ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ನಿಮ್ಮ ಉಳಿತಾಯ ಹಣಕ್ಕೆ ಭರ್ಜರಿ ಲಾಭ; 5 ಕೋಟಿ ಆದಾಯ ಹೇಗೆ?

|

Updated on: Mar 24, 2024 | 9:00 AM

Systematic Investment Plan: ಮ್ಯೂಚುವಲ್ ಫಂಡ್​ನ ಎಸ್​ಐಪಿಯಲ್ಲಿ ನೀವು ನಿಯಮಿತವಾಗಿ ಮತ್ತು ದೀರ್ಘಾವಧಿ ಹೂಡಿಕೆ ಮಾಡಿದರೆ ಹಣ ಬಹಳ ಹೆಚ್ಚು ಬೇಗ ಬೆಳೆಯುತ್ತದೆ. ಹೂಡಿಕೆ ಅವಧಿ ಹೆಚ್ಚಿದಷ್ಟೂ ಒಟ್ಟಾರೆಯಾಗಿ ಹಣ ಡಬಲ್ ಆಗುವ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ನೀವು 25 ವರ್ಷದಲ್ಲಿ 4ರಿಂದ 5 ಕೋಟಿ ರೂ ಗಳಿಸುವ ಗುರಿ ಇಟ್ಟುಕೊಂಡರೆ, ತಿಂಗಳಿಗೆ 25,000 ರೂನಂತೆ ಹೂಡಿಕೆ ಮಾಡಬೇಕು. ಆ ಸ್ಕೀಮ್ ವರ್ಷಕ್ಕೆ ಶೇ. 12ರಷ್ಟು ಲಾಭ ಮಾಡಬೇಕು. ಆಗ ಗುರಿ ಈಡೇರಲು ಸಾಧ್ಯವಾಗುತ್ತದೆ.

ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಮೂಲಕ ನಿಮ್ಮ ಉಳಿತಾಯ ಹಣಕ್ಕೆ ಭರ್ಜರಿ ಲಾಭ; 5 ಕೋಟಿ ಆದಾಯ ಹೇಗೆ?
ಹೂಡಿಕೆ
Follow us on

ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಈಗ ಹೆಚ್ಚಿನ ಜನರ ನೆಚ್ಚಿನ ಆಯ್ಕೆಯಾಗಿದೆ. ಬ್ಯಾಂಕುಗಳ ರೆಕರಿಂಗ್ ಡೆಪಾಸಿಟ್ (ಆರ್​ಡಿ) ರೀತಿಯಲ್ಲಿ ನಿಯಮಿತವಾಗಿ ಹಣ ಕಟ್ಟಲು ಈ ಎಸ್​ಐಪಿ ಅವಕಾಶ ಕೊಡುತ್ತದೆ. ಒಬ್ಬರು ಒಂದಕ್ಕಿಂತ ಹೆಚ್ಚು ಎಸ್​ಐಪಿಗಳನ್ನು ನಡೆಸಲು ಸಾಧ್ಯ ಇದೆ. ಉತ್ತಮ ಮ್ಯೂಚುವಲ್ ಫಂಡ್ ಸಿಕ್ಕರೆ ದೀರ್ಘಾವಧಿಯಲ್ಲಿ (long term investment) ಸರಾಸರಿಯಾಗಿ ಶೇ. 12ರ ವಾರ್ಷಿಕ ದರದಲ್ಲಿ ಲಾಭ ತರುವುದುಂಟು. ಹೆಚ್ಚಿನ ಮ್ಯೂಚುವಲ್ ಫಂಡ್​ಗಳು ಶೇ. 8ಕ್ಕಿಂತಲೂ ಹೆಚ್ಚು ದರದಲ್ಲಿ ಲಾಭ ತರುತ್ತವೆ. ಇನ್ನೂ ಕೆಲ ಮ್ಯೂಚುವಲ್ ಫಂಡ್​ಗಳು ಶೇ. 12ಕ್ಕಿಂತಲೂ ಹೆಚ್ಚು ಲಾಭ ತರಬಹುದು.

ನೀವು ಆಯ್ದುಕೊಂಡಿರುವ ಮ್ಯೂಚುವಲ್ ಫಂಡ್ ಶೇ. 12ರಷ್ಟು ಲಾಭ ತರುತ್ತದೆ ಎಂದಿಟ್ಟುಕೊಳ್ಳಿ. ಎಸ್​ಐಪಿ ಮೂಲಕ ತಿಂಗಳಿಗೆ 25,000 ರೂ ಹಣವನ್ನು ನೀವು ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ 20 ಲಕ್ಷ ರೂ ನಿಮ್ಮದಾಗಿರುತ್ತದೆ. ಅದೇ ನೀವು 25 ವರ್ಷದವರೆಗೂ ಅದೇ ರೀತಿ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದರೆ 5 ಕೋಟಿ ರೂ ಸಮೀಪಕ್ಕೆ ನಿಮ್ಮ ಸಂಪತ್ತು ಬೆಳೆದಿರುತ್ತದೆ.

ಎಸ್​ಐಪಿಯಲ್ಲಿ, ಅಥವಾ ಯಾವುದೇ ಹೂಡಿಕೆಯಲ್ಲಿ ದೀರ್ಘಾವಧಿಯದ್ದು ಉತ್ತಮ. ನೀವು ಹೆಚ್ಚು ಕಾಲ ಹೂಡಿಕೆ ಮಾಡಿದಷ್ಟೂ ಹಣ ಹೆಚ್ಚು ಬೇಗ ಬೆಳೆಯುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್

ತಿಂಗಳಿಗೆ 25,000 ರೂ ಹಣವನ್ನು ವಿವಿಧ ವರ್ಷಗಳವರೆಗೆ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗಬಹುದು?

ಐದು ವರ್ಷ ಹೂಡಿಕೆ ಮಾಡಿದರೆ…

ತಿಂಗಳಿಗೆ 25,000 ರೂನಂತೆ ನೀವು ಐದು ವರ್ಷ ಕಾಲ ಹೂಡಿಕೆ ಮಾಡಿದರೆ, ನೀವು ಒಟ್ಟು ಹೂಡಿಕೆ 15 ಲಕ್ಷ ರೂ ಇರುತ್ತದೆ. ಶೇ. 12ರ ದರದಲ್ಲಿ ಎಸ್​ಐಪಿ ಫಂಡ್ ಬೆಳೆದಲ್ಲಿ ಐದು ವರ್ಷದ ಬಳಿಕ ಮೆಚ್ಯೂರಿಟಿ ಹಣ 20.62 ಲಕ್ಷ ರೂ ಆಗುತ್ತದೆ.

ಹತ್ತು ವರ್ಷ ಹೂಡಿಕೆ ಮಾಡಿದರೆ….

ನೀವು 25,000 ರೂನಂತೆ 10 ವರ್ಷ ಕಾಲ ಹೂಡಿಕೆ ಮುಂದುವರಿಸಿದರೆ, ಒಟ್ಟು ಹೂಡಿಕೆ ಹಣ 30 ಲಕ್ಷ ರೂ ಆಗುತ್ತದೆ. 10 ವರ್ಷದ ಮೆಚ್ಯೂರಿಟಿ ಹಣ 58.08 ಲಕ್ಷ ರೂ ಆಗುತ್ತದೆ. ಅಂದರೆ ಹೆಚ್ಚೂಕಡಿಮೆ ಹಣ ಡಬಲ್ ಆಗಲು 10 ವರ್ಷ ಬೇಕಾಗುತ್ತದೆ.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಇಪ್ಪತ್ತು ವರ್ಷಕ್ಕೆ ಹೂಡಿಕೆ ಮಾಡಿದರೆ…

ನೀವು ಇದೇ ರೀತಿ 20 ವರ್ಷ ಹೂಡಿಕೆ ಮುಂದುವರಿಸಿದರೆ ನಿಮ್ಮ ಒಟ್ಟು ಹೂಡಿಕೆ 60 ಲಕ್ಷ ರೂ ಆಗುತ್ತದೆ. ಶೇ. 12ರ ದರದಲ್ಲೇ ಲಾಭ ಬೆಳೆಯುತ್ತಾ ಹೋದರೆ 20 ವರ್ಷದ ಬಳಿಕ ಮೆಚ್ಯೂರಿಟಿ ಹಣ 2.49 ಕೋಟಿ ರೂ ಆಗುತ್ತದೆ. ಅಂದರೆ ಹೂಡಿಕೆಯು ನಾಲ್ಕು ಪಟ್ಟು ಬೆಳೆದಿರುತ್ತದೆ. ಪ್ರತೀ ಐದು ವರ್ಷಕ್ಕೆ ಹಣ ಡಬಲ್ ಆದಂತಾಗುತ್ತದೆ.

ಇಪ್ಪತ್ತೈದು ವರ್ಷಕ್ಕೆ ಹೂಡಿಕೆ ಮಾಡಿದರೆ….

ಇನ್ನು ನಿಮ್ಮ ಹೂಡಿಕೆಯನ್ನು 25 ವರ್ಷ ಮುಂದುವರಿಸಿದರೆ ಮತ್ತು ಶೇ. 12ರ ದರದಲ್ಲೇ ಲಾಭ ಬಂದಲ್ಲಿ 75 ಲಕ್ಷ ಇರುವ ನಿಮ್ಮ ಹೂಡಿಕೆ ಹಣ 4.74 ಕೋಟಿ ರೂ ಆಗುತ್ತದೆ. 4 ವರ್ಷಕ್ಕೆ ಹಣ ಡಬಲ್ ಆದಂತಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ