 5 ವರ್ಷಗಳ ವರೆಗೆ ಠೇವಣಿ ಇಡಬಹುದು. 200 ರೂ. ಮತ್ತು ಇದರ ಮಲ್ಟಿಪಲ್ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಸಮೀಪದ ಅಂಚೆ ಕಚೇರಿಗೆ ತೆರಳಿ ಅಥವಾ ಆನ್ಲೈನ್ ಮೂಲಕ ಠೇವಣಿ ತೆರೆಯಬಹುದಾಗಿದೆ. ವೈಯಕ್ತಿಕವಾಗಿ ಮತ್ತು ಜಂಟಿ ಖಾತೆಗಳನ್ನು ತೆರೆಯಲೂ ಅವಕಾಶವಿದೆ. ಬಡ್ಡಿಯನ್ನು ತಿಂಗಳಿಗೊಮ್ಮೆ, ತ್ರೈಮಾಸಿಕ ಅವಧಿಗೊಮ್ಮೆ, ಅರ್ಧ ವಾರ್ಷಿಕ ಹಾಗೂ ಮೆಚ್ಯೂರಿಟಿಗೆ ಪಡೆಯಲು ಅವಕಾಶವಿದೆ. ಬ್ಯಾಂಕ್ ಎಫ್ಡಿಗಿಂತ ಹೆಚ್ಚು ಬಡ್ಡಿ ಈ ಯೋಜನೆಯಲ್ಲಿ ದೊರೆಯುತ್ತದೆ. ಬ್ಯಾಂಕ್ಗಳ ಎಫ್ಡಿ ದರ ಸರಾಸರಿ ಶೇಕಡಾ 5.5ರಿಂದ 6.5ರ ವರೆಗೆ ಇದ್ದರೆ ಅಂಚೆ ಇಲಾಖೆ ಟೈಮ್ ಡಿಪಾಸಿಟ್ ಸ್ಕೀಮ್ ಬಡ್ಡಿ ದರ ಸರಾಸರಿ ಶೇಕಡಾ 5.5ರಿಂದ 6.7ರ ವರಗೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Fri, 30 December 22