ಜನರ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ನೆಚ್ಚಿನದ್ದು ನಿಶ್ಚಿತ ಠೇವಣಿಗಳೇ. ಶೇ. 9ರವರೆಗೂ ಬಡ್ಡಿ ಕೊಡುವ ನಿಶ್ಚಿತ ಠೇವಣಿಗಳಿವೆ. ಎಸ್ಬಿಐ ಗ್ರಾಹಕರ ನೆಚ್ಚಿನ ಫಿಕ್ಸೆಡ್ ಡೆಪಾಸಿಟ್ನಲ್ಲಿ ಅದರ ಅಮೃತ್ ಕಳಶ್ (SBI Amrit Kalash Deposit) ಸ್ಕೀಮ್ ಒಂದು. ಇದೂ ಕೂಡ ಒಂದು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಆಗಿದ್ದು, ಶೇ. 7.6ರವರೆಗೂ ಬಡ್ಡಿ ಆಫರ್ ಕೊಡುತ್ತದೆ. ಅಮೃತ್ ಕಲಶ್ ಸ್ಕೀಮ್ ಮಾರ್ಚ್ 31ರವರೆಗೂ ಮಾತ್ರ ಇತ್ತು. ಆಗ ಬೇಡಿಕೆ ಬಂದ ಹಿನ್ನೆಲೆಯಲ್ಲಿ 3 ತಿಂಗಳು ಅವಧಿ ವಿಸ್ತರಿಸಲಾಗಿತ್ತು. ಜೂನ್ 30ರವೆಗೂ ಕಾಲಾವಕಾಶ ಇದೆ. ಅಂದರೆ, ಇನ್ನು ಏಳೆಂಟು ದಿನಗಳವರೆಗೂ ಎಸ್ಬಿಐ ಗ್ರಾಹಕರು ಅಮೃತ್ ಕಳಶ್ ಎಫ್ಡಿ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ಕಲಶ್ ಸ್ಕೀಮ್ ಒಂದು ನಿಶ್ಚಿತ ಠೇವಣಿ ಸ್ಕೀಮ್. ಹಲವು ಅವಧಿಯ ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಅಮೃತ್ ಕಲಶ್ ಕೂಡ ಒಂದು. ಇದು 400 ದಿನಗಳ ಅವಧಿಯ ಡೆಪಾಸಿಟ್ ಸ್ಕೀಮ್. ಎಸ್ಬಿಐನಲ್ಲಿ ಈ ಅವಧಿಯ ಫಿಕ್ಸೆಡ್ಗೆ ಅತಿಹೆಚ್ಚು ಬಡ್ಡಿ ಇದೆ. ಎಸ್ಬಿಐನ ವೆಬ್ಸೈಟ್ನಲ್ಲಿ ಇರುವ ಮಾಹಿತಿ ಪ್ರಕಾರ 400 ದಿನಗಳ ನಿಶ್ಚಿತ ಠೇವಣಿ ಸ್ಕೀಮ್ನಲ್ಲಿ ಶೇ. 7.1ರಷ್ಟು ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಇದೆ. 400 ದಿನ ಎಂದರೆ ಹೆಚ್ಚೂಕಡಿಮೆ 13 ತಿಂಗಳು ಅಥವಾ 1 ವರ್ಷ ಒಂದು ತಿಂಗಳ ಅವಧಿಯದ್ದಾಗಿದೆ.
ಇದನ್ನೂ ಓದಿ: EPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?
ಎಲ್ಲಾ ಎಫ್ಡಿ ಸ್ಕೀಮ್ನಲ್ಲಿರುವಂತೆ ಎಸ್ಬಿಐ ಅಮೃತ್ ಕಲಶ್ ಸ್ಕೀಮ್ನಲ್ಲಿರುವ ಹೂಡಿಕೆಗಳಿಗೂ ತೆರಿಗೆ ಅನ್ವಯ ಆಗುತ್ತದೆ. ಅಂದರೆ ಇದರಿಂದ ಸಿಗುವ ಬಡ್ಡಿ ಹಣದ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ತೆರಿಗೆ ಎಷ್ಟು ಎಂಬುದು ಠೇವಣಿದಾರರ ಆದಾಯ ಗುಂಪಿನ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕ ಆದಾಯ 15 ಲಕ್ಷ ರೂ ಮೇಲ್ಪಟ್ಟು ಇದ್ದರೆ ಅಂಥವರ ನಿಶ್ಚಿತ ಠೇವಣಿಯ ಬಡ್ಡಿಯಿಂದ ಬರುವ ಆದಾಯಕ್ಕೆ ಶೇ. 30ರಷ್ಟು ಟಿಡಿಎಸ್ ಕಡಿತವಾಗುತ್ತದೆ.
ಉದಾಹರಣೆಗೆ, 10 ಲಕ್ಷ ರೂ ಎಫ್ಡಿ ಇಟ್ಟರೆ ಅದರಿಂದ ಒಂದು ವರ್ಷದಲ್ಲಿ 7,291 ರೂನಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿ ಹಣಕ್ಕೆ ಶೇ. 30ರಷ್ಟು, ಅಂದರೆ 2,187 ರೂನಷ್ಟು ಟಿಡಿಎಸ್ ಕಡಿತ ಆಗುತ್ತದೆ. ಆದರೆ, ನೀವು ಐಟಿ ರಿಟರ್ನ್ ಫೈಲ್ ಮಾಡುವಾಗ ಈ ಟಿಡಿಎಸ್ ಹಣವನ್ನು ಮರಳಿ ಕ್ಲೈಮ್ ಮಾಡಲು ಸಾಧ್ಯ ಇದೆ.
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ
ಎಸ್ಬಿಐ ಅಮೃತ್ ಕಲಶ್ ಸಾಮಾನ್ಯ ಎಫ್ಡಿ ಸ್ಕೀಮ್ನಲ್ಲಿ ಬಡ್ಡಿಯನ್ನು ಮಾಸಿಕವಾಗಿ, ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧವರ್ಷದ ಆಧಾರದಲ್ಲಿ ಗಣಿಸಲಾಗುತ್ತದೆ. ಸ್ಪೆಷಲ್ ಡೆಪಾಸಿಟ್ ಆದರೆ 400 ದಿನಗಳಲ್ಲಿ ಮೆಚ್ಯೂರ್ ಆಗುವಾಗ ಬಡ್ಡಿ ಜಮೆ ಆಗುತ್ತದೆ. ಟಿಡಿಎಸ್ ಕಡಿತದ ಬಳಿಕ ಉಳಿದ ಬಡ್ಡಿ ಹಣವು ಖಾತೆಗೆ ವರ್ಗವಾಗುತ್ತದೆ.
ಈ ಅಮೃತ್ ಕಲಶ್ ಎಫ್ಡಿ ಸ್ಕೀಮ್ ಅನ್ನು ಯಾವುದೇ ಎಸ್ಬಿಐ ಬ್ಯಾಂಕ್ ಕಚೇರಿಗೆ ಹೋಗಿ ಪಡೆಯಬಹುದು. ಅಥವಾ ನಿಮ್ಮಲ್ಲಿ ಎಸ್ಬಿಐ ಆ್ಯಪ್ ಇದ್ದರೆ ಅದರಲ್ಲೂ ಎಫ್ಡಿ ತೆರೆಯಬಹುದು. ಹಾಗೆಯೇ, ಈ ಸ್ಕೀಮ್ನಲ್ಲಿ ನೀವು ಇಡುವ ಎಫ್ಡಿ ಮೇಲೆ ಸಾಲ ಕೂಡ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ