AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salary Account: ಆನ್​ಲೈನ್​ನಲ್ಲೇ ಎಸ್​​ಬಿಐ ಸಾಲರಿ ಅಕೌಂಟ್ ತೆರೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಸ್ಟೇಟ್​​ ಬ್ಯಾಂಕ್ ಆಫ್ ಇಂಡಿಯಾ ಯಾವೆಲ್ಲ ರೀತಿಯ ಸಾಲರಿ ಅಕೌಂಟ್ ಸೇವೆ ಒದಗಿಸುತ್ತಿದೆ? ಆನ್​ಲೈನ್ ಮೂಲಕ ಸಾಲರಿ ಅಕೌಂಟ್ ಓಪನ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.

Salary Account: ಆನ್​ಲೈನ್​ನಲ್ಲೇ ಎಸ್​​ಬಿಐ ಸಾಲರಿ ಅಕೌಂಟ್ ತೆರೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Feb 04, 2023 | 1:55 PM

Share

ದೇಶದ ಬಹುಪಾಲು ವೇತನದಾರ ಮಧ್ಯಮ ವರ್ಗದವರು ಸಾಲರಿ ಅಕೌಂಟ್ (Salary account) ಅಥವಾ ವೇತನ ಖಾತೆ ಹೊಂದಿರುತ್ತಾರೆ ಮತ್ತು ಹೊಂದಲು ಬಯಸುತ್ತಾರೆ. ಸಾಲರಿ ಅಕೌಂಟ್ ಶೂನ್ಯ ಠೇವಣಿಯ ಖಾತೆ ಎಂಬುದೂ ಇದಕ್ಕೆ ಬಹುಮುಖ್ಯ ಕಾರಣ. ಇಷ್ಟೇ ಅಲ್ಲದೆ ಮೊಬೈಲ್ ಬ್ಯಾಂಕಿಂಗ್, ಇಂಟರ್​​ನೆಟ್ ಬ್ಯಾಂಕಿಂಗ್ ಸೇರಿದಂತೆ ಅನೇಕ ಸೇವೆಗಳೂ ಸಾಲರಿ ಅಕೌಂಟ್​ದಾರರಿಗೆ ದೊರೆಯುತ್ತದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್​​ ಬ್ಯಾಂಕ್ ಆಫ್ ಇಂಡಿಯಾ (State Bank of India) ಸರ್ಕಾರಿ ನೌಕರರಿಗೆ, ಕಾರ್ಪೊರೇಟರ್​ಗಳಿಗೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ. ಆನ್​ಲೈನ್ ಮೂಲಕವೇ ಸಾಲರಿ ಅಕೌಂಟ್​ ತೆರೆಯುವ ಸುಲಭ ಆಯ್ಕೆಯನ್ನೂ ಗ್ರಾಹಕರಿಗೆ ನೀಡಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಉಳಿತಾಯ ಖಾತೆಯನ್ನು ಸಾಲರಿ ಅಕೌಂಟ್ ಆಗಿ ಪರಿವರ್ತಿಸಲೂ ಅವಕಾಶವಿದೆ. ಬ್ಯಾಂಕ್​ ಯಾವೆಲ್ಲ ರೀತಿಯ ಸಾಲರಿ ಅಕೌಂಟ್ ಸೇವೆ ಒದಗಿಸುತ್ತಿದೆ? ಆನ್​ಲೈನ್ ಮೂಲಕ ಸಾಲರಿ ಅಕೌಂಟ್ ಓಪನ್ ಮಾಡುವುದು ಹೇಗೆಂಬ ಮಾಹಿತಿ ಇಲ್ಲಿದೆ.

ಸಾಲರಿ ಅಕೌಂಟ್​​​ನ ವಿಧಗಳು

  • ಕೇಂದ್ರ ಸರ್ಕಾರದ ವೇತನ ಪ್ಯಾಕೇಜ್ (ಸಿಜಿಎಸ್​ಪಿ)
  • ರಾಜ್ಯ ಸರ್ಕಾರದ ವೇತನ ಪ್ಯಾಕೇಜ್ (ಎಸ್​ಜಿಎಸ್​ಪಿ)
  • ರೈಲ್ವೆ ವೇತನ ಪ್ಯಾಕೇಜ್ (ಆರ್​ಎಸ್​ಪಿ)
  • ರಕ್ಷಣಾ ವೇತನ ಪ್ಯಾಕೇಜ್ (ಡಿಎಸ್​​ಪಿ)
  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ವೇತನ ಪ್ಯಾಕೇಜ್ (ಸಿಎಪಿಎಸ್​ಪಿ)
  • ಪೊಲೀಸ್ ವೇತನ ಪ್ಯಾಕೇಜ್ (ಪಿಎಸ್​ಪಿ)
  • ಭಾರತೀಯ ಕರಾವಳಿ ರಕ್ಷಣಾ ಪಡೆ ವೇತನ ಪ್ಯಾಕೇಜ್ (ಐಸಿಗಿಎಸ್​ಪಿ)
  • ಕಾರ್ಪೊರೇಟ್ ಸಾಲರಿ ಪ್ಯಾಕೇಜ್ (ಸಿಎಸ್​ಪಿ)
  • ಸ್ಟಾರ್ಟಪ್ ಸಾಲರಿ ಪ್ಯಾಕೇಜ್ (ಎಸ್​​ಯುಎಸ್​ಪಿ)

ಸಾಲರಿ ಅಕೌಂಟ್ ಪ್ರಯೋಜನಗಳೇನು?

  • ಶೂನ್ಯ ಬ್ಯಾಲೆನ್ಸ್ (ಝೀರೋ ಬ್ಯಾಲೆನ್ಸ್) ಅಕೌಂಟ್
  • ಆಟೊ ಸ್ವೀಪ್ ಸರ್ವೀಸ್
  • ವಿಶೇಷ ಸೌಲಭ್ಯಗಳೊಂದಿಗೆ ಉಚಿತ ಡೆಬಿಟ್ ಕಾರ್ಡ್
  • ಎಸ್​ಬಿಐ ಮತ್ತು ಇತರ ಬ್ಯಾಂಕ್​ ಎಟಿಎಂಗಳಲ್ಲಿ ಅನಿಯಮಿತ ಟ್ರಾನ್ಸಾಕ್ಷನ್​​ಗೆ ಅವಕಾಶ
  • ಡಿಡಿ ನೀಡಿಕೆಗೆ ಶುಲ್ಕ ವಿನಾಯಿತಿ
  • ಮಲ್ಟಿ ಸಿಟಿ ಚೆಕ್​ಗೆ ಶುಲ್ಕ ವಿನಾಯಿತಿ
  • ಆಕರ್ಷಕ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ, ಕಾರು ಸಾಲ ಹಾಗೂ ಗೃಹ ಸಾಲ
  • ಅರ್ಹತೆಗೆ ಅನುಗುಣವಾಗಿ ಓವರ್​​​ಡ್ರಾಫ್ಟ್ ಸೌಲಭ್ಯ
  • ಅರ್ಹತೆಗೆ ಅನುಗುಣವಾಗಿ ವಾರ್ಷಿಕ ಲಾಕರ್​​ ಬಾಡಿಗೆಯಲ್ಲಿ ವಿನಾಯಿತಿ

ಯಾವೆಲ್ಲ ದಾಖಲೆಗಳು ಬೇಕು?

  • ಪಾಸ್​ಪೋರ್ಟ್ ಸೈಜ್​ನ ಫೋಟೊಗಳು
  • ವಿಳಾಸದ ದೃಢೀಕರಣಕ್ಕೆ ದಾಖಲೆ
  • ಉದ್ಯೋಗದ ದೃಢೀಕರಣಕ್ಕೆ ದಾಖಲೆ
  • ಇತ್ತೀಚಿನ ಸಾಲರಿ ಸ್ಲಿಪ್

ಆನ್​ಲೈನ್ ಮೂಲಕ ಎಸ್​ಬಿಐ ಸಾಲರಿ ಅಕೌಂಟ್ ತೆರೆಯುವುದು ಹೇಗೆ?

  1. ಎಸ್​ಬಿಐ ವೆಬ್​ಸೈಟ್​​ಗೆ ಭೇಟಿ ನೀಡಿ ‘ರಿಕ್ವೆಸ್ಟ್ ಎ ಕಾಲ್​ ಬ್ಯಾಕ್’ ಅರ್ಜಿಯನ್ನು ಭರ್ತಿ ಮಾಡಿ. ನಂತರ ಸಬ್​ಮಿಟ್ ಕೊಡಿ.
  2. ಬ್ಯಾಂಕ್​​ನ ಪ್ರತಿನಿಧಿಯೊಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ಹಾಗೂ ಏನು ಮಾಡಬೇಕೆಂಬುದನ್ನು ಹಂತಹಂತವಾಗಿ ತಿಳಿಸಿಕೊಡುತ್ತಾರೆ.
  3. ಬ್ಯಾಂಕ್ ಶಾಖೆಗೆ ತೆರಳಿಯೂ ಕಾಯದೆ ಸುಲಭವಾಗಿ ಆನ್​ಲೈನ್ ಮೂಲಕ ಸಾಲರಿ ಅಕೌಂಟ್ ತೆರೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!