AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್​ನಿಂದ ಬ್ಯಾಂಕ್ ವಹಿವಾಟು ವರೆಗೆ: ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ

ನವೆಂಬರ್ ತಿಂಗಳು ಆರಂಭವಾಗಿದ್ದು, ಆಧಾರ್, ಬ್ಯಾಂಕಿಂಗ್, ಜಿಎಸ್‌ಟಿ ಮತ್ತು ಪಿಂಚಣಿಗೆ ಸಂಬಂಧಿಸಿದ 7 ಪ್ರಮುಖ ಹಣಕಾಸು ನಿಯಮಗಳು ಬದಲಾಗಿವೆ. ಮಕ್ಕಳ ಆಧಾರ್ ಅಪ್‌ಡೇಟ್ ಉಚಿತವಾಗಿದ್ದು, ಬ್ಯಾಂಕ್ ಖಾತೆಗಳಿಗೆ 4 ನಾಮಿನಿಗಳನ್ನು ಸೇರಿಸಬಹುದು. ಹೊಸ GST ಸ್ಲ್ಯಾಬ್‌ಗಳು ಜಾರಿಗೆ ಬಂದಿದ್ದು, ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಬದಲಾದ ನಿಯಮಗಳ ಮಾಹಿತಿ ಇಲ್ಲಿದೆ.

ಆಧಾರ್​ನಿಂದ ಬ್ಯಾಂಕ್ ವಹಿವಾಟು ವರೆಗೆ: ಗಮನಿಸಿ, ಈ 7 ನಿಯಮಗಳು ಇಂದಿನಿಂದ ಬದಲಾಗಿವೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Nov 01, 2025 | 7:32 AM

Share

ನವೆಂಬರ್ (November) ತಿಂಗಳು ಆರಂಭವಾಗಿದೆ. ಇದರೊಂದಿಗೆ ಆಧಾರ್ ಕಾರ್ಡ್ ಸಂಬಂಧಿತ ನಿಯಮಗಳಿಂದ ತೊಡಗಿ ಬ್ಯಾಂಕಿಂಗ್ (Banking), ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ 7 ನಿಯಮಗಳು ಬದಲಾಗಿವೆ. ದೈನಂದಿನ ಹಣಕಾಸು ವಹಿವಾಟಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹೊಸ ನಿಯಮಗಳು ಅಸ್ತಿತ್ವಕ್ಕೆ ಬಂದಿವೆ. ಆಧಾರ್ ಅಪ್​ಡೇಟ್ ಶುಲ್ಕ, ಬ್ಯಾಂಕ್ ನಾಮಿನೇಷನ್, ಹೊಸ ಜಿಎಸ್ಟಿ ಸ್ಲ್ಯಾಬ್‌ಗಳು ಸೇರಿದಂತೆ ಜನಸಾಮಾನ್ಯರ ಖರ್ಚು ವೆಚ್ಚಗಳ ಮೇಲೆ ಪರಿಣಾಮ ಬೀರಬಲ್ಲ ಮತ್ತು ಬದಲಾಗಿರುವ 7 ನಿಯಮಗಳ ಮಾಹಿತಿ ಇಲ್ಲಿದೆ.

ಆಧಾರ್ ಅಪ್​ಡೇಟ್ ಶುಲ್ಕ ಪರಿಷ್ಕರಣೆ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮಕ್ಕಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಅಪ್​ಡೇಟ್​ಗೆ 125 ರೂ. ಶುಲ್ಕವನ್ನು ಮನ್ನಾ ಮಾಡಿದೆ. ಇದು ಒಂದು ವರ್ಷದವರೆಗೆ ಉಚಿತ ಇರಲಿದೆ. ವಯಸ್ಕರಿಗೆ, ಹೆಸರು, ಜನ್ಮ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ನವೀಕರಿಸಲು 75 ರೂ. ಇರಲಿದ್ದು, ಫಿಂಗರ್‌ಪ್ರಿಂಟ್‌ಗಳು ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಅಪ್​ಡೇಟ್​ಗೆ 125 ರೂ. ನಿಗದಿಪಡಿಸಲಾಗಿದೆ.

ಪರಿಷ್ಕೃತ ನಿಯಮದ ಪ್ರಕಾರ, ಯಾವುದೇ ಸಪೋರ್ಟಿಂಗ್ ಡಾಕ್ಯುಮೆಂಟ್​​ಗಳನ್ನು ಸಲ್ಲಿಸದೆ ಆಧಾರ್ ವಿಳಾಸ, ಜನ್ಮ ದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದಾಗಿದೆ.

ಹೊಸ ಬ್ಯಾಂಕ್ ನಾಮನಿರ್ದೇಶನ ನಿಯಮಗಳು

ನವೆಂಬರ್ 1 ರಿಂದ, ಬ್ಯಾಂಕುಗಳು ಗ್ರಾಹಕರಿಗೆ ಒಂದು ಖಾತೆ, ಲಾಕರ್ ಅಥವಾ ಸೇಫ್​ ಕಸ್ಟಡಿಗೆ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡುತ್ತವೆ . ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭವಾಗಿ ಪಡೆಯಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಗ್ರಾಹಕರಿಗೆ ನಾಮಿನಿಗಳನ್ನು ಸೇರಿಸುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದೆ.

ಹೊಸ GST ಸ್ಲ್ಯಾಬ್‌ಗಳು ಜಾರಿಗೆ

ಸರ್ಕಾರವು ಕೆಲವು ವಸ್ತುಗಳಿಗೆ ವಿಶೇಷ ದರದೊಂದಿಗೆ ಹೊಸ ಎರಡು-ಸ್ಲ್ಯಾಬ್ ಜಿಎಸ್ಟಿ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಅದು ಇಂದಿನಿಂದ ಜಾರಿಗೆ ಬರುತ್ತಿದೆ. ಹಿಂದಿನ 5%, 12%, 18%, ಮತ್ತು 28% ರ ನಾಲ್ಕು-ಸ್ಲ್ಯಾಬ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದುಹಾಕಲಾಗಿದೆ. ಆದರೆ 40% ಐಷಾರಾಮಿ ತೆರಿಗೆ ದರ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಐಷಾರಾಮಿ ಮತ್ತು ಸಿನ್ ಗೂಡ್ಸ್​​ (ತಂಬಾಕು, ಸಿಗರೇಟ್ ಇತ್ಯಾದಿ) ವಸ್ತುಗಳಿಗೆ ಅನ್ವಯಿಸುತ್ತದೆ. ಈ ಕ್ರಮವು ಭಾರತದ ಪರೋಕ್ಷ ತೆರಿಗೆ ರಚನೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ.

ಎನ್​ಪಿಎಸ್ ಟು ಯುಪಿಎಸ್ ಅಂತಿಮ ದಿನಾಂಕ ವಿಸ್ತರಣೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಿಂದ ಏಕೀಕೃತ ಪಿಂಚಣಿ ಯೋಜನೆ (UPS) ಗೆ ಬದಲಾಯಿಸಲು ಬಯಸುವ ಕೇಂದ್ರ ಸರ್ಕಾರಿ ನೌಕರರಿಗೆ ಈಗ ನವೆಂಬರ್ 30 ರವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯವಿದೆ. ಇದರಿಂದ ಉದ್ಯೋಗಿಗಳಿಗೆ ಪರಿಶೀಲಿಸಲು ಮತ್ತು ಬದಲಾಯಿಸಲು ಹೆಚ್ಚಿನ ಸಮಯ ದೊರೆಯಲಿದೆ.

ಪಿಂಚಣಿದಾರರು ಜೀವ ಪ್ರಮಾಣಪತ್ರವನ್ನು ಸಲ್ಲಿಸಬೇಕು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ನಿವೃತ್ತ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಇದನ್ನು ಅವರ ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಗಡುವನ್ನು ತಪ್ಪಿಸುವುದರಿಂದ ಪಿಂಚಣಿ ಪಾವತಿಗಳು ವಿಳಂಬವಾಗಬಹುದು ಅಥವಾ ನಿಲ್ಲಬಹುದು.

ಪಿಎನ್‌ಬಿ ಬ್ಯಾಂಕ್ ಲಾಕರ್ ಶುಲ್ಕಗಳಲ್ಲಿ ಬದಲಾವಣೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶೀಘ್ರದಲ್ಲೇ ಭಾರತದಾದ್ಯಂತ ತನ್ನ ಲಾಕರ್ ಬಾಡಿಗೆ ಶುಲ್ಕಗಳನ್ನು ಪರಿಷ್ಕರಿಸಲಿದೆ. ಹೊಸ ದರಗಳು ಲಾಕರ್ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರಲಿದೆ. ಪರಿಷ್ಕೃತ ಶುಲ್ಕಗಳನ್ನು ನವೆಂಬರ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ ಮತ್ತು ಅಧಿಸೂಚನೆಯ 30 ದಿನಗಳ ನಂತರ ಜಾರಿಗೆ ಬರಲಿದೆ.

ಎಸ್‌ಬಿಐ ಕಾರ್ಡುದಾರರಿಗೆ ಹೊಸ ಶುಲ್ಕಗಳು

ನವೆಂಬರ್ 1 ರಿಂದ, ಎಸ್​ಬಿಐ ಕಾರ್ಡ್ ಬಳಕೆದಾರರು MobiKwik ಮತ್ತು CRED ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ 1% ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಎಸ್​ಬಿಐ ಕಾರ್ಡ್ ಬಳಸಿ ಡಿಜಿಟಲ್ ವ್ಯಾಲೆಟ್‌ಗೆ 1,000 ರೂ.ಗಿಂತ ಹೆಚ್ಚಿನ ಹಣವನ್ನು ಲೋಡ್ ಮಾಡಿದರೆ 1% ಶುಲ್ಕ ವಿಧಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!