Business Ideas: ಭರ್ಜರಿ ಆದಾಯ, ಲಾಭ ಗಳಿಸಲು ಈ ಆನ್​ಲೈನ್ ಉದ್ಯಮಗಳನ್ನು ಆರಂಭಿಸುವುದು ಬೆಸ್ಟ್

Profitable e-Commerce Business Ideas; ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ, ಹೂಡಿಕೆಗೆ ಬಂಡವಾಳದ ಸಮಸ್ಯೆ ಇರುತ್ತದೆ.. ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Business Ideas: ಭರ್ಜರಿ ಆದಾಯ, ಲಾಭ ಗಳಿಸಲು ಈ ಆನ್​ಲೈನ್ ಉದ್ಯಮಗಳನ್ನು ಆರಂಭಿಸುವುದು ಬೆಸ್ಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Dec 26, 2022 | 2:26 PM

ತಂತ್ರಜ್ಞಾನದ (Technology) ಬಳಕೆ ಹೆಚ್ಚಳದೊಂದಿಗೆ ಆನ್​ಲೈನ್ ತಾಣಗಳಲ್ಲಿ ಉದ್ಯೋಗಾವಕಾಶಗಳೂ ಹೆಚ್ಚಾಗಿವೆ. ವ್ಯಾಪಾರ, ಮಾರ್ಕೆಟಿಂಗ್ ವಿಧಾನಗಳಲ್ಲಿಯೂ ಗಣನೀಯ ಬದಲಾವಣೆಗಳಾಗಿದ್ದು, ಸ್ವ ಉದ್ಯಮ, ಸಣ್ಣ ಉದ್ದಿಮೆಗಳಿಗೂ (Small Business) ವಿಪುಲ ಅವಕಾಶಗಳು ಸೃಷ್ಟಿಯಾಗಿವೆ. ಮನೆಯಲ್ಲೇ ಕುಳಿತುಕೊಂಡು ಆನ್​ಲೈನ್ ಮೂಲಕ ಉದ್ಯಮ ನಡೆಸುವುದರೊಂದಿಗೆ ಹೆಚ್ಚು ಸಂಪಾದನೆ ಮಾಡಲು ಅನೇಕ ಅವಕಾಶಗಳು ಸೃಷ್ಟಿಯಾಗಿವೆ. ಅನೇಕ ಮಂದಿಗೆ ಸ್ವಂತ ಉದ್ಯಮ ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ, ಹೂಡಿಕೆಗೆ ಬಂಡವಾಳದ ಸಮಸ್ಯೆ ಇರುತ್ತದೆ. ಇಂಥ ಸನ್ನಿವೇಶದಲ್ಲಿ, ಕಡಿಮೆ ಹೂಡಿಕೆಯೊಂದಿಗೆ (Investment) ಹೆಚ್ಚು ಆದಾಯ ಗಳಿಸಬಹುದಾದ ಕೆಲವು ಉದ್ಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಇ-ಕಾಮರ್ಸ್ ತಾಣದ ಮೂಲಕ ಬಟ್ಟೆ ಮಾರಾಟ

ಬಟ್ಟೆಗಳ ಮಾರಾಟಕ್ಕೆ ಇ-ಕಾಮರ್ಸ್​ ವೆಬ್​ಸೈಟ್ ಆರಂಭಿಸುವ ಮೂಲಕ ನೀವು ಉದ್ಯಮ ಕ್ಷೇತ್ರಕ್ಕೆ ಕಾಲಿಡಬಹುದು. ಇದಕ್ಕೆ ಚಿಲ್ಲರೆ ಮಳಿಗೆ ತೆರೆಯಲು ಬೇಕಾದಷ್ಟು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಿಲ್ಲ. ವೆಬ್​ಸೈಟ್ ಆರಂಭಿಸುವ ಮೂಲಕ ವಿವಿಧ ವಯಸ್ಸಿನ ಜನರಿಗೆ ವಿವಿಧ ಆಯ್ಕೆಯ ಬಟ್ಟೆಗಳನ್ನು ಮಾರಾಟ ಮಾಡಬಹುದು. ಆನ್​ಲೈನ್ ಶಾಪಿಂಗ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇದೊಂದು ಉತ್ತಮ ಆಯ್ಕೆಯಾಗಬಲ್ಲದು. ಇನ್​ಸ್ಟಾಗ್ರಾಂ, ಫೇಸ್​ಬುಕ್​ನಂಥ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಚಾರವನ್ನೂ ಮಾಡಬಹುದಾಗಿದೆ. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿರುವುದಿಲ್ಲ.

ಗೃಹಾಲಂಕಾರ ಮತ್ತು ಪೀಠೋಪಕರಣ ಆನ್​ಲೈನ್ ಮಾರಾಟ

ಗೃಹಾಲಂಕಾರ ಮತ್ತು ಪೀಠೋಪಕರಣಗಳ ಆನ್​ಲೈನ್ ಮಾರಾಟ ಉದ್ಯಮವನ್ನೂ ಆರಂಭಿಸಬಹುದು. ಇದಕ್ಕೂ ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ. ಆನ್​ಲೈನ್ ಮೂಲಕವೇ ಹೋಲ್​ಸೇಲ್ ಮಾರಾಟಗಾರರಿಂದ ಖರೀದಿಸಿ ಚಿಲ್ಲರೆ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭವನ್ನೂ ಗಳಿಸಬಹುದು. ಯಾವ ರೀತಿಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ, ಯಾವ ರೀತಿಯಲ್ಲಿ ಉದ್ಯಮ ನಡೆಸಬಹುದು ಎಂಬ ಬಗ್ಗೆ ತುಸು ಅಧ್ಯಯನ ಮಾಡಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ನೀವು ಆಸಕ್ತರಾಗಿದ್ದರಂತೂ ಇದೊಂದು ಉತ್ತಮ ಆಯ್ಕೆಯಾಗಬಲ್ಲದು.

ಸೌಂದರ್ಯ ಸಾಧನಗಳ ಆನ್​ಲೈನ್ ಉದ್ಯಮ

ಸೌಂದರ್ಯ ಸಾಧನಗಳು ಮತ್ತು ಇತರ ಪ್ರಸಾಧನಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇ-ಕಾಮರ್ಸ್ ತಾಣದ ಮೂಲಕ ಸೌಂದರ್ಯ ಸಾಧನಗಳ ಮಾರಾಟ ಉದ್ಯಮವನ್ನು ಕಡಿಮೆ ಖರ್ಚಿನೊಂದಿಗೆ ಆರಂಭಿಸಬಹುದು. ಕೈಗೆಟಕುವ ಬೆಲೆಯಲ್ಲಿ ಉತ್ತಮ ಸಾಧನಗಳನ್ನು ನೀಡುವ ಮೂಲಕ ಉದ್ಯಮದಲ್ಲಿ ಯಶಸ್ಸು ಕಾಣಬಹುದು. ಬ್ಲಾಗ್, ಯೂಟ್ಯೂಬ್, ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರವನ್ನೂ ಮಾಡಬಹುದು.

ಆಟಿಕೆಗಳ ಮಾರಾಟಕ್ಕೆ ಇ-ಕಾಮರ್ಸ್ ತಾಣ

ಆನ್​ಲೈನ್ ಮೂಲಕ ಆಟಿಕೆಗಳ ಮಾರಾಟ ಉದ್ಯಮ ಆರಂಭಿಸುವುದು ಕೂಡ ಉತ್ತಮ ಆದಾಯ ತಂದುಕೊಡಬಲ್ಲದು. ಇದಕ್ಕೆ ಹೆಚ್ಚಿನ ಹೂಡಿಕೆ ಅಗತ್ಯ ಇರುವುದಿಲ್ಲ. ಸಗಟು ಅಥವಾ ಹೋಲ್​ಸೇಲ್ ಪೂರೈಕೆದಾರರಿಂದ ಹೆಚ್ಚಿನ ಸಂಖ್ಯೆಯ ಆಟಿಕೆಗಳನ್ನು ಕಡಿಮೆ ದರಕ್ಕೆ ಖರೀದಿಸಿ ಆನ್​ಲೈನ್ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚು ಆದಾಯ ಹಾಗೂ ಲಾಭ ಗಳಿಸಬಹುದು.

ಕಸ್ಟಮೈಸ್ಡ್ ಪ್ರಿಂಟೆಡ್ ದಿರಿಸು, ವಸ್ತುಗಳ ಉದ್ದಿಮೆ

ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ತಾಣಗಳಲ್ಲಿ ಕಸ್ಟಮೈಸ್ಡ್ ಮುದ್ರಿತ ಸರಕುಗಳ ಬೇಡಿಕೆ ಹೆಚ್ಚಾಗಿದೆ. ಜನರು ತಮ್ಮ ನೆಚ್ಚಿನ ಫೋಟೋಗಳು ಅಥವಾ ಸಂದೇಶಗಳನ್ನು ಟಿ-ಶರ್ಟ್‌ಗಳು, ಮಗ್‌ಗಳು, ನೋಟ್‌ಬುಕ್‌ಗಳಲ್ಲಿ ಮುದ್ರಿಸಲು ಬಯಸುತ್ತಾರೆ. ಪ್ರಿಂಟರ್ ಖರೀದಿಸಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಸ್ತುಗಳ ಮೇಲೆ ಮುದ್ರಿಸಿ ಆನ್​ಲೈನ್ ಮೂಲಕ ಮಾರಾಟ ಮಾಡುವ ಉದ್ದಿಮೆ ಆರಂಭಿಸುವುದು ಪ್ರಸಕ್ತ ಸನ್ನಿವೇಶದಲ್ಲಿ ಹೆಚ್ಚು ಆದಾಯ ತಂದುಕೊಡುವ ಮತ್ತು ಲಾಭದಾಯಕವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Mon, 26 December 22

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ