ನವದೆಹಲಿ, ಜುಲೈ 19: ಆದಾಯ ತೆರಿಗೆ ರಿಟರ್ನ್ (IT Return) ಸಲ್ಲಿಸಲು ಗಡುವು ಸಮೀಪಿಸುತ್ತಿದೆ. ಜುಲೈ 31ರವರೆಗೆ ಐಟಿಆರ್ ಸಲ್ಲಿಕೆಗೆ ಅವಕಾಶ ಕೊಡಲಾಗಿದೆ. ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜುಲೈ 18ರವರೆಗೂ ಐಟಿಆರ್ ಫೈಲಿಂಗ್ ಮಾಡಿರುವವರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಂದಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. 2022ರಲ್ಲಿ ಜುಲೈ 25ಕ್ಕೆ 3 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು. ಈ ವರ್ಷ 7 ದಿನ ಮುಂಚಿತವಾಗಿ ಈ ಸಂಖ್ಯೆ ಮುಟ್ಟಿದೆ.
2023ರ ಜುಲೈ 18ರವರೆಗೂ 3.06 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿವೆ. ಇದರಲ್ಲಿ 2.81 ಕೋಟಿ ಐಟಿಆರ್ಗಳನ್ನು ಇ–ವೆರಿಫೈ ಮಾಡಲಾಗಿದೆ. ಈ ಪೈಕಿ 1.50 ಕೋಟಿಗಿಂತ ಹೆಚ್ಚು ಐಟಿಆರ್ಗಳನ್ನು ಪ್ರೋಸಸ್ ಕೂಡ ಮಾಡಲಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.
Grateful to our taxpayers & tax professionals for having helped us reach the milestone of 3 crore Income Tax Returns (ITRs), 7 days early this year, compared to the preceding year!
Over 3 crore ITRs for AY 2023-24 have already been filed till 18th of July this year as compared… pic.twitter.com/jcGyirW2wa
— Income Tax India (@IncomeTaxIndia) July 19, 2023
ಇನ್ನೂ ಐಟಿ ರಿಟರ್ನ್ ಫೈಲ್ ಮಾಡದ ತೆರಿಗೆದಾರರಿಗೆ ಇನ್ನು 12-13 ದಿನ ಕಾಲಾವಕಾಶ ಮಾತ್ರ ಇದೆ. ಕಳೆದ ವರ್ಷ ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಅದನ್ನು ವಿಸ್ತರಿಸಲಾಗಿರಲಿಲ್ಲ. ಈ ವರ್ಷವೂ ಡೆಡ್ಲೈನ್ ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ, ಜುಲೈ 31ರೊಳಗೆ ಐಟಿ ರಿಟರ್ನ್ ಪಾವತಿಸಿ, ಅನಗತ್ಯ ದಂಡ ಕಟ್ಟುವುದನ್ನು ತಪ್ಪಿಸಬಹುದು.
ಇದನ್ನೂ ಓದಿ: ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ
ಆನ್ಲೈನ್ನಲ್ಲಿ ಐಟಿಆರ್ ಫೈಲ್ ಮಾಡುವ ಕ್ರಮಗಳು
ಇ ವೆರಿಫಿಕೇಶನ್ ಆದ ಬಳಿಕ ನಿಮ್ಮ ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೀವು ಇದೇ ಪೋರ್ಟಲ್ನಲ್ಲಿ ಸಲ್ಲಿಕೆಯಾದ ಐಟಿಆರ್ ಅನ್ನು ವೀಕ್ಷಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ