AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಪಿ ಇಲ್ಲದೇ ಯುಪಿಐ ಆಟೊ ಪೇಮೆಂಟ್; ಮಿತಿ 1 ಲಕ್ಷ ರೂಗೆ ಏರಿಕೆ: ಆರ್​ಬಿಐ ಪ್ರಕಟಣೆ

UPI Autopay Limit Increase: ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುವ ಯುಪಿಐ ಆಟೊಪೇ ಮಿತಿಯನ್ನು 15,000 ರೂನಿಂದ 1 ಲಕ್ಷ ರೂಗೆ ಏರಿಸಲಾಗಿದೆ. ನಿಯಮಿತವಾಗಿ ದೊಡ್ಡ ಮೊತ್ತದ ಪಾವತಿ ಅಗತ್ಯ ಇರುವ ಸೇವೆಗಳಿಗೆ ಈ ಸೌಲಭ್ಯವನ್ನು ಆರ್​ಬಿಐ ಕಲ್ಪಿಸಿದೆ. ಮ್ಯುಚುವಲ್ ಫಂಡ್ ಎಸ್​ಐಪಿ, ಇನ್ಷೂರೆನ್ಸ್ ಪ್ರೀಮಿಯಮ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಗೆ ಈ 1 ಲಕ್ಷ ರೂ ಮಿತಿಹೆಚ್ಚಳ ಅನ್ವಯ ಆಗುತ್ತದೆ.

ಒಟಿಪಿ ಇಲ್ಲದೇ ಯುಪಿಐ ಆಟೊ ಪೇಮೆಂಟ್; ಮಿತಿ 1 ಲಕ್ಷ ರೂಗೆ ಏರಿಕೆ: ಆರ್​ಬಿಐ ಪ್ರಕಟಣೆ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 08, 2023 | 4:26 PM

Share

ನವದೆಹಲಿ, ಡಿಸೆಂಬರ್ 8: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಶುಕ್ರವಾರ (ಡಿ. 8) ಯುಪಿಐ ಇ-ಮ್ಯಾಂಡೇಟ್​ನ (e-Mandate) ಮಿತಿಯನ್ನು 1 ಲಕ್ಷ ರುಪಾಯಿಗೆ ಹೆಚ್ಚಿಸಿದೆ. ಸ್ವಯಂಚಾಲಿತವಾಗಿ ಹಣ ಮುರಿದುಕೊಳ್ಳುವ ಈ ಆಟೊ ಡೆಬಿಟ್ (Auto debit) ವ್ಯವಸ್ಥೆಯನ್ನು ಮ್ಯುಚುವಲ್ ಫಂಡ್ ಎಸ್​ಐಪಿ, ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ ಇತ್ಯಾದಿಗೆ ಬಳಸಬಹುದು. ಕ್ರೆಡಿಟ್ ಕಾರ್ಡ್ ಪಾವತಿಗೂ ಈ ಆಟೊ ಡೆಬಿಟ್ ಬಳಸಬಹುದು.

ಈ ಮುಂಚೆ ಪ್ರತೀ ವಹಿವಾಟಿಗೆ ಆಟೊ ಡೆಬಿಟ್ ಮಿತಿ 15,000 ರೂ ಇತ್ತು. ಅಂದರೆ, ಒಮ್ಮೆಗೆ 15,000 ರೂವರೆಗಿನ ಮೊತ್ತವನ್ನು ಮಾತ್ರ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳಲು ಮಿತಿ ಇತ್ತು. ಅದಕ್ಕಿಂತ ಹೆಚ್ಚಿನ ಮೊತ್ತ ಆಟೊ ಡೆಬಿಟ್ ಆಗಲು ಸಾಧ್ಯವಿರಲಿಲ್ಲ. ಹಾಗೊಂದು ವೇಳೆ ಆಟೊ ಡೆಬಿಟ್ ಮಾಡಬೇಕೆಂದರೂ ಒಟಿಪಿ ಮೂಲಕ ದೃಢೀಕರಿಸಬೇಕಿತ್ತು. ಈಗ ಆಟೊ ಡೆಬಿಟ್ ಮಿತಿಯನ್ನು 15,000 ರೂನಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Jeevan Utsav: ಎಲ್​ಐಸಿಯಿಂದ ಇಂದು ಹೊಸ ಜೀವನ್ ಉತ್ಸವ್ ಪಾಲಿಸಿ ಬಿಡುಗಡೆ; ಇದರ ವಿಶೇಷತೆಗಳೇನು?

ಮ್ಯೂಚುವಲ್ ಫಂಡ್​ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್, ಇನ್ಷೂರೆನ್ಸ್ ಪ್ರೀಮಿಯಮ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಯಲ್ಲಿ 15,000 ರೂಗಿಂತ ಹೆಚ್ಚಿನ ಮೊತ್ತದ ವಹಿವಾಟು ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಮಿತಿಯನ್ನು ಆರ್​ಬಿಐ ಹೆಚ್ಚಿಸಿದೆ.

ಏನಿದು ಯುಪಿಐ ಆಟೊ ಡೆಬಿಟ್?

ಯುಪಿಐ ಆಟೊಪೇ ಎಂದೇ ಇದು ಜನಪ್ರಿಯವಾಗಿದೆ. ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ಪ್ಲಾಟ್​ಫಾರ್ಮ್​ನಲ್ಲಿ ನಿಮ್ಮ ಮೊಬೈಲ್ ಬಿಲ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸ್ವಯಂ ಚಾಲಿತವಾಗಿ ಪಾವತಿಯಾಗುವಂತೆ ಮಾಡಬಹುದು. ಮೊಬೈಲ್ ಬಿಲ್ ಬಂದಾಗ ನಿಮ್ಮ ಬ್ಯಾಂಕ್ ಖಾತೆಯಿಂದ ಅಷ್ಟು ಹಣ ಸ್ವಯಂಚಾಲಿವಾಗಿ ಕಡಿತಗೊಳ್ಳುತ್ತದೆ.

ಇದನ್ನೂ ಓದಿ: Post Office Fixed Deposit: ಪೋಸ್ಟ್ ಆಫೀಸ್ ಎಫ್​ಡಿ ಹಣ ಹಿಂಪಡೆಯುವ ಮುನ್ನ ಈ ಮಹತ್ವದ ನಿಯಮ ಬದಲಾವಣೆ ತಿಳಿದಿರಿ

ಭಾರತದಲ್ಲಿ ಈ ರೀತಿ ಆಟೊ ಡೆಬಿಟ್​ಗೆ ನೊಂದಣಿಯಾದ ಸರ್ವಿಸ್ ಸಂಖ್ಯೆ 8.5 ಕೋಟಿಯಷ್ಟಿದೆ. ಇವುಗಳಿಂದ ತಿಂಗಳಿಗೆ ಒಟ್ಟು 2,800 ಕೋಟಿ ರೂನಷ್ಟು ವಹಿವಾಟು ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!