ಸರ್ಕಾರ ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು (Income Tax Payment) ಹೆಚ್ಚೆಚ್ಚು ಸರಳಗೊಳಿಸುತ್ತಾ ಬರುತ್ತಿದೆ. ಈಗ ಫೋನ್ ಪೇನಲ್ಲಿ ಇನ್ಕಮ್ ಟ್ಯಾಕ್ಸ್ ಪೇಮೆಂಟ್ ಎಂಬ ಹೊಸ ಫೀಚರ್ ಆರಂಭವಾಗಿದೆ. ಇದರಲ್ಲಿ ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಅನ್ನು ಪಾವತಿಸಬಹುದು. ಇನ್ಕಮ್ ಟ್ಯಾಕ್ಸ್ ಪೋರ್ಟಲ್ಗೆ ಲಾಗಿನ್ ಆಗದೇ ಫೋನ್ಪೇ ಆ್ಯಪ್ನಲ್ಲಿರುವ ಈ ಹೊಸ ಫೀಚರ್ ಮೂಲಕವೇ ನೇರವಾಗಿ ತೆರಿಗೆ ಪಾವತಿಸಲು ಸಾಧ್ಯವಾಗಲಿದೆ.
ಇನ್ಕಮ್ ಟ್ಯಾಕ್ಸ್ ಪೇಮೆಂಟ್ ಎಂಬ ಹೊಸ ಫೀಚರ್ಗಾಗಿ ಪೇಮೇಟ್ ಎಂಬ ಡಿಜಿಟಲ್ ಬಿ2ಬಿ ಬ್ಯುಸಿನೆಸ್ ಸಂಸ್ಥೆ ಜೊತೆ ಫೋನ್ ಪೇ ಸಹಭಾಗಿತ್ವ ಹೊಂದಿದೆ. ಇನ್ಕಮ್ ಟ್ಯಾಕ್ಸ್ ಇಲಾಖೆಯ ಪೋರ್ಟಲ್ನಲ್ಲಿ ಐಟಿಆರ್ ಫೈಲಿಂಗ್ ಮಾಡಲು ಲೋಡಿಂಗ್ ಸಮಸ್ಯೆಗಳಿವೆ ಎಂದು ಬಹಳ ಮಂದಿ ದೂರುವುದಿದೆ. ಇದನ್ನು ತಪ್ಪಿಸಲು ಫೋನ್ ಪೇನಲ್ಲಿರುವ ಇನ್ಕಮ್ ಟ್ಯಾಕ್ಸ್ ಫೀಚರ್ ಅನ್ನು ಬಳಸಿಕೊಳ್ಳಬಹುದು.
ಫೋನ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ತೆರಿಗೆ ಹಣ ಪಾವತಿಸಬಹುದು. ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ರಿವಾರ್ಡ್ ಕೂಡ ಸಿಗಬಹುದು.
ಇದನ್ನೂ ಓದಿ: Tax Collection: ತೆರಿಗೆ ದರ ಹೆಚ್ಚಿಸಿಲ್ಲ, ಆದರೂ ತೆರಿಗೆ ಸಂಗ್ರಹ ಹೆಚ್ಚಿಸಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆ ಪೋರ್ಟಲ್ನಲ್ಲಿ ಒಟ್ಟು 11.39 ಕೋಟಿ ವೈಯಕ್ತಿಕ ನೊಂದಾಯಿತರು ಇದ್ದಾರೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ 7.40 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಕೆ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಐಟಿಆರ್ಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇದರಲ್ಲಿ 5 ಕೋಟಿಗೂ ಹೆಚ್ಚು ಮಂದಿ ತೆರಿಗೆ ಬಾಧ್ಯತೆ ಇಲ್ಲವೆಂದು ಘೋಷಿಸಿದವರೇ ಇದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ