
ಎಲ್ಲಾ ಹೂಡಿಕೆಗಳು ರಿಟರ್ನ್ಸ್ ತರುತ್ತವೆ ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಇದು ಷೇರುಗಳಿಗೂ ಅನ್ವಯ ಆಗುತ್ತೆ, ಹೊಸ ಬ್ಯುಸಿನೆಸ್ಗಳಿಗೂ ಅನ್ವಯ ಆಗುತ್ತೆ. ಯಾವ ರೀತಿಯ ಬ್ಯುಸಿನೆಸ್ನಲ್ಲಿ ಹೂಡಿಕೆ ಮಾಡಬೇಕು, ಯಾವ ಷೇರುಗಳಲ್ಲಿ ಹೂಡಿಕೆ (share market) ಮಾಡಬೇಕು ಎಂಬುದನ್ನು ನಿರ್ಧರಿಸುವುದು ಅಷ್ಟು ಸುಲಭವಲ್ಲ. ಯಾವುದೋ ಆಕರ್ಷಣೆಗೆ ಒಳಗಾಗಿ ಹೂಡಿಕೆ ಮಾಡುವುದು ಡೇಂಜರ್. ಬ್ಯುಸಿನೆಸ್ ಅಥವಾ ಷೇರಿನ ಬಗ್ಗೆ ಕೂಲಂಕಷವಾಗಲ್ಲದಿದ್ದರೂ ಒಂದಷ್ಟು ಪ್ರಮುಖ ಅಂಶಗಳನ್ನು ಅಧ್ಯಯನ ನಡೆಸುವುದು ಬಹಳ ಮುಖ್ಯ. ಅದರಲ್ಲೂ ಷೇರು ಹೂಡಿಕೆದಾರರು ಪರಿಗಣಿಸಬೇಕಾದ ಪ್ರಮುಖ ಅಂಶಗಳ ವಿವರ ಇಲ್ಲಿದೆ…
ಕಂಪನಿಯು ತನ್ನ ಉದ್ಯಮದ ಮಾರುಕಟ್ಟೆಯಲ್ಲಿ ಎಷ್ಟು ಆಳ ಮುಟ್ಟಿದೆ ನೋಡಿ. ಅಂದರೆ, ಮಾರುಕಟ್ಟೆಯ ಎಲ್ಲೆಡೆ ಅದು ವ್ಯಾಪಿಸಿದ್ದರೆ ಮುಂದೆ ಅದರ ಪ್ರಗತಿಯಲ್ಲಿ ಹೆಚ್ಚೇನೂ ಬದಲಾವಣೆ ಆಗದೇ ಇರಬಹುದು. ಕಂಪನಿಯ ಮಾರ್ಕೆಟ್ ರೀಚ್ ಸದ್ಯ ಕಡಿಮೆ ಇದ್ದು, ಅದು ಹೆಚ್ಚು ವಿಸ್ತರಿಸುವ ಅವಕಾಶ ಇದ್ದರೆ, ಅಂಥ ಕಂಪನಿಯನ್ನು ಪರಿಗಣಿಸಬಹುದು.
ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…
ಕಂಪನಿ ಕಳೆದ 3-5 ವರ್ಷಗಳಲ್ಲಿ ಎಷ್ಟು ಆದಾಯ ವೃದ್ಧಿ ಕಂಡಿದೆ ಎಂಬುದನ್ನು ಪರಿಶೀಲಿಸಿ. ಎರಡಂಕಿಯ ಸಿಎಜಿಆರ್ ಇದ್ದರೆ ಉತ್ತಮ.
ಕೆಲ ಕಂಪನಿಗಳು ಬಹಳ ಅಧಿಕ ಆದಾಯ ಮತ್ತು ಲಾಭ ತೋರಿಸುತ್ತವೆ. ಆದರೆ, ಅವುಗಳ ಬಳಿ ಕ್ಯಾಷ್ ಉಳಿದಿರುವುದೇ ಇಲ್ಲ. ಎಲ್ಲವೂ ಕೂಡ ವರ್ಕಿಂಗ್ ಕ್ಯಾಪಿಟಲ್ಗೆ ಬಳಕೆ ಆಗುತ್ತಿರುತ್ತದೆ. ಒಂದು ಕಂಪನಿಯು ತನ್ನ ನಿವ್ವಳ ಲಾಭದ ಹಣವನ್ನು ಕ್ಯಾಷ್ ಫ್ಲೋ ಆಗಿ ಪರಿವರ್ತಿಸುತ್ತದಾ ಎಂದು ಗಮನಿಸಿ ನೋಡಿ.
ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!
ಬಿ2ಬಿ (ಉದ್ಯಮ ಉದ್ಯಮಗಳ ನಡುವಿನ ಬ್ಯುಸಿನೆಸ್) ಮತ್ತು ಬಿ2ಜಿ (ಸರ್ಕಾರದೊಂದಿಗೆ ಬ್ಯುಸಿನೆಸ್) ವ್ಯಾಲ್ಯುಯೇಶನ್ಗಿಂತ ಬಿ2ಸಿ ದೊಡ್ಡದು. ಬಿ2ಸಿ ಎಂದರೆ ಕನ್ಷಂಪ್ಷನ್ ಆಧಾರಿತವಾದ ಬ್ಯುಸಿನೆಸ್ಗಳು. ಉದಾಹರಣೆಗೆ, ಎಫ್ಎಂಸಿಜಿ ಸೆಕ್ಟರ್ ಇತ್ಯಾದಿ.
ನೀವು ಕಣ್ಣಿಟ್ಟಿರುವ ಷೇರಿನ ಉದ್ಯಮವನ್ನು ಗಮನಿಸಿ. ಅದರಲ್ಲಿ ಎಷ್ಟು ಕಂಪನಿಗಳು ಬ್ಯುಸಿನೆಸ್ ಮಾಡುತ್ತಿವೆ, ಎಷ್ಟು ಸ್ಪರ್ಧೆ ಇದೆ ನೋಡಿ. ಕಡಿಮೆ ಸ್ಪರ್ಧೆ ಇದ್ದರೆ ಉತ್ತಮ. ಅಲ್ಲಿರುವ ಕಂಪನಿಗಳು ಎಷ್ಟು ಆದಾಯ ಪಡೆಯುತ್ತಿವೆ, ಎಷ್ಟು ಲಾಭ ಮಾಡುತ್ತಿವೆ ಗಮನಿಸಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ