ನಿಶ್ಚಿತ ಠೇವಣಿ (FD), ಆವರ್ತಿತ ಠೇವಣಿ (RD), ಸಣ್ಣ ಉಳಿತಾಯ ಯೋಜನೆ (Small Savings Schemes) ಇತ್ಯಾದಿ ಕಡೆ ಹೂಡಿಕೆಯಲ್ಲಿ ವರ್ಷಕ್ಕೆ ಗರಿಷ್ಠ ಶೇ. 8.5ರಷ್ಟು ಮಾತ್ರವೇ ಹಣ ಬೆಳೆಯುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಮಾಡಬಹುದಾದರೂ ರಿಸ್ಕ್ ಅಂಶ ಬಹಳ ಹೆಚ್ಚು. ಈ ಸಂದರ್ಭದಲ್ಲಿ ಅತಿ ಕಡಿಮೆ ರಿಸ್ಕ್ ಮತ್ತು ಹೆಚ್ಚು ಲಾಭ ತರುವ ಹೂಡಿಕೆಯಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bonds) ಪ್ರಮುಖವಾದುದು. ನಿಜಕ್ಕೂ ಇದೊಂದು ಬಹಳ ಉಪಯುಕ್ತ ಎನಿಸುವ ಇನ್ವೆಸ್ಟ್ಮೆಂಟ್ ಯೋಜನೆ. ಎಂಟು ವರ್ಷ ಮಾತ್ರವೇ ನಿಮ್ಮ ಕೈಯಿಂದ ಹಣ ಹೊಂದಿಸಿ ನಿರಂತರವಾಗಿ ಹೂಡಿಕೆ ಮಾಡಿದರೆ ಸಾಕು, ನಿಮ್ಮ ಜೀವನದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬಹುದು. ಅದನ್ನು ಸಾಧ್ಯವಾಗಿಸುವ ಸಿಂಪಲ್ ಟ್ರಿಕ್ಸ್ ಇಲ್ಲಿದೆ…
ಸಾವರನ್ ಗೋಲ್ಡ್ ಬಾಂಡ್ ಎಂಟು ವರ್ಷಕ್ಕೆ ಮೆಚ್ಯೂರ್ ಆಗುವ ಸ್ಕೀಮ್. ಚಿನ್ನದ ದರ ಎಷ್ಟು ಬೆಳೆಯುತ್ತದೆ ಅದಕ್ಕೆ ಅನುಗುಣವಾಗಿ ನಿಮಗೆ ಲಾಭ ಸಿಗುತ್ತಾ ಹೋಗುತ್ತದೆ. 2015ರಲ್ಲಿ ಆರಂಭಗೊಂಡ ಈ ಸ್ಕೀಮ್ನಲ್ಲಿ ಈಗ ಎರಡು ಬಾಂಡ್ಗಳು ಮೆಚ್ಯೂರ್ ಆಗಿವೆ. ಮೊದಲ ಬಾಂಡ್ ಶೇ. 12ರಷ್ಟು ಲಾಭ ತಂದರೆ, ಎರಡನೇ ಬಾಂಡ್ ಶೇ. 13ಕ್ಕಿಂತಲೂ ಹೆಚ್ಚು ಲಾಭ ಕೊಟ್ಟಿದೆ. ಚಿನ್ನದ ಬೆಲೆ ವರ್ಷಕ್ಕೆ ಶೇ. 10ರಿಂದ 14 ರಷ್ಟು ಬೆಳೆಯುವ ಸಾಧ್ಯತೆ ಇರುವುದರಿಂದ ಸರಾಸರಿಯಾಗಿ 12 ಪ್ರತಿಶತದ ವಾರ್ಷಿಕ ಬೆಳವಣಿಗೆ ದರ ನಿರೀಕ್ಷಿಸಬಹುದು.
ಸಾವರನ್ ಗೋಲ್ಡ್ ಬಾಂಡ್ನಲ್ಲಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 4 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಅಂದರೆ ಸುಮಾರು 3ರಿಂದ 4 ಕೋಟಿ ರೂನಷ್ಟು ಹೂಡಿಕೆ ಮಾಡಬಹುದು. ಒಂದು ವರ್ಷದಲ್ಲಿ ಆರ್ಬಿಐ ಹಲವು ಬಾರಿ ಈ ಬಾಂಡ್ಗಳನ್ನು ಬಿಡುಗಡೆ ಮಾಡುತ್ತದೆ. ನೀವು ತಿಂಗಳಿಗೆ 10,000 ರೂ ಹಣವನ್ನು ಇದಕ್ಕಾಗಿ ಎತ್ತಿ ಇಟ್ಟುಕೊಳ್ಳುತ್ತೀರಿ ಎಂದು ಭಾವಿಸೋಣ.
ಇದನ್ನೂ ಓದಿ: ಎಫ್ಡಿ, ಮ್ಯೂಚುವಲ್ ಫಂಡ್ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ
ಒಂದು ವರ್ಷದಲ್ಲಿ ನೀವು 1,20,000 ರೂ ಹೂಡಿಕೆ ಮಾಡಬಹುದು. ಈ ರೀತಿ ನೀವು ಎಂಟು ವರ್ಷ ಕಾಲ ಹೂಡಿಕೆ ಮಾಡಿದರೆ ನಿಮ್ಮ ಕೈಯಿಂದ ಆಗುವ ಹೂಡಿಕೆ 9,60,000 ರೂ ಆಗುತ್ತದೆ. ಇಲ್ಲಿಂದ ನಿಮ್ಮ ಒಂದೊಂದೇ ಎಸ್ಜಿಬಿ ಬಾಂಡ್ಗಳು ಮೆಚ್ಯೂರ್ ಆಗತೊಡಗುತ್ತವೆ.
ಈಗ ಮೆಚ್ಯೂರ್ ಆಗುವ ಬಾಂಡ್ನ ಹಣವನ್ನು ಮರುಹೂಡಿಕೆ ಮಾಡುತ್ತಾ ಹೋಗಬೇಕು. ಜೊತೆಗೆ ಮಾಮೂಲಿಯಂತೆ ವರ್ಷಕ್ಕೆ 1.2 ಲಕ್ಷ ರೂ ಹಣದ ಹೂಡಿಕೆಯನ್ನು ಮುಂದುವರಿಸುತ್ತಾ ಹೋಗಬೇಕು. ಇದೇ ರೀತಿ 40 ವರ್ಷ ಹೂಡಿಕೆ ಮುಂದುವರಿಸಿದರೆ ಕನಿಷ್ಠ 11 ಲಕ್ಷ ರೂ ಆದರೂ ನಿಮಗೆ ಅಂತಿಮವಾಗಿ ಸಿಗುತ್ತದೆ. ಇದರ ಜೊತೆಗೆ ನಿಮ್ಮ ಹೂಡಿಕೆಯ ಮೊತ್ತದ ಮೇಲೆ ವರ್ಷಕ್ಕೆ ಶೇ. 2.5ರಷ್ಟು ಬಡ್ಡಿಹಣದ ಆದಾಯವೂ ನಿಮಗೆ ಸಿಗುತ್ತದೆ.
ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ
ನೀವು ತಿಂಗಳಿಗೆ 10,000 ರೂನಂತೆ ಉಳಿಸಿ ಎಸ್ಜಿಬಿ ಮೇಲೆ ಹೂಡಿಕೆ ಮತ್ತು ಮರುಹೂಡಿಕೆ ಮಾಡುತ್ತಾ ಹೋದರೆ ಒಂದು ಕೋಟಿ ರೂ ಸಂಪತ್ತು ನಿಮ್ಮದಾಗಲು 20 ವರ್ಷ ಬೇಕಾಗುತ್ತದೆ.
ಸರ್ಕಾರ ಈ ಸಾವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಅಷ್ಟು ವರ್ಷ ಮುಂದುವರಿಸಿಕೊಂಡು ಹೋದರೆ ಇದು ಸಾಧ್ಯವಾಗುತ್ತದೆ. ಈ ಯೋಜನೆ ಇರುವವರೆಗೂ ಈ ಮೇಲೆ ತಿಳಿಸಿದ ಮಾರ್ಗದಲ್ಲಿ ನೀವು ಹೂಡಿಕೆ ಮಾಡಲು ಅಡ್ಡಿ ಇಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Thu, 15 February 24