Mutual Funds: ಎಫ್​ಡಿಗಿಂತ ಮ್ಯೂಚುವಲ್ ಫಂಡ್ ಉತ್ತಮ ಎನ್ನುವ ಭಾರತೀಯರು: ಕಾರಣ ಇಲ್ಲಿದೆ ನೋಡಿ

| Updated By: ಗಣಪತಿ ಶರ್ಮ

Updated on: Oct 27, 2022 | 2:42 PM

ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಜನ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳುತ್ತಿರುವುದು ಇದೇ ಮೊದಲ ಬಾರಿ ಗಮನಕ್ಕೆ ಬಂದಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

Mutual Funds: ಎಫ್​ಡಿಗಿಂತ ಮ್ಯೂಚುವಲ್ ಫಂಡ್ ಉತ್ತಮ ಎನ್ನುವ ಭಾರತೀಯರು: ಕಾರಣ ಇಲ್ಲಿದೆ ನೋಡಿ
ಮ್ಯೂಚುವಲ್ ಫಂಡ್ ಹೂಡಿಕೆ (ಸಾಂದರ್ಭಿಕ ಚಿತ್ರ)
Follow us on

ಹೂಡಿಕೆ (Investment) ವಿಚಾರದಲ್ಲಿ ಭಾರತೀಯರು ಸ್ಥಿರ ಠೇವಣಿಗಿಂತಲೂ (Fixed Deposit) ಮ್ಯೂಚುವಲ್ ಫಂಡ್​ಗಳನ್ನೇ​ (Mutual Funds) ನಂಬರ್ 1 ಆಯ್ಕೆಯನ್ನಾಗಿ ಪರಿಗಣಿಸುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ವರ್ಷ ಮ್ಯೂಚುವಲ್ ಫಂಡ್​ಗಳು ದೇಶದಲ್ಲಿ ನಂಬರ್ 1 ಹಣಕಾಸು ಹೂಡಿಕೆ ಮಾಧ್ಯಮಗಳಾಗಿ ಬದಲಾಗಿವೆ. ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಜನ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳುತ್ತಿರುವುದು ಇದೇ ಮೊದಲ ಬಾರಿ ಗಮನಕ್ಕೆ ಬಂದಿದೆ ಎಂದು ಡಿಜಿಟಲ್ ಸಂಪತ್ತು ನಿರ್ವಹಣಾ ಕಂಪನಿ ‘ಸ್ಕ್ರಿಪ್​ಬಾಕ್ಸ್’ ಸಮೀಕ್ಷಾ ವರದಿ ತಿಳಿಸಿದೆ. ಕಂಪನಿಯು ದೇಶದಾದ್ಯಂತ 620 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿತ್ತು.

ಹೂಡಿಕೆಯನ್ನು ಉಳಿತಾಯ ಎಂದು ಭಾವಿಸುವುದಕ್ಕಿಂತಲೂ ಹೆಚ್ಚಾಗಿ ಜನರು ಲಾಭದಾಯಕ ಎಂದೇ ಪರಿಗಣಿಸುತ್ತಾರೆ. ಇದು ಹಣಕಾಸಿನ ವಿಚಾರದಲ್ಲಿ ಮಾತ್ರವಲ್ಲ, ಸ್ವಯಂ ಮೌಲ್ಯದಲ್ಲಿಯೂ ಹೌದು ಎಂಬುದಾಗಿ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಹೆಚ್ಚಿನ ಹೂಡಿಕೆಗಳು ಭವಿಷ್ಯದ ಬಗ್ಗೆ ವಿಶ್ವಾಸವನ್ನು ಮೂಡಿಸುವಲ್ಲಿ ಮತ್ತು ಯೋಗಕ್ಷೇಮದಲ್ಲಿ ಸುಧಾರಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸಮೀಕ್ಷೆಗೆ ಉತ್ತರಿಸಿದವರಲ್ಲಿ ಹೆಚ್ಚಿನವರು ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆ ಆರಂಭಿಸುವುದು ಉತ್ತಮ ಎಂದು ಬಹುತೇಕರು ಯುಕವರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ
Salary Hike Survey: ವೇತನ ಹೆಚ್ಚಳಕ್ಕೆ ಕಾಯುತ್ತಿದ್ದೀರಾ? ಸಿಹಿ ಸುದ್ದಿ ನೀಡಿದೆ ಹೊಸ ಸಮೀಕ್ಷೆ
Petrol Price on October 27: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
Gold Price Today: ಚಿನ್ನ, ಬೆಳ್ಳಿ ದರ ತುಸು ಹೆಚ್ಚಳ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ವಿವರ
Fake Currency: ಎಟಿಎಂನಲ್ಲಿ ಬಂದ 200 ರೂ. ನಕಲಿ ನೋಟುಗಳು, ಗ್ರಾಹಕರು ತಬ್ಬಿಬ್ಬು

ಇದನ್ನೂ ಓದಿ: Life Insurance: ಲೈಫ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ ಈ ತಪ್ಪುಗಳ ಬಗ್ಗೆ ಎಚ್ಚರವಿರಲಿ

ಉಳಿತಾಯ ಮತ್ತು ಹೂಡಿಕೆ ನಡುವೆ ವ್ಯತ್ಯಾಸವಿದೆ. ಉಳಿತಾಯವು ಮೊದಲಿಗೆ ಒಂದು ಉತ್ತಮ ಹೆಜ್ಜೆಯಾಗಿದ್ದರೂ ಹೂಡಿಕೆ ಜತೆ ಸೇರಿದಾಗ ಸಂಪತ್ತು ಉತ್ತಮಗೊಳ್ಳಲಿದೆ. ಸುಮ್ಮನೇ ಉಳಿಸಿಕೊಂಡಾಗ ಅದು ಉಳಿತಾಯವಾಗುತ್ತದೆ. ಇದನ್ನು ಹೂಡಿಕೆ ಮಾಡದಿದ್ದರೆ ಅದು ಹಣದುಬ್ಬರವನ್ನು ತಡೆಯಲು ಸಹಾಯ ಮಾಡದು ಎಂದಿದ್ದಾರೆ ‘ಸ್ಕ್ರಿಪ್​ಬಾಕ್ಸ್’ ಸ್ಥಾಪಕ ಮತ್ತು ಸಿಇಒ ಅತುಲ್ ಶಿಂಘಲ್.

ಪ್ರತಿ ವರ್ಷ ವಿಶ್ವ ಉಳಿತಾಯ ದಿನದಂದು (World Savings Day) ಹೂಡಿಕೆಯ ಮಹತ್ವದ ಬಗ್ಗೆ ನಾವು ತಿಳಿಹೇಳುತ್ತಲೇ ಇರುತ್ತೇವೆ. ಹೂಡಿಕೆ ಮೂಲಕ ಜನರು ತಮ್ಮ ಹಣವೂ ತಮ್ಮಂತೆಯೇ ಕಠಿಣ ಪರಿಶ್ರಮದಿಂದ ಕೆಲಸ ಮಾಡುವಂತೆ ಮಾಡಬಹುದು. ಕಳೆದ ಕೆಲವು ವರ್ಷಗಳಲ್ಲಿ ಇದು ಫಲ ನೀಡಿದೆ. ಹೂಡಿಕೆ ಕುರಿತು ಜನರಲ್ಲಿ ಆಸಕ್ತಿ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

ಸಮೀಕ್ಷಾ ವರದಿ ತಿಳಿಸಿರುವ ಮುಖ್ಯಾಂಶಗಳು:

  • ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದವರಲ್ಲಿ ಶೇಕಡಾ 57ರಷ್ಟು ಜನರು ತಮ್ಮನ್ನು ಉಳಿತಾಯ ಮಾಡುವವರು ಎಂದು ಪರಿಗಣಿಸಿದ್ದರೆ, ಶೇಕಡಾ 43 ರಷ್ಟು ಜನರು ಹೆಚ್ಚು ಸಕ್ರಿಯ ಹೂಡಿಕೆದಾರರಾಗಿ ಪರಿವರ್ತನೆಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
  • ಹಣದುಬ್ಬರ, ಆರ್ಥಿಕ ಹಿಂಜರಿತ, ಸಾಂಕ್ರಾಮಿಕ ಹಾಗೂ ಸ್ಥೂಲ ಆರ್ಥಿಕತೆಯಂಥ ಕಾರಣಗಳಿಗಾಗಿ ಉಳಿತಾಯದಿಂದ ಹೂಡಿಕೆಯತ್ತ ಮನ ಮಾಡಿರುವುದಾಗಿ ಶೇಕಡಾ 60ರಷ್ಟು ಮಂದಿ ಹೇಳಿದ್ದಾರೆ.
  • ಶೇಕಡಾ 27ರಷ್ಟು ಮಂದಿ ಕಳೆದ ವರ್ಷದ ವೆಚ್ಚದಲ್ಲಿ ಕಡಿಮೆ ಮಾಡಿರುವುದಾಗಿ ತಿಳಿಸಿದ್ದಾರೆ. ಶೇಕಡಾ 50ರಷ್ಟು ಮಂದಿ ತಮ್ಮ ಆದಾಯದ ಶೇಕಡಾ 10ರಿಂದ 30ರಷ್ಟನ್ನು ಉಳಿತಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
  • ಶೇಕಡಾ 23ರಷ್ಟುನ ಮಂದಿ ಕಳೆದ ವರ್ಷದಿಂದ ಸಕ್ರಿಯವಾಗಿ ಹೂಡಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಶೇಕಡಾ 20ರಷ್ಟು ಮಂದಿ ಅದಕ್ಕೂ ಮೊದಲೇ ಹೂಡಿಕೆ ಮಾಡುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪುರುಷರು ಹೂಡಿಕೆ ವೇಳೆ ಮಕ್ಕಳ ಶಿಕ್ಷಣಕ್ಕಿಂತಲೂ (ಶೇಕಡಾ 28) ನಿವೃತ್ತಿ ಯೋಜನೆ ಬಗ್ಗೆ ಹೆಚ್ಚು ಯೋಜನೆ (ಶೇಕಡಾ 42) ರೂಪಿಸಿಕೊಂಡಿರುವುದು ಕಂಡುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ