ನವದೆಹಲಿ, ಮಾರ್ಚ್ 28: ಕೇಂದ್ರ ಸರ್ಕಾರ ಮುಂಬರುವ ಕ್ವಾರ್ಟರ್ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರ ಪ್ರಕಟಿಸಿದೆ. 2025ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಗೆ ಪಿಪಿಎಫ್, ಪೋಸ್ಟ್ ಆಫೀಸ್ ಎಫ್ಡಿ ಸೇರಿದಂತೆ ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಿಗೆ ಹಿಂದಿನ ಬಡ್ಡಿದರವನ್ನೇ ಮುಂದುವರಿಸಲು ನಿರ್ಧರಿಸಿದೆ. ಸತತ ಐದು ಕ್ವಾರ್ಟರ್ಗಳಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ.
‘2024ರ ಏಪ್ರಿಲ್ 1ರಂದು ಆರಂಭವಾಗಿ 2025ರ ಜೂನ್ 30ರವರೆಗೂ ಇರುವ ವರ್ಷದ ಮೊದಲ ಕ್ವಾರ್ಟರ್ಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. 2024-25ರ ಹಣಕಾಸು ವರ್ಷದ ನಾಲ್ಕನೇ ಕ್ವಾರ್ಟರ್ನಲ್ಲಿ ಇರುವ ದರಗಳೇ ಮುಂದುವರಿಯಲಿವೆ’ ಎಂದು ಹಣಕಾಸು ಸಚಿವಾಲ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು ಅಂಚೆ ಕಚೇರಿ ಸ್ಕೀಮ್ಗಳಾಗಿವೆ. ಕೆಲ ಸ್ಕೀಮ್ಗಳು ಕಮರ್ಷಿಯಲ್ ಬ್ಯಾಂಕುಗಳಲ್ಲೂ ಲಭ್ಯ ಇರುತ್ತವೆ. ಪಿಪಿಎಫ್, ಸುಕನ್ಯ ಸಮೃದ್ಧಿ ಯೋಜನೆ, ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್, ಪೋಸ್ಟ್ ಆಫೀಸ್ ಆರ್ಡಿ, ಕಿಸಾನ್ ವಿಕಾಸ್ ಪತ್ರ ಇತ್ಯಾದಿ ಯೋಜನೆಗಳು ಒಳಗೊಂಡಿವೆ.
ಇದನ್ನೂ ಓದಿ: ಗಮನಿಸಿ, ಈ ಬ್ಯಾಂಕುಗಳ ವಿಶೇಷ ಠೇವಣಿ ಸ್ಕೀಮ್ಗಳು, ಮಾರ್ಚ್ 31ರವರೆಗೆ ಲಭ್ಯ
ಸುಕನ್ಯ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಗರಿಷ್ಠ ಬಡ್ಡಿದರ ಇದೆ. ವಿವಿಧ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳು ಹಾಗೂ ಅವುಗಳ ಇತ್ತೀಚಿನ ಬಡ್ಡಿದರಗಳ ವಿವರ ಈ ಕೆಳಕಂಡಂತಿದೆ:
ಇದರಲ್ಲಿ ಸೇವಿಂಗ್ಸ್ ಡೆಪಾಸಿಟ್ ದರವು ಅಂಚೆ ಕಚೇರಿಯಲ್ಲಿ ತೆರೆಯಲಾಗುವ ಉಳಿತಾಯ ಖಾತೆಯಲ್ಲಿ ಹಾಗೇ ಇರುವ ಹಣಕ್ಕೆ ಸಿಗುವ ಬಡ್ಡಿಯಾಗಿರುತ್ತದೆ.
ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಲಂಪ್ಸಮ್ ಇನ್ವೆಸ್ಟ್ಮೆಂಟ್ ಸ್ಕೀಮ್ ಆಗಿದ್ದು ಐದು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಹೂಡಿಕೆದಾರರು ಬೇಕೆಂದರೆ ಮೂರು ವರ್ಷ ವಿಸ್ತರಣೆ ಮಾಡಲು ಅವಕಾಶ ಇದೆ.
ಕಿಸಾನ್ ವಿಕಾಸ್ ಪತ್ರ ಕೂಡ ಲಂಪ್ಸಮ್ ಹೂಡಿಕೆಯಾಗಿದ್ದು, ಇದರ ಮೆಚ್ಯೂರಿಟಿ ಅವಧಿ 124 ತಿಂಗಳಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಗಳು ದೀರ್ಘಾವಧಿ ಹೂಡಿಕೆಯನ್ನು ಉತ್ತೇಜಿಸುತ್ತದೆ. ವರ್ಷಕ್ಕೆ ಗರಿಷ್ಠ ಒಂದೂವರೆ ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಬಾಲಕಿಯ ಹೆಸರಿನಲ್ಲಿ ತೆರೆಯಬಹುದು. ಪಿಪಿಎಫ್ ಖಾತೆಯನ್ನು ಯಾರು ಬೇಕಾದರೂ ತೆರೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Fri, 28 March 25