ನವೆಂಬರ್ನಲ್ಲಿ 11 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲಿ ಎಷ್ಟು ದಿನ? ಇಲ್ಲಿದೆ ಪಟ್ಟಿ
November 2025 bank holidays list: 2025ರ ನವೆಂಬರ್ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 11 ದಿನ ರಜೆ ಇರುತ್ತದೆ. ಇದರಲ್ಲಿ ಕೆಲ ಪ್ರಾದೇಶಿಕ ರಜೆಗಳೂ ಸೇರಿವೆ. ಕರ್ನಾಟಕದಲ್ಲಿ ಒಟ್ಟು 9 ದಿನ ಬ್ಯಾಂಕ್ಗಳಿಗೆ ರಜೆ ಇದೆ. ಈ 9 ದಿನದಲ್ಲಿ ಐದು ಭಾನುವಾರಗಳು ಹಾಗೂ ಎರಡು ಶನಿವಾರದ ರಜೆಗಳೇ ಇವೆ. ಬ್ಯಾಂಕುಗಳಿಗೆ ರಜೆ ಇದ್ದಾಗ ಕಚೇರಿ ಬಂದ್ ಆಗಿರುತ್ತದೆ. ಆದರೆ, ನೆಟ್ಬ್ಯಾಂಕಿಂಗ್, ಎಟಿಎಂ ಇತ್ಯಾದಿಗಳು ಲಭ್ಯ ಇರುತ್ತವೆ.

ನವದೆಹಲಿ, ಅಕ್ಟೋಬರ್ 27: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜಾದಿನಗಳನ್ನು (Bank holidays) ಕಂಡ ಬ್ಯಾಂಕುಗಳಿಗೆ ನವೆಂಬರ್ನಲ್ಲಿ ಹೆಚ್ಚಿನ ರಜೆಗಳಿಲ್ಲ. ಆರ್ಬಿಐ (RBI) ಕ್ಯಾಲಂಡರ್ ಪ್ರಕಾರ ನವೆಂಬರ್ ತಿಂಗಳಲ್ಲಿ 11 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜೆಗಳೂ ಒಳಗೊಂಡಿವೆ. ಪ್ರಾದೇಶಿಕ ವಿಶೇಷ ರಜೆಗಳೂ ಸೇರಿವೆ. ಗುರುನಾನಕ್ ಜಯಂತಿ, ಕನ್ನಡ ರಾಜ್ಯೋತ್ಸವ, ಕನಕದಾಸ ಜಯಂತಿ ಇತ್ಯಾದಿ ಹಬ್ಬ, ಹರಿದಿನ, ಉತ್ಸವಗಳು ನವೆಂಬರ್ನಲ್ಲಿ ಇವೆ. ನವೆಂಬರ್ನಲ್ಲಿ ಐದು ಶನಿವಾರ ಮತ್ತು ಐದು ಭಾನುವಾರಗಳಿವೆ. ಈ ಪೈಕಿ ಎರಡು ಶನಿವಾರಗಳು ಬ್ಯಾಂಕುಗಳಿಗೆ ರಜೆ ಇವೆ.
2025ರ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
- ನ. 1, ಶನಿವಾರ: ಕನ್ನಡ ರಾಜ್ಯೋತ್ಸವ/ ಹರ್ಯಾಣ ದಿನ / ಪುದುಚೇರಿ ದಿನ / ಕುತ್ (ಕರ್ನಾಟಕ, ಹರ್ಯಾಣ, ಪುದುಚೇರಿ, ಮಣಿಪುರ ರಾಜ್ಯಗಳಲ್ಲಿ ರಜೆ)
- ನ. 2: ಭಾನುವಾರದ ರಜೆ
- ನ. 5, ಬುಧವಾರ: ಕಾರ್ತಿಕ ಪೂರ್ಣಿಮಾ/ ಗುರುನಾನಕ್ ಜಯಂತಿ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ನ. 7, ಶುಕ್ರವಾರ: ವಂಗಲಾ ಹಬ್ಬ (ಮೇಘಾಲಯದಲ್ಲಿ ರಜೆ)
- ನ. 8, ಶನಿವಾರ: ಕನಕದಾಸ ಜಯಂತಿ ಹಾಗೂ ಎರಡನೇ ಶನಿವಾರ
- ನ. 9: ಭಾನುವಾರದ ರಜೆ
- ನ. 11, ಮಂಗಳವಾರ: ಲಹಬಾಬ್ ಡುಚೆನ್ ಹಬ್ಬ (ಸಿಕ್ಕಿಂನಲ್ಲಿ ರಜೆ)
- ನ. 16: ಭಾನುವಾರದ ರಜೆ
- ನ. 22: ನಾಲ್ಕನೇ ಶನಿವಾರ
- ನ. 23: ಭಾನುವಾರದ ರಜೆ
- ನ. 30: ಭಾನುವಾರದ ರಜೆ
ಇದನ್ನೂ ಓದಿ: ನಿಮ್ಮನ್ನು ಬೇಡ ಎನ್ನುವ ಜಾಗದಲ್ಲಿ ಯಾಕಿರುತ್ತೀರಿ, ಭಾರತಕ್ಕೆ ಬನ್ನಿ: ಅನಿವಾಸಿ ಭಾರತೀಯರಿಗೆ ಶ್ರೀಧರ್ ವೆಂಬು ಕರೆ
ಕರ್ನಾಟಕದಲ್ಲಿ ನವೆಂಬರ್ನಲ್ಲಿ ಬ್ಯಾಂಕ್ ರಜಾದಿನಗಳು
ಕರ್ನಾಟಕದಲ್ಲಿ ಏಳು ಭಾನುವಾರ ಮತ್ತು ಶನಿವಾರಗಳನ್ನೂ ಸೇರಿಸಿ ಒಟ್ಟು 9 ದಿನಗಳು ರಜೆ ಇವೆ. ನವೆಂಬರ್ 1ರಂದು ರಾಜ್ಯೋತ್ಸವ ನಿಮಿತ್ತ ರಜೆ ಇದೆ. ನವೆಂಬರ್ 5, ಬುಧವಾರ ಗುರುನಾನಕ್ ಜಯಂತಿಗೂ ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇರುತ್ತದೆ.
- ನ. 1, ಶನಿವಾರ: ಕನ್ನಡ ರಾಜ್ಯೋತ್ಸವ
- ನ. 2: ಭಾನುವಾರದ ರಜೆ
- ನ. 5, ಬುಧವಾರ: ಗುರುನಾನಕ್ ಜಯಂತಿ
- ನ. 8: ಎರಡನೇ ಶನಿವಾರ
- ನ. 9: ಭಾನುವಾರದ ರಜೆ
- ನ. 16: ಭಾನುವಾರದ ರಜೆ
- ನ. 22: ನಾಲ್ಕನೇ ಶನಿವಾರ
- ನ. 23: ಭಾನುವಾರದ ರಜೆ
- ನ. 30: ಭಾನುವಾರದ ರಜೆ
ಇದನ್ನೂ ಓದಿ: ಬೆಂಗಳೂರಿಗೆ ಹೋಗಿ ಬಂದಾಗೆಲ್ಲಾ ಉತ್ಸಾಹ ಇಮ್ಮಡಿಸುತ್ತೆ: ಮರ್ಸಿಡಸ್ ಬೆಂಜ್ ಸಿಇಒ ಒಲಾ ಕ್ಯಾಲೆನಿಯಸ್
ಬ್ಯಾಂಕುಗಳಿಗೆ ರಜೆ ಇದ್ದರೂ ಆನ್ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಸೇವೆಗಳು ಅಬಾಧಿತವಾಗಿ ಮುಂದುವರಿಯುತ್ತವೆ. ಎಟಿಎಂಗಳೂ ಕೂಡ ತೆರೆದಿರುತ್ತವೆ. ರಜಾ ದಿನಗಳಲ್ಲಿ ಬ್ಯಾಂಕ್ ಕಚೇರಿ ಮಾತ್ರವೇ ಬಂದ್ ಆಗಿರುತ್ತದೆ. ಹೆಚ್ಚಿನ ಬ್ಯಾಂಕ್ ಸೇವೆಗಳು ಆನ್ಲೈನ್ನಲ್ಲೇ ಲಭ್ಯ ಇರುತ್ತದೆ. ಕ್ಯಾಷ್ ಡೆಪಾಸಿಟ್, ಆರ್ಟಿಜಿಎಸ್ ಟ್ರಾನ್ಸ್ಫರ್, ಅಕೌಂಟ್ ಓಪನಿಂಗ್ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್ ಕಚೇರಿ ತೆರೆಯುವವರೆಗೂ ಕಾಯಬೇಕಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




