ಎಸ್​ಐಬಿ ಕ್ವಿಕ್ ಎಫ್​ಡಿ; ಎಸ್​ಬಿ ಅಕೌಂಟ್ ಬೇಕಿಲ್ಲ, ನೇರವಾಗಿ ಠೇವಣಿ ಇಡಿ; ಬಹಳ ಸಿಂಪಲ್, ಎಲ್ಲಾ ಆನ್​ಲೈನ್

SIB Quick FD scheme: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಎಸ್​ಐಬಿ ಕ್ವಿಕ್ ಎಫ್​ಡಿ ಸ್ಕೀಮ್ ಆರಂಭಿಸಿದೆ. ಬ್ಯಾಂಕ್ ಖಾತೆ ಇರದವರು ಅಕೌಂಟ್ ತೆರೆಯದೆಯೇ ನೇರವಾಗಿ ಫಿಕ್ಸೆಡ್ ಡೆಪಾಸಿಟ್ ಇಡಬಹುದು. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಆನ್​ಲೈನ್​ನಲ್ಲಿ ನೀವು ಎಫ್​ಡಿ ಆರಂಭಿಸಬಹುದು. ಪ್ಯಾನ್ ಮತ್ತು ಆಧಾರ್​ನ ಸ್ಕ್ಯಾನ್ಡ್ ಕಾಪಿ ಇದ್ದರೆ ಐದೇ ನಿಮಿಷದಲ್ಲಿ ಠೇವಣಿ ಇಡಲು ಸಾಧ್ಯ.

ಎಸ್​ಐಬಿ ಕ್ವಿಕ್ ಎಫ್​ಡಿ; ಎಸ್​ಬಿ ಅಕೌಂಟ್ ಬೇಕಿಲ್ಲ, ನೇರವಾಗಿ ಠೇವಣಿ ಇಡಿ; ಬಹಳ ಸಿಂಪಲ್, ಎಲ್ಲಾ ಆನ್​ಲೈನ್
ಹೂಡಿಕೆ, ಪ್ರಾತಿನಿಧಿಕ ಚಿತ್ರ

Updated on: Feb 17, 2025 | 6:25 PM

ಬ್ಯಾಂಕಿಂಗ್ ವ್ಯವಸ್ಥೆ ದಿನದಿಂದ ದಿನಕ್ಕೆ ಸರಳಗೊಳ್ಳುತ್ತಾ ಹೋಗುತ್ತಿದೆ. ಕೆಲ ಬ್ಯಾಂಕುಗಳು ತಂತ್ರಜ್ಞಾನ ಬಳಸಿ ಉತ್ಕೃಷ್ಟ ಮತ್ತು ಸುಲಭ ಹಣಕಾಸು ಉತ್ಪನ್ನಗಳನ್ನು ನೀಡುತ್ತವೆ. ಇಂಥ ಬ್ಯಾಂಕುಗಳಲ್ಲಿ ಎಸ್​ಐಬಿಯೂ ಒಂದು. ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಎಸ್​ಐಬಿ ಕ್ವಿಕ್ ಎಫ್​ಡಿ ಎನ್ನುವ ಹೊಸ ಪ್ಲಾನ್ ಅನಾವರಣಗೊಳಿಸಿದೆ. ಇದರಲ್ಲಿ ಯಾರು ಬೇಕಾದರೂ ಕೂಡ ಸುಲಭವಾಗಿ ಫಿಕ್ಸೆಡ್ ಡೆಪಾಸಿಟ್ ಇಡಬಹುದು. ಪ್ರಕ್ರಿಯೆ ಬಹಳ ಸರಳ.

ಬ್ಯಾಂಕ್ ಖಾತೆ ಇಲ್ಲದಿದ್ದರೂ ಎಫ್​ಡಿ ಸಾಧ್ಯ

ಎಸ್​ಐಬಿ ಕ್ವಿಕ್ ಎಫ್​ಡಿ ಅಡಿ ಠೇವಣಿ ಇಡಲು ನೀವು ಸೌತ್ ಇಂಡಿಯನ್ ಗ್ರಾಹಕರೇ ಆಗಿರಬೇಕು ಎನ್ನುವ ನಿಯಮ ಇಲ್ಲ. ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆದ ಬಳಿಕ ಎಫ್​ಡಿ ಇಡಬೇಕು ಎನ್ನುವ ಕಡ್ಡಾಯವೂ ಇಲ್ಲ. ಬ್ಯಾಂಕ್​ನಲ್ಲಿ ಅಕೌಂಟ್ ಇಲ್ಲದಿದ್ದರೂ ನೇರವಾಗಿ ಎಫ್​ಡಿ ಇಡಲು ಅವಕಾಶ ಕೊಡುತ್ತದೆ ಇದು.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ

ನೀವು ಕೇವಲ ಐದು ನಿಮಿಷದಲ್ಲಿ ಎಫ್​ಡಿ ಇಡಬಹುದಾದಷ್ಟು ಇದರ ಪ್ರಕ್ರಿಯೆ ಸರಳ ಇದೆ. ಎಲ್ಲವನ್ನೂ ಆನ್​ಲೈನ್​ನಲ್ಲೇ ಮಾಡಬಹುದು. ಕೆವೈಸಿ ಸಲ್ಲಿಸುವುದಷ್ಟೇ ಪ್ರಮುಖ ಕೆಲಸ. ಪ್ಯಾನ್ ಮತ್ತು ಆಧಾರ್ ದಾಖಲೆಯ ಆನ್​ಲೈನ್ ಪ್ರತಿ ನಿಮ್ಮಲ್ಲಿ ಸಿದ್ಧವಾಗಿದ್ದರೆ ಐದೇ ನಿಮಿಷದಲ್ಲಿ ಎಸ್​ಐಬಿಯಲ್ಲಿ ನಿಶ್ಚಿತ ಠೇವಣಿ ಪ್ಲಾನ್ ಆರಂಭಿಸಬಹುದು.

ಯುಪಿಐ ಮೂಲಕ ಪೇಮೆಂಟ್ ಮಾಡಿ…

ನೀವು ಯಾವುದೇ ಹೊತ್ತಿನಲ್ಲೂ ಆನ್​ಲೈನ್​ನಲ್ಲಿ ಎಸ್​ಐಬಿ ಕ್ವಿಕ್ ಎಫ್​ಡಿ ಸ್ಕೀಮ್ ಆರಂಭಿಸಬಹುದು. ಎಫ್​ಡಿಗೆ ಹಣ ಡೆಪಾಸಿಟ್ ಕೂಡ ಆನ್​ಲೈನ್​ನಲ್ಲೇ ಮಾಡಬಹುದು. ಯಾವುದೇ ಬ್ಯಾಂಕ್​ನಿಂದ ನಿಮ್ಮ ಹಣವನ್ನು ಯುಪಿಐ ಮೂಲಕ ಎಫ್​ಡಿಗೆ ಪಾವತಿಸಬಹುದು.

ಇದನ್ನೂ ಓದಿ: EPF rate: ಆರ್​ಬಿಐ ದರ ಕಡಿಮೆಗೊಳಿಸಿದ್ದರಿಂದ ಇಪಿಎಫ್​ಒ ಬಡ್ಡಿಯೂ ಕಡಿಮೆ ಆಗುತ್ತಾ? ಈ ವರ್ಷಕ್ಕೆ ಎಷ್ಟಿರಬಹುದು ಬಡ್ಡಿದರ? ಇಲ್ಲಿದೆ ಡೀಟೇಲ್ಸ್

ಎಫ್​ಡಿಗೆ ಕನಿಷ್ಠ ಮೊತ್ತ ಒಂದು ಸಾವಿರ ರೂ ಇದೆ. ಹೀಗಾಗಿ, ನಿಮ್ಮ ವಿವಿಧ ಅಗತ್ಯಗಳಿಗೆ ಇದು ಅನುಕೂಲವಾಗಿದೆ. ಠೇವಣಿಗೆ ಬಡ್ಡಿಯೂ ಆಕರ್ಷಕ ಇದೆ. ಅವಧಿಗೆ ಮುನ್ನ ಠೇವಣಿ ಹಿಂಪಡೆಯಲೂ ಅವಕಾಶಗಳಿವೆ. ಐದು ಲಕ್ಷ ರೂವರೆಗಿನ ಹಣಕ್ಕೆ ಡಿಐಸಿಜಿಸಿಯಿಂದ ಇನ್ಷೂರೆನ್ಸ್ ಖಾತ್ರಿಯೂ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ