ನಮ್ಮ ಕನಸಿನ ಸ್ವಂತ ಮನೆ (own house) ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಇರುವ ಬಯಕೆ. ಹೆಚ್ಚಿನ ಜನರು 40 ವರ್ಷ ದಾಟಿದ ಬಳಿಕ ಸುಂದರವಾದ ಸ್ವಂತ ಸೂರು ಹೊಂದಲು ಬಯಸುತ್ತಾರೆ. ಆ ವಯೋಮಾನದಲ್ಲಿ ಸಾಮಾನ್ಯವಾಗಿ ಉಳಿತಾಯ ಹಣ ಹೆಚ್ಚಿರುತ್ತದೆ. ಸಂಬಳ ಹೆಚ್ಚಿರುತ್ತದೆ. ಮಕ್ಕಳು ಮರಿಗಳು ದೊಡ್ಡವರಾಗುತ್ತಿರುತ್ತಾರೆ. ಸ್ವಂತ ಮನೆ ಮಾಡಲು ಅನುಕೂಲವಾಗಿರುವ ಹಂತವೂ ಕೂಡ ಅದು. ಆದರೆ, ಆ ವಯಸ್ಸಿನಲ್ಲಿ ಮನೆ ಮಾಡಲು ಕೆಲ ರಿಸ್ಕ್ಗಳೂ ಇರುತ್ತವೆ. ಇವೆಲ್ಲವನ್ನೂ ಪರಿಗಣಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.
ಮನೆ ಖರೀದಿಸುವ ಮುನ್ನ ನಿಮ್ಮ ಬಳಿ ಎಷ್ಟು ಲಂಪ್ಸಮ್ ಹಣ ಇದೆ, ಇನ್ನುಳಿದ ಹಣ ಎಷ್ಟು ಬೇಕಾಗುತ್ತದೆ, ಅದನ್ನು ಅವಲೋಕಿಸಿ ಗೃಹಸಾಲ ಪಡೆಯಬಹುದು. ಪರ್ಸನಲ್ ಲೋನ್ ಇತ್ಯಾದಿಗಿಂತ ಗೃಹ ಸಾಲ ಉತ್ತಮ. ಇದಕ್ಕೆ ಬಡ್ಡಿದರ ಕಡಿಮೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಇನ್ನಷ್ಟು ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ.
ಇನ್ನು, ನಿಮ್ಮ ವಯಸ್ಸು 40 ವರ್ಷ ದಾಟಿರುವುದರಿಂದ ದೀರ್ಘಾವಧಿ ಸಾಲಕ್ಕಿಂತ, ಕಡಿಮೆ ಕಂತುಗಳನ್ನು ಆಯ್ಕೆ ಮಾಡಿ. ಇದರಿಂದ ಸಾಲವನ್ನು ಬೇಗನೇ ತೀರಿಸಲು ಸಾಧ್ಯವಾಗುತ್ತದೆ. ಹೆಚ್ಚು ಕಂತುಗಳನ್ನು ಆಯ್ದುಕೊಂಡರೆ ಬಡ್ಡಿಮೊತ್ತವೇ ಅಧಿಕವಾಗಿರುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ದಾಖಲೆ, ವಿವರ ಬರೆದಿಡುವುದು ಯಾಕೆ ಮುಖ್ಯ? ಅವನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ರಮ ಹೇಗೆ? ಇಲ್ಲಿದೆ ಟಿಪ್ಸ್
ಸಾಲದ ಕಂತಿಗೆ ಪಾವತಿ ಮಾಡಿ ಇನ್ನುಳಿದ ಹಣದಿಂದ ನಿಮ್ಮ ಎಲ್ಲಾ ಅಗತ್ಯತೆಗಳು ಪೂರೈಕೆ ಆಗುತ್ತದಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಕ್ಕಳ ಓದು, ನಿಮ್ಮ ಇತರೆ ಮಾಸಿಕ ಮತ್ತು ವಾರ್ಷಿಕ ಪಾವತಿ ಇವೆಲ್ಲವನ್ನೂ ಪರಿಗಣಿಸಿರಬೇಕು.
ನೀವು ಮನೆ ಮಾಡುವಾಗ ಬಹಳಷ್ಟು ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಬೇಕು. ಬಾಡಿಗೆ ಮನೆಯ ರೀತಿಯಲ್ಲಿ ನೀವು ಮನೆ ಬದಲಿಸಲು ಕಷ್ಟವಾಗಬಹುದು. ನಿಮ್ಮ ಕೆಲಸದ ಸ್ಥಳ, ಮಕ್ಕಳ ಕಾಲೇಜು ಮತ್ತಿತರ ಪ್ರದೇಶಗಳು ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿವೆ, ಸಾರಿಗೆ ವ್ಯವಸ್ಥೆ ಹೇಗಿದೆ ಇವೆಲ್ಲವನ್ನೂ ಪರಿಶೀಲಿಸಬೇಕು.
ಇದನ್ನೂ ಓದಿ: ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ
ಇವತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಂಚನೆಗಳು ಬಹಳ ನಡೆಯುತ್ತವೆ. ಗೊತ್ತಿಲ್ಲದ ಬ್ರೋಕರ್ ಮೂಲಕ ನೀವು ಮನೆ ಖರೀದಿಸಿದರೆ ಅದರ ಪ್ರಾಪರ್ಟಿ ಡಾಕ್ಯುಮೆಂಟ್ ಸರಿ ಇಲ್ಲದೇ ಇರಬಹುದು. ಆದ್ದರಿಂದ ದಾಖಲೆಗಳನ್ನು ವಕೀಲರಿಗೆ ಕೊಟ್ಟು ಪರಿಶೀಲನೆಗೊಳಪಡಿಸಿ. ಪ್ರಾಪರ್ಟಿ ಟ್ಯಾಕ್ಸ್ ಇತ್ಯಾದಿ ಪಾವತಿ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಇಸಿ ಇತ್ಯಾದಿ ದಾಖಲೆಗಳನ್ನು ಹೊರತೆಗೆಯಿರಿ. ಇಲ್ಲದಿದ್ದರೆ ಲಕ್ಷಾಂತರ, ಕೋಟ್ಯಂತರ ರೂ ಹಣ ನಿಮ್ಮ ಕೈತಪ್ಪಿ ಹೋಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ