ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…

Good debt vs Bad debt: ಬ್ಯಾಂಕಿಂಗ್ ವ್ಯವಹಾರದಲ್ಲಿ ಕೆಟ್ಟ ಸಾಲ ಕೇಳಿದ್ದೇವೆ. ಬ್ಯಾಂಕ್​ಗೆ ಲಾಭ ತಂದುಕೊಡದ ಸಾಲವನ್ನು ಎನ್​ಪಿಎ ಅಥವಾ ಕೆಟ್ಟ ಸಾಲ ಎನ್ನುತ್ತಾರೆ. ವೈಯಕ್ತಿಕ ಜೀವನದಲ್ಲಿ ಕೆಟ್ಟ ಸಾಲ ಎಂದರೆ ಆ ಸಾಲದಿಂದ ಖರೀದಿಸಿದ ವಸ್ತುವಿನಿಂದ ಲಾಭ ಸಿಗದೇ ಹೋಗುವುದು. ಸಾಲ ಮಾಡಿ ಪಡೆದ ವಸ್ತು ದೀರ್ಘಾವಧಿಯಲ್ಲಿ ಮೌಲ್ಯ ಹೆಚ್ಚುತ್ತಾ ಹೋದರೆ, ಅಥವಾ ಒಳ್ಳೆಯ ಲಾಭ ತಂದರೆ ಅದು ಒಳ್ಳೆಯ ಸಾಲ.

ಸಾಲ ಬಳಸಿ ಸಾಹುಕಾರರಾದವರಿದ್ದಾರೆ... ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ...
ಸಾಲ

Updated on: Oct 31, 2025 | 5:22 PM

ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುತ್ತಾರೆ. ಸಾಲದ ಶೂಲಕ್ಕೆ ಸಿಲುಕಬೇಡ ಎಂದೂ ಹಿರಿಯರು ಹೇಳುತ್ತಾರೆ. ಎರಡೂ ನಿಜವೇ. ಸಾಲ ಮಾಡದೇ ಜೀವನ ನಡೆಸುವುದು ಕಷ್ಟ. ಕೆಲವರು ಸಾಲಕ್ಕೆ ಸಿಲುಕಿ ನೇಣುಹಗ್ಗಕ್ಕೆ ಜೋತುಬಿದ್ದಿದ್ದಾರೆ. ಇನ್ನೂ ಕೆಲವರು ಸಾಲ ಬಳಸಿ ಸಾಹುಕಾರರೇ ಆಗಿಹೋಗಿದ್ದಾರೆ. ವ್ಯಕ್ತಿ ಯಾವ ಸಾಲ ಮಾಡುತ್ತಾನೆ, ಯಾವುದಕ್ಕೆ ಸಾಲ ಮಾಡುತ್ತಾನೆ ಎಂಬುದು ಮುಖ್ಯ. ಒಳ್ಳೆಯ ಸಾಲ (gold debt) ಯಾವುದು, ಕೆಟ್ಟ ಸಾಲ (bad debt) ಯಾವುದು ಎಂದು ವಿವರಿಸುವ ಪ್ರಯತ್ನ ಇಲ್ಲಿದೆ…

ಒಳ್ಳೆಯ ಸಾಲ ಎಂದರೇನು, ಕೆಟ್ಟ ಸಾಲ ಎಂದರೇನು?

ಅನವಶ್ಯಕ ಎನಿಸಿರುವ ಮತ್ತು ಮೌಲ್ಯ ಕಡಿಮೆಗೊಳ್ಳುತ್ತಲೇ ಹೋಗುವ ಆಸ್ತಿಗಳನ್ನು ಪಡೆಯಲು ಮಾಡುವ ಸಾಲಗಳು ಕೆಟ್ಟ ಸಾಲಗಳೆನಿಸುತ್ತವೆ. ಮುಂದೆ ಮೌಲ್ಯ ಹೆಚ್ಚುತ್ತಾ ಹೋಗುವ, ಒಳ್ಳೆಯ ಆದಾಯ ತಂದುಕೊಡಬಲ್ಲ ಆಸ್ತಿಗಳನ್ನು ಪಡೆಯಲು ಮಾಡುವ ಸಾಲಗಳನ್ನು ಒಳ್ಳೆಯ ಸಾಲಗಳೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!

ಕೆಟ್ಟ ಸಾಲಗಳು ಯಾವುವು?

  • ಕ್ರೆಡಿಟ್ ಕಾರ್ಡ್ ಸಾಲಗಳು (ಬೇಡದ ವಸ್ತುಗಳನ್ನು ಖರೀದಿಸಲು ಪ್ರೇರೇಪಿಸುವ ಟ್ರ್ಯಾಪ್ ಈ ಕ್ರೆಡಿಟ್ ಕಾರ್ಡ್)
  • ಐಷಾರಾಮಿ ವಸ್ತುಗಳು (ಲಕ್ಷಾಂತರ ರೂ ಮೌಲ್ಯದ ಬ್ರ್ಯಾಂಡ್​ಗಳೇ ಬೇಕೆಂದರೆ ಕಷ್ಟ)
  • ವಾಹನ ಸಾಲಗಳು (ವಾಹನಗಳು ದಿನಕಳೆದಂತೆ ಮೌಲ್ಯ ಕಳೆದುಕೊಳ್ಳುತ್ತವೆ. ಅವಶ್ಯಕತೆಗೆ ತಕ್ಕಷ್ಟು ಗಾತ್ರದ ಕಾರಿದ್ದರೆ ಸಾಕು)
  • ಮೀಟರ್ ಬಡ್ಡಿ ಸಾಲ (ಖಾಸಗಿ ಫೈನಾನ್ಷಿಯರ್​ಗಳು ದಿನಕ್ಕೆ ಶೇ. 10-30ರಷ್ಟು ಬಡ್ಡಿಗೆ ನೀಡುವ ಸಾಲ ಪಡೆದರೆ ಕಷ್ಟಕಷ್ಟ)

ಒಳ್ಳೆಯ ಸಾಲಗಳು ಯಾವುವು?

  • ಗೃಹ ಸಾಲ (ಬಡ್ಡಿಕಡಿಮೆ, ಮೌಲ್ಯ ಹೆಚ್ಚುತ್ತಾ ಹೋಗುವ ಆಸ್ತಿ ಸಿಗುತ್ತದೆ)
  • ಬ್ಯುಸಿನೆಸ್ ಲೋನ್ (ಒಂದು ವ್ಯಾಪಾರ ಮತ್ತು ಉದ್ದಿಮೆ ಸ್ಥಾಪಿಸಲು ಸಾಲ ಪಡೆದರೆ ಅದು ಮುಂದೆ ರಿಟರ್ನ್ ಕೊಡುತ್ತದೆ)
  • ಶಿಕ್ಷಣ ಸಾಲ (ಶಿಕ್ಷಣವು ನಿಮ್ಮ ಜೀವನದ ಮುಂದಿನ ಹಾದಿಗೆ ದಾರಿದೀಪ. ಇದಕ್ಕೆ ಸಾಲ ಮಾಡುವುದು ತಪ್ಪಲ್ಲ)

ಇದನ್ನೂ ಓದಿ: ಪಿಎಫ್​ನ ಪೆನ್ಷನ್ ಸ್ಕೀಮ್​ಗೆ ಅರ್ಹರಾಗಲು 10 ವರ್ಷ ಸರ್ವಿಸ್ ಬೇಕು; ಇಲ್ಲದಿದ್ದರೆ ಹಣ ಏನಾಗುತ್ತೆ?

ಸಾಲ ಮಾಡುವಾಗ ವ್ಯಾವಹಾರಿಕವಾಗಿ ಯೋಚಿಸುವುದು ಒಳ್ಳೆಯದು. ಸಾಲಕ್ಕೆ ನೀವು ಎಷ್ಟು ಬಡ್ಡಿ ಕಟ್ಟುತ್ತೀರಿ, ಆ ಸಾಲದಿಂದ ಪಡೆದ ಆಸ್ತಿ ನಿಮಗೆ ಎಷ್ಟು ಪ್ರಯೋಜನಕಾರಿ ಎಂಬಿತ್ಯಾದಿ ಅಂಶಗಳನ್ನು ಯೋಚಿಸಿ ನಿರ್ಧಾರಕ್ಕೆ ಬರುವುದು ಸೂಕ್ತ. ಗೃಹಸಾಲ ಒಳ್ಳೆಯ ಸಾಲವಾದರೂ ನಿಮ್ಮ ತಿಂಗಳ ಆದಾಯದಲ್ಲಿ ಅದು ಶೇ. 30 ಮೀರದಂತೆ ನೋಡಿಕೊಳ್ಳುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ