
ನವದೆಹಲಿ, ಅಕ್ಟೋಬರ್ 22: ಷೇರು, ಮ್ಯುಚುವಲ್ ಫಂಡ್, ಚಿನ್ನದ ಆಕರ್ಷಣೆ ನಡುವೆ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಈಗಲೂ ಕೂಡ ನಂಬರ್ ಒನ್ ಆಯ್ಕೆಯೇ ಆಗಿದೆ. ದೇಶಾದ್ಯಂತ ವಿವಿಧ ಬ್ಯಾಂಕುಗಳಲ್ಲಿ ಹಲವು ಲಕ್ಷ ಕೋಟಿ ರೂಗಳಷ್ಟು ಹಣವನ್ನು ಠೇವಣಿಗಳಲ್ಲಿ ಇಡಲಾಗಿದೆ. ಮಾರುಕಟ್ಟೆಯ ರಿಸ್ಕ್ಗಳಿಂದ ದೂರ ಇರುವ ಮತ್ತು ಹಣಕ್ಕೆ ಹೆಚ್ಚಿನ ಭದ್ರತೆ ಇರುವುದರಿಂದ ನಿಶ್ಚಿತ ಠೇವಣಿ ಹೆಚ್ಚು ಮಂದಿಗೆ ಆಕರ್ಷಕವಾಗಿದೆ. ಅದರಲ್ಲೂ ಪ್ರಮುಖ ಬ್ಯಾಂಕುಗಳಲ್ಲಿ ಇಡುವ ಠೇವಣಿ ಬಹುತೇಕ ಸುರಕ್ಷಿತವಾಗಿರುತ್ತವೆ.
ನಿಶ್ಚಿತ ಅವಧಿಗೆ ಲಂಪ್ಸಮ್ ಆಗಿ ಹಣವನ್ನು ಠೇವಣಿ ಇಡುವುದು ಫಿಕ್ಸೆಡ್ ಡೆಪಾಸಿಟ್ ಪ್ಲಾನ್. ಹೆಚ್ಚಿನ ಬ್ಯಾಂಕುಗಳು 7 ದಿನಗಳಿಂದ ಆರಂಭಿಸಿ 10 ವರ್ಷಗಳವರೆಗೆ ಠೇವಣಿಗಳಿಗೆ ಆಫರ್ ಮಾಡುತ್ತವೆ. ಒಂದು ವರ್ಷ ಹಾಗೂ ಮೇಲ್ಪಟ್ಟ ಅವಧಿಯ ಠೇವಣಿಗಳಿಗೆ ಉತ್ತಮ ಬಡ್ಡಿಯನ್ನು ಬ್ಯಾಂಕುಗಳು ನೀಡುತ್ತವೆ.
ಇದನ್ನೂ ಓದಿ: ನಿಮ್ಮ ಸೇವಿಂಗ್ಸ್ ಅಕೌಂಟ್ ಮೇಲೆ ಐಟಿ ಕಣ್ಣು? ಈ ಟ್ರಾನ್ಸಾಕ್ಷನ್ಗಳನ್ನು ಮಾಡುವಾಗ ಹುಷಾರ್
ಈ ಮೇಲಿನವು ಮಾಮೂಲಿಯ ಗ್ರಾಹಕರ ಠೇವಣಿಗಳಿಗೆ ನೀಡಲಾಗುವ ಬಡ್ಡಿ. ಹಿರಿಯ ನಾಗರಿಕರಿಗೆ 25ರಿಂದ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಕೊಡಲಾಗುತ್ತದೆ.
ಇದನ್ನೂ ಓದಿ: ಇಬ್ಬರು ಗೆಳೆಯರು.. ಅದೇ ವಯಸ್ಸು, ಅದೇ ಸಂಬಳ; ಒಬ್ಬನದ್ದು ಆರಾಮ ಜೀವನ, ಮತ್ತೊಬ್ಬನದ್ದು ಡೆಟ್ ಟ್ರ್ಯಾಪ್; ತಪ್ಪಾಗಿದ್ದು ಎಲ್ಲಿ?
ಎಸ್ಬಿಐ, ಎಚ್ಡಿಎಫ್ಸಿ ಇತ್ಯಾದಿ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಬಡ್ಡಿ ದರ ಕಡಿಮೆ ಇರುತ್ತದೆ. ಠೇವಣಿ ಸುರಕ್ಷತೆ ಹೆಚ್ಚು ಇರುತ್ತದೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಬಡ್ಡಿ ಹೆಚ್ಚು. ಆದರೆ, ಹೂಡಿಕೆ ರಿಸ್ಕ್ ಹೆಚ್ಚಿರುತ್ತದೆ. ಹಾಗೆಯೇ, ಸಹಕಾರಿ ಬ್ಯಾಂಕುಗಳಲ್ಲೂ ಕೂಡ ಬಡ್ಡಿ ಹೆಚ್ಚು, ರಿಸ್ಕ್ ಕೂಡ ಹೆಚ್ಚು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ