Insurance Hack: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ

Insurance hack using SIP technique: ಬ್ಯುಸಿನೆಸ್ ಕನ್ಸಲ್ಟೆಂಟ್ ಮತ್ತು ಪರ್ಸನಲ್ ಫೈನಾನ್ಸ್ ತಜ್ಞರಾದ ಪ್ರವೀಣ್ ಸೋನಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಇನ್ಷೂರೆನ್ಸ್ ಹ್ಯಾಕ್ ತಿಳಿಸಿದ್ದಾರೆ. ರೆಗ್ಯುಲರ್ ಪ್ಲಾನ್ ಜೊತೆಗೆ ಈಕ್ವಿಟಿಯಲ್ಲಿ 10 ವರ್ಷ ಎಸ್​ಐಪಿ ನಡೆಸುವುದು ಅವರ ಟ್ರಿಕ್. ಹತ್ತು ವರ್ಷದ ಬಳಿಕ ಕೈಯಿಂದ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟುವ ಭಾರ ತಪ್ಪಿಸಿಕೊಳ್ಳುವ ಐಡಿಯಾ ಅದು.

Insurance Hack: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
ಇನ್ಷೂರೆನ್ಸ್

Updated on: Aug 21, 2025 | 4:36 PM

ಇನ್ಷೂರೆನ್ಸ್ ಪಾಲಿಸಿಗಳು (Insurance) ಭವಿಷ್ಯ ಜೀವನಕ್ಕೆ ಭದ್ರತೆ ಕೊಡಬಲ್ಲುವು. ಆದರೆ, ಅಧಿಕ ಪ್ರೀಮಿಯಮ್ ಕಟ್ಟುವುದು ಅನೇಕರಿಗೆ ಕಷ್ಟಕರವಾಗುತ್ತದೆ. ಅದರಲ್ಲೂ ದೀರ್ಘಾವಧಿವರೆಗೆ ಪ್ರೀಮಿಯಮ್ ಕಟ್ಟುವುದು ದುಸ್ತರ ಎನಿಸಬಲ್ಲುದು. ಪರ್ಸನಲ್ ಫೈನಾನ್ಸ್ ತಜ್ಞ ಪ್ರೇಮ್ ಸೋನಿ ಎನ್ನುವವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ತಾನು 2 ಕೋಟಿ ರೂ ಕವರೇಜ್ ಇರುವ ಟರ್ಮ್ ಇನ್ಷೂರೆನ್ಸ್ ಅನ್ನು ಉಚಿತವಾಗಿ ಪಡೆಯಲು ಉಪಯೋಗಿಸಿದ ಟ್ರಿಕ್ಸ್ ಅನ್ನು ವಿವರಿಸಿದ್ದಾರೆ.

ಪ್ರೇಮ್ ಸೋನಿ ನೀಡಿದ ವಿವರಣೆ ಪ್ರಕಾರ ಅವರು 60 ವರ್ಷಕ್ಕೆ 2 ಕೋಟಿ ರೂ ಕನಿಷ್ಠ ಖಾತ್ರಿಯ ಮೊತ್ತಕ್ಕೆ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಲು ನಿರ್ಧರಿಸಿದ್ದಾರೆ. ಆಗ ಅವರ ಮುಂದೆ ಏಜೆಂಟ್ ಇಟ್ಟಿದ್ದು ಎರಡು ಆಯ್ಕೆ. ಮೊದಲನೆಯದು, ರೆಗ್ಯುಲರ್ ಪೇ. ಇದಕ್ಕೆ ಪ್ರೀಮಿಯಮ್ ವರ್ಷಕ್ಕೆ 31,158 ರೂ. ಎರಡನೇ ಆಯ್ಕೆ, 10 ವರ್ಷದ ಪಾವತಿಯದ್ದು. ಇದಕ್ಕೆ ಪ್ರೀಮಿಯಮ್ ವರ್ಷಕ್ಕೆ 66,797 ರೂ.

ಇಲ್ಲಿ ವರ್ಷಕ್ಕೆ 66,797 ರೂನಂತೆ 10 ವರ್ಷ ಕಟ್ಟುವ ಆಯ್ಕೆ ಆಕರ್ಷಕ ಎನಿಸುತ್ತದೆ. ಕಾರಣ, ಪ್ರೀಮಿಯಮ್ ಪಾವತಿ ಬೇಗ ಮುಗಿಯುತ್ತದೆ ಎನ್ನುವ ಸಮಾಧಾನ. ಆದರೆ, ಪ್ರೇಮ್ ಸೋನಿ ರೆಗ್ಯುಲರ್ ಪ್ಲಾನ್ ಆಯ್ಕೆ ಮಾಡಿಕೊಂಡರು.

ಇದನ್ನೂ ಓದಿ: ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್​ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ

ಅಂದರೆ, ವರ್ಷಕ್ಕೆ 31,158 ರೂ ಪಾವತಿಸುವ ಪ್ಲಾನ್ ಆರಿಸಿಕೊಂಡರು. ವರ್ಷಕ್ಕೆ ಅವರಿಗೆ ಸುಮಾರು 30,000 ರೂ ಪ್ರೀಮಿಯಮ್ ಉಳಿಯಿತು. ಆ ಹಣವನ್ನು ಅವರು ಈಕ್ವಿಟಿ ಎಸ್​ಐಪಿಗೆ ಹೂಡಿಕೆ ಮಾಡತೊಡಗಿದರು. ಅಂದರೆ ತಿಂಗಳಿಗೆ 2,500 ರೂ ಎಸ್​ಐಪಿ ಆರಂಭಿಸಿದರು.

ಪ್ರೇಮ್ ಸೋನಿ ಅವರ ಥ್ರೆಡ್ ಪೋಸ್ಟ್

ಈ ಎಸ್​ಐಪಿ ಶೇ. 12ರ ಸಿಎಜಿಆರ್​ನಲ್ಲಿ ರಿಟರ್ನ್ಸ್ ಕೊಟ್ಟರೆ, ಹತ್ತು ವರ್ಷದಲ್ಲಿ ಅವರ ಎಸ್​ಐಪಿ ಕಾರ್ಪಸ್ 5,80,847 ರೂ ಆಗುತ್ತದೆ. ಈಗ ಅವರು ಸಿಐಪಿ ನಿಲ್ಲಿಸಿ ಎಸ್ಡಬ್ಲ್ಯುಪಿ ಅಥವಾ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್ ಆರಂಭಿಸುತ್ತಾರಂತೆ. ಅದೇ ವೇಳೆ, ರೆಗ್ಯುಲರ್ ಟರ್ಮ್ ಇನ್ಷೂರೆನ್ಸ್ ಪಾವತಿಗೆ ಕೈಯಿಂದ ಹಣ ತೆರುವ ಬದಲು, ಎಸ್​ಡಬ್ಲ್ಯುಪಿಯಿಂದ ವರ್ಷಕ್ಕೆ 30,000 ರೂ ವಿತ್​ಡ್ರಾಯಲ್ ಮಾಡಿ ಪಾವತಿಸುತ್ತಾರಂತೆ.

ಅಂದರೆ, ಟರ್ಮ್ ಇನ್ಷೂರೆನ್ಸ್​ನ ಪ್ರೀಮಿಯಮ್ ಹಣವನ್ನು ಎಸ್​ಡಬ್ಲ್ಯುಪಿ ಮೂಲಕ ಭರಿಸತೊಡಗುತ್ತಾರೆ. ಇದೇ ರೀತಿ 30 ವರ್ಷ ಅವರು ವರ್ಷಕ್ಕೆ 30,000 ರೂ ವಿತ್​ಡ್ರಾ ಮಾಡುತ್ತಾ ಹೋದರೂ ಎಸ್​ಡಬ್ಲ್ಯುಪಿಯಲ್ಲಿರುವ ಹಣ ಮುಗಿದಿರುವುದಿಲ್ಲ. 98 ಲಕ್ಷ ರೂ ಉಳಿದಿರುತ್ತದೆ. ಜೊತೆಗೆ, ಇನ್ಷೂರೆನ್ಸ್ ಹಣವಾದ 2 ಕೋಟಿ ರೂ ಕೂಡ ಇರುತ್ತದೆ.

ಇದನ್ನೂ ಓದಿ: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ

ಇಲ್ಲಿ ಪ್ರೇಮ್ ಸೋನಿ ಅವರು ಆಕರ್ಷಕ ಎನಿಸಿದ್ದ 10 ವರ್ಷದ ಪ್ರೀಮಿಯಮ್ ಪ್ಲಾನ್ ಬದಲು ರೆಗ್ಯುಲರ್ ಪ್ಲಾನ್ ಆಯ್ಕೆ ಮಾಡಿಕೊಂಡು, ಉಳಿದ ಪ್ರೀಮಿಯಮ್ ಹಣವನ್ನು ಎಸ್​ಐಪಿಯಲ್ಲಿ ತೊಡಗಿಸಿದ ಫಲವಾಗಿ ಬಹುತೇಕ ಒಂದು ಕೋಟಿ ರೂ ಹೆಚ್ಚುವರಿ ಆದಾಯ ಪಡೆಯಲು ಶಕ್ಯರಾದರು.

ಇದು ಅಚ್ಚರಿ ಮೂಡಿಸುವ ಟ್ರಿಕ್ಸ್. ಆದರೆ, ಈ ಮ್ಯಾಜಿಕ್ ವರ್ಕೌಟ್ ಆಗಬೇಕಾದರೆ ಎಸ್​ಐಪಿಯಲ್ಲಿರುವ ಹೂಡಿಕೆಯು ಶೇ. 12ರ ಸಿಎಜಿಆರ್​ನಲ್ಲಿ ಬೆಳೆಯಬೇಕು. ಇಲ್ಲದಿದ್ದರೆ ಕಡಿಮೆ ಮೊತ್ತ ಶೇಖರಣೆ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Thu, 21 August 25