Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು

|

Updated on: Dec 26, 2023 | 11:33 AM

Finance Future: ಹಣದ ಗಳಿಕೆ, ಹಣದ ಉಳಿಕೆ ಮತ್ತು ಹಣದ ಹೂಡಿಕೆ ಈ ಹಣಕಾಸು ಸೂತ್ರಗಳನ್ನು ಪಾಲಿಸಿದರೆ ಭವಿಷ್ಯದ ಜೀವನ ಭದ್ರವಾದೀತು. ಹಣ ಹೂಡಿಕೆಗೆ ಹಲವು ಮಾರ್ಗಗಳಿವೆ. ಷೇರು ಮಾರುಕಟ್ಟೆ, ನಿಶ್ಚಿತ ಬಡ್ಡಿ ತರುವ ಡೆಟ್ ಪ್ಲಾನ್, ಚಿನ್ನ ಇತ್ಯಾದಿ ಕಡೆ ಹೂಡಿಕೆ ವ್ಯಾಪಿಸಲಿ. ಸಾಧ್ಯವಾದಷ್ಟೂ ಹೆಚ್ಚು ಹಣ ಗಳಿಕೆ ಮತ್ತು ಹೆಚ್ಚು ಹಣ ಉಳಿತಾಯ ಮಾಡುವುದು ಬಹಳ ಮುಖ್ಯ.

Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು
ಹೂಡಿಕೆ
Follow us on

ಇವತ್ತಿಂದು ಇವತ್ತಿಗೆ, ನಾಳೆಯದ್ದು ನಾಳೆಗೆ ಎನ್ನುವ ಪ್ರವೃತ್ತಿ ನಿಮಗಿದ್ದರೆ 2023ರಕ್ಕೆ ಅದನ್ನು ಬಿಟ್ಟುಬಿಡಿ. ಹೊಸ ವರ್ಷಕ್ಕೆ ಹೊಸ ಆಲೋಚನೆ ಇರಲಿ. ನಿಮ್ಮ ವೃತ್ತಿ ಜೀವನ ಈಗ ಆರಂಭವಾಗುತ್ತಿದ್ದರೆ ಭವಿಷ್ಯದ ಭದ್ರತೆಗೆ ಅಡಿಪಾಯ ಹಾಕಲು ಇದು ಸಕಾಲ. ಹಾಗಂತ, ಹಣ ಬೆಳೆಸುವುದಕ್ಕೆ ವಯಸ್ಸಿನ ಇತಿಮಿತಿ ಇಲ್ಲ. ಮಧ್ಯವಯಸ್ಸು ಆಗಿದ್ದರೆ ನಿವೃತ್ತಿಗೆ ಹಣ ಕೂಡಿಡಲು ಹೆಚ್ಚೆಚ್ಚು ಸೇವಿಂಗ್ಸ್ (money savings) ಮಾಡಬೇಕಾಗುತ್ತದೆ. ರಿಸ್ಕ್ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.

ಮೊದಲಿಗೆ ಹಣದ ಈ ಮೂರು ಅಂಶಗಳ ಹಣದ ಸೂತ್ರ ತಿಳಿದಿರಿ. ಹಣದ ಗಳಿಕೆ, ಹಣದ ಉಳಿಕೆ ಮತ್ತು ಹಣದ ಹೂಡಿಕೆ, ಈ ಮೂರು ಅಂಶಗಳು ಬಹಳ ಮುಖ್ಯ. ಈ ಮೂರೂ ಕೂಡ ಪರಸ್ಪರ ಅವಲಂಬಿತವಾಗಿರುವಂಥವು. ನೀವು ಎಷ್ಟು ಹಣ ಗಳಿಕೆ ಮಾಡುತ್ತೀರೋ, ಅದಕ್ಕೆ ಅನುಗುಣವಾಗಿ ಹಣ ಉಳಿತಾಯ ಮತ್ತು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಹಣದ ಗಳಿಕೆ ಸೀಮಿತವಾಗಿದ್ದರೆ ಇನ್ನೆರಡು ಅಂಶಗಳ ಬಗ್ಗೆ ತೀರಾ ಎಚ್ಚರಿಕೆಯಿಂದ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.

ಹಣ ಉಳಿತಾಯ ಆಗಲೇ ಬೇಕು…

ನಿಮ್ಮ ಸಂಪಾದನೆ ಎಷ್ಟೇ ಇರಲ್ಲಿ, ಅದರಲ್ಲಿ ಹೆಚ್ಚಿನ ಭಾಗವನ್ನು ಉಳಿಸುವುದು ನಿಮ್ಮ ಗುರಿಯಾಗಿರಬೇಕು. ತೀರಾ ಅವಶ್ಯಕತೆ ಇರುವ ಸೌಲಭ್ಯಗಳಿಗೆ ಮಾತ್ರವೇ ನಿಮ್ಮ ವೆಚ್ಚ ಇರಬೇಕು. ನಿಮ್ಮ ದಿನನಿತ್ಯದ ವೆಚ್ಚಗಳನ್ನು ಬರೆದಿಟ್ಟು ಒಂದು ತಿಂಗಳ ಬಳಿಕ ಅದನ್ನು ಅವಲೋಕಿಸಿರಿ. ಅನವಶ್ಯಕವಾಗಿರುವ ವೆಚ್ಚವನ್ನು ನಿಲ್ಲಿಸಿ.

ಇದನ್ನೂ ಓದಿ: Year Ender 2023: ವರ್ಷದ ಕೊನೆಯಲ್ಲಿ ಹೂಡಿಕೆ ತಪ್ಪುಗಳ ಮೆಲುಕು; ಈ ನಾಲ್ಕು ಅಂಶ, ಹುಷಾರ್

ಹಣದ ಹೂಡಿಕೆ ಹೀಗೆ ಇರಲಿ…

ನೀವು ಉಳಿಸಿದ ಹಣವನ್ನು ಹೂಡಿಕೆ ಮಾಡದೇ ಹೋದರೆ ಹೆಚ್ಚಿನ ಫಲ ಇರುವುದಿಲ್ಲ. ಅಲ್ಪಾವಧಿ ಗುರಿ, ದೀರ್ಘಾವಧಿ ಗುರಿ, ನಿವೃತ್ತಿ ಹೀಗೆ ವಿವಿಧ ಕಾಲಘಟ್ಟಗಳಿಗೆ ನೀವು ಹಣಕಾಸು ಗುರಿಗಳನ್ನು ನಿಗದಿ ಮಾಡಿ ಹೂಡಿಕೆ ಮಾಡಿ. ನಿಮ್ಮ ಹೂಡಿಕೆಗಳು ಹೀಗೆ ಇದ್ದರೆ ಉತ್ತಮ…

ಹೆಲ್ತ್ ಇನ್ಷೂರೆನ್ಸ್, ಇಡೀ ಕುಟುಂಬಕ್ಕೆ. ಆರೋಗ್ಯ ಯಾರಿಗೆ ಯಾವಾಗ ಕೈಕೊಡತ್ತೆ ಎಂದು ಗೊತ್ತಿರುವುದಿಲ್ಲ. ಹೀಗಾಗಿ, ಆರೋಗ್ಯ ವಿಮೆ ಬಹಳ ಮುಖ್ಯ.

ಈಕ್ವಿಟಿಯಲ್ಲಿ ಹೂಡಿಕೆ: ನೇರವಾಗಿ ಬೇಕಾದರೆ ಮಾಡಬಹುದ. ಇಲ್ಲದಿದ್ದರೆ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು. ಆದರೆ, ಲಾರ್ಜ್ ಕ್ಯಾಪ್, ಮಿಡ್​ಕ್ಯಾಪ್, ಸ್ಮಾಲ್ ಕ್ಯಾಪ್ ಹೀಗೆ ಹೂಡಿಕೆ ವ್ಯಾಪಿಸಿರಲಿ. ಇದರಿಂದ ವರ್ಷಕ್ಕೆ ಶೇ. 4ರಿಂದ 15ರಷ್ಟು ಬೆಳವಣಿಗೆ ನಿರೀಕ್ಷಿಸಬಹುದು.

ಡೆಟ್​ಗಳಲ್ಲಿ ಹೂಡಿಕೆ: ಪಿಪಿಎಫ್, ಎಫ್​ಡಿ, ಆರ್​ಡಿ ಇತ್ಯಾದಿ ನಿಶ್ಚಿತ ರಿಟರ್ಸ್ ಇರುವ ಯೋಜನೆಗಳಲ್ಲಿ ಒಂದಿಷ್ಟು ಹೂಡಿಕೆಗಳಿರಲಿ. ಇದರಲ್ಲಿ ಶೇ. 7ರಿಂದ 8ರಷ್ಟು ವಾರ್ಷಿಕ ರಿಟರ್ನ್ ನಿರೀಕ್ಷಿಸಬಹುದು.

ಇದನ್ನೂ ಓದಿ: SGB Investment: ಮ್ಯುಚುವಲ್ ಫಂಡ್​ಗಿಂತಲೂ ಲಾಭ; ಸೋವರೀನ್ ಗೋಲ್ಡ್ ಬಾಂಡ್ ಮೂಲಕ ನಿಯಮಿತ ಹೂಡಿಕೆ; ಏನೇನು ಪ್ರಯೋಜನಗಳು?

ಚಿನ್ನ: ಚಿನ್ನವನ್ನು ನೇರವಾಗಿ ಕೊಳ್ಳಬಹುದು. ಸಾವರೀನ್ ಗೋಲ್ಡ್ ಬಾಂಡ್, ಗೋಲ್ಡ್ ಇಟಿಎಫ್ ಇತ್ಯಾದಿ ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇದರಿಂದ ಶೇ. 10ರಷ್ಟು ರಿಟರ್ನ್ ನಿರೀಕ್ಷಿಸಬಹುದು.

ರಿಯಲ್ ಎಸ್ಟೇಟ್: ಭೂಮಿಗೆ ಯಾವತ್ತಿದ್ದರೂ ಮೌಲ್ಯ ಇದ್ದೇ ಇರುತ್ತದೆ. ದೀರ್ಘಾವಧಿಗೆಂದು ನೀವು ನಿವೇಶನ ಖರೀದಿಸಿ ಇಟ್ಟುಕೊಂಡರೆ ವರ್ಷಕ್ಕೆ ಶೇ. 8ರಿಂದ 15ರಷ್ಟು ಬೆಳವಣಿಗೆ ನಿರೀಕ್ಷಿಸಬಹುದು.

ನಿವೃತ್ತಿಗೆ 20 ವರ್ಷ ಇದೆ ಎಂದಾದರೆ ನೀವು ತಿಂಗಳಿಗೆ 50 ಸಾವಿರ ರೂಗಿಂತ ಹೆಚ್ಚಿನ ಹಣವನ್ನು ಹೂಡಿಕೆಗಳಿಗೆ ಬಳಸಬಹುದು. ಈ ಮೇಲಿನ ಹೂಡಿಕೆಗಳಿಂದ ನಿಮ್ಮ ಹಣ ಶೇ. 10ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ