ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ

|

Updated on: Apr 04, 2024 | 11:09 AM

Rahul Gandhi Investment Portfolio: ರಾಹುಲ್ ಗಾಂಧಿ ಒಂಬತ್ತು ಕೋಟಿ ರೂಗೂ ಹೆಚ್ಚು ಮೌಲ್ಯದ ಚರಾಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಷೇರು ಮತ್ತು ಮ್ಯೂಚುವಲ್ ಫಂಡ್​ನಲ್ಲೇ ಹೆಚ್ಚು ಹೂಡಿಕೆ ಆಗಿವೆ. ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲೂ ಅವರು ಸ್ವಲ್ಪ ಹಣ ಹೂಡಿಕೆ ಮಾಡಿದ್ದಾರೆ. ಅವರ ಇನ್ವೆಸ್ಟ್​​​ನಲ್ಲಿ ವೈವಿಧ್ಯತೆ ಇದೆ. ರಿಸ್ಕ್ ಅಂಶ ಕಡಿಮೆ. ಅಂತೆಯೇ, ಸುರಕ್ಷಿತ ಮತ್ತು ಲಾಭದಾಯ ಹೂಡಿಕೆಗಳನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ.

ಹೂಡಿಕೆಯಲ್ಲಿ ಬುದ್ಧಿವಂತ ರಾಹುಲ್ ಗಾಂಧಿ; ಎಲ್ಲೆಲ್ಲಿ ಅವರ ಇನ್ವೆಸ್ಟ್​ಮೆಂಟ್ ಇದೆ ನೋಡಿ
ರಾಹುಲ್ ಗಾಂಧಿ
Follow us on

ನವದೆಹಲಿ, ಏಪ್ರಿಲ್ 4: ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ (Rahul Gandhi) ಚುನಾವಣಾ ಆಯೋಗಕ್ಕೆ (Affidavit to Election Commission) ಕೊಟ್ಟಿರುವ ದಾಖಲೆಗಳ ಪ್ರಕಾರ 20.4 ಕೋಟಿ ರೂ ಸಂಪತ್ತಿನ ಒಡೆಯ ಅವರು. ಅವರ ಹೆಚ್ಚಿನ ಸಂಪತ್ತು ವಿವಿಧೆಡೆ ಹೂಡಿಕೆಗಳಿಂದ ನಿರ್ಮಿತವಾದವಾಗಿವೆ. ಅರ್ಧಕ್ಕಿಂತ ತುಸು ಹೆಚ್ಚು ಸಂಪತ್ತು ಭೂಮಿ ಇತ್ಯಾದಿ ಚಿರಾಸ್ತಿಗಳಿಂದ (movable properties) ಬಂದಿವೆ. 9 ಕೋಟಿ ರೂಗೂ ಹೆಚ್ಚು ಹಣವನ್ನು ಅವರು ಷೇರುಗಳು, ಮ್ಯೂಚುವಲ್ ಫಂಡ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಹೂಡಿಕೆಗಳಲ್ಲಿ ತೊಡಗಿಸಿದ್ದಾರೆ. ಅವರ ಹೂಡಿಕೆಗಳು ವಿವಿಧ ಮಾರುಕಟ್ಟೆಗಳಲ್ಲಿ ಹರಡಿರುವುದು ವಿಶೇಷ.

ರಾಹುಲ್ ಗಾಂಧಿ ಚರಾಸ್ತಿಗಳ ಈಗಿನ ಮಾರುಕಟ್ಟೆ ಮೌಲ್ಯ

ಒಟ್ಟು ಚರಾಸ್ತಿ (immovable assets: 9.24 ಕೋಟಿ ರೂ

  • ಷೇರುಗಳು: 4.3 ಕೋಟಿ ರೂ
  • ಮ್ಯೂಚುವಲ್ ಫಂಡ್: 3.81 ಕೋಟಿ ರೂ
  • ಸಾವರೀನ್ ಗೋಲ್ಡ್ ಬಾಂಡ್: 15.21 ಲಕ್ಷ ರೂ

ಈ ಮೇಲಿನವು 2024ರ ಮಾರ್ಚ್ 15ಕ್ಕೆ ಇದ್ದ ಮಾರುಕಟ್ಟೆ ಮೌಲ್ಯದ ಪ್ರಕಾರ ಗಣಿಸಲಾಗಿದೆ.

ರಾಹುಲ್ ಗಾಂಧಿ ಹೂಡಿಕೆ ಮಾಡಿರುವ ಷೇರುಗಳು

  1. ಪಿಡಿಲೈಟ್ ಇಂಡಸ್ಟ್ರೀಸ್: 42.27 ಲಕ್ಷ ರೂ ಮೌಲ್ಯದ 1,474 ಷೇರು
  2. ಬಜಾಜ್ ಫೈನಾನ್ಸ್: 35.89 ಲಕ್ಷ ರೂ ಮೌಲ್ಯದ 551 ಷೇರುಗಳು
  3. ನೆಸ್ಲೆ ಇಂಡಿಯಾ: 35.67 ಲಕ್ಷ ರೂ ಮೌಲ್ಯದ 1,370 ಷೇರುಗಳು
  4. ಏಷ್ಯನ್ ಪೇಂಟ್ಸ್: 35.29 ಲಕ್ಷ ರೂ ಮೌಲ್ಯದ 1,231 ಷೇರುಗಳು
  5. ಟೈಟಾನ್ ಕಂಪನಿ: 32.59 ಲಕ್ಷ ರೂ ಮೌಲ್ಯದ 897 ಷೇರುಗಳು
  6. ಹಿಂದೂಸ್ತಾನ್ ಯುನಿಲಿವರ್: 27.02 ಲಕ್ಷ ರೂ ಮೌಲ್ಯದ 1,161 ಷೇರುಗಳು
  7. ಐಸಿಐಸಿಐ ಬ್ಯಾಂಕ್: 24.83 ಲಕ್ಷ ರೂ ಮೌಲ್ಯದ 2,299 ಷೇರುಗಳು
  8. ಡಿವಿಸ್ ಲ್ಯಾಬೊರೇಟರಿಸ್: 19.7 ಲಕ್ಷ ರೂ ಮೌಲ್ಯದ 567 ಷೇರುಗಳು
  9. ಸುಪ್ರಜಿತ್ ಎಂಜಿನಿಯರಿಂಗ್: 16.65 ಲಕ್ಷ ರೂ ಮೌಲ್ಯದ 4,068 ಷೇರುಗಳು
  10. ಗಾರ್ವೇರ್ ಟೆಕ್ನಿಕಲ್ ಫೈಬರ್ಸ್: 16.43 ಲಕ್ಷ ರೂ ಮೌಲ್ಯದ 508 ಷೇರುಗಳು

ಇದನ್ನೂ ಓದಿ: ಪಿಪಿಎಫ್​ನಲ್ಲಿ ಹೂಡಿಕೆ ಮಾಡುತ್ತಿರುವಿರಾ? ಏಪ್ರಿಲ್ 5ರೊಳಗೆ ಹಣ ಕಟ್ಟದಿದ್ದರೆ ಕೈತಪ್ಪಲಿದೆ ಸಾವಿರಾರು ರೂ ಆದಾಯ

ರಾಹುಲ್ ಗಾಂಧಿ ಮ್ಯೂಚುವಲ್ ಫಂಡ್​ಗಳಲ್ಲಿ ಮಾಡಿರುವ ಹೂಡಿಕೆ

  1. ಎಚ್​ಡಿಎಫ್​ಸಿ ಸ್ಮಾಲ್ ಕ್ಯಾಪ್ Reg-G: 1.23 ಕೋಟಿ ರೂ ಮಾರುಕಟ್ಟೆ ಮೌಲ್ಯ.
  2. ಐಸಿಐಸಿಐ ಪ್ರುಡೆನ್ಷಿಯಲ್ Reg Savings-G: 1.02 ಕೋಟಿ ರೂ ಮಾರುಕಟ್ಟೆ ಮೌಲ್ಯ
  3. ಪಿಪಿಎಫ್​ಎಎಸ್ ಎಫ್​ಸಿಎಫ್ ಡಿ ಗ್ರೋತ್: 19.76 ಲಕ್ಷ ರೂ
  4. ಎಚ್​ಡಿಎಫ್​ಸಿ ಎಂಕಾಪ್ ಡಿಪಿ ಜಿಆರ್: 19.58 ಲಕ್ಷ ರೂ
  5. ಐಸಿಐಸಿಐ ಇಕ್ಯು&ಡಿಫ್ ಎಫ್ ಗ್ರೋತ್: 19.03 ಲಕ್ಷ ರೂ ಮಾರುಕಟ್ಟೆ ಮೌಲ್ಯ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ