Salary Hike Survey: ವೇತನ ಹೆಚ್ಚಳಕ್ಕೆ ಕಾಯುತ್ತಿದ್ದೀರಾ? ಸಿಹಿ ಸುದ್ದಿ ನೀಡಿದೆ ಹೊಸ ಸಮೀಕ್ಷೆ

ಯಾವೆಲ್ಲ ದೇಶಗಳಲ್ಲಿ 2023ರಲ್ಲಿ ಉತ್ತಮವಾಗಿ ವೇತನ ಹೆಚ್ಚಳವಾಗಲಿದೆ? ಭಾರತದ ಸ್ಥಾನವೇನು? ಇಲ್ಲಿದೆ ನೋಡಿ ವಿವರ

Salary Hike Survey: ವೇತನ ಹೆಚ್ಚಳಕ್ಕೆ ಕಾಯುತ್ತಿದ್ದೀರಾ? ಸಿಹಿ ಸುದ್ದಿ ನೀಡಿದೆ ಹೊಸ ಸಮೀಕ್ಷೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Oct 27, 2022 | 12:34 PM

ಹೆಚ್ಚುತ್ತಿರುವ ಹಣದುಬ್ಬರವು (Inflation) ಬಹುತೇಕ ದೇಶಗಳ ಕಂಪನಿಗಳಲ್ಲಿ ವೇತನ ಹೆಚ್ಚಳಕ್ಕೆ (Salary Increase) ಅಡ್ಡಿಯಾಗಿ ಪರಿಣಮಿಸಿದೆ. ಆದಾಗ್ಯೂ, ವಿಶ್ವದ ಶೇಕಡಾ 37ರಷ್ಟು ದೇಶಗಳಲ್ಲಿ 2023ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ ಎಂದು ಹೊಸ ಸಮೀಕ್ಷಾ ವರದಿಯೊಂದು (Survey) ತಿಳಿಸಿದೆ. ಆದರೆ, ವೇತನ ಹೆಚ್ಚಳದ ವಿಚಾರದಲ್ಲಿ ಬ್ರಿಟನ್​ ಮಾತ್ರ ತೀರಾ ಕಳಪೆ ಸ್ಥಾನದಲ್ಲಿದೆ ಎಂದು ವರ್ಕ್​ಫೊರ್ಸ್ ಕನ್ಸಲ್ಟೆನ್ಸಿ ‘ಇಸಿಎ ಇಂಟರ್​ನ್ಯಾಷನಲ್’ ತಿಳಿಸಿದೆ.

‘ವರ್ಕ್​ಫೊರ್ಸ್ ಕನ್ಸಲ್ಟೆನ್ಸಿ ಇಸಿಎ ಇಂಟರ್​ನ್ಯಾಷನಲ್’ ಸಮೀಕ್ಷೆ 2000ನೇ ಇಸವಿಯಲ್ಲಿ ಆರಂಭಗೊಂಡಿತ್ತು. ಆ ಬಳಿಕದಲ್ಲಿ ಬ್ರಿಟನ್​ನ ಉದ್ಯೋಗಿಗಳಿಗೆ ಶೇಕಡಾ 3.5ರ ಸರಾಸರಿ ವೇತನ ಹೆಚ್ಚಳ ಆಗಿದ್ದರೂ ಶೇಕಡಾ 9.1ರ ಸರಾಸರಿ ಹಣದುಬ್ಬರದಿಂದಾಗಿ ಅವರ ರಿಯಲ್ ಟರ್ಮ್ಸ್ ವೇತನದಲ್ಲಿ ಶೇಕಡಾ 5.6ರ ಕುಸಿತವಾಗಲಿದೆ. 2023ರಲ್ಲಿ ಅವರ ವೇತನದಲ್ಲಿ ಇನ್ನೂ ಶೆಕಡಾ 4ರಷ್ಟು ಕುಸಿತವಾಗಲಿದೆ ಎಂದು ಸಮೀಕ್ಷೆ ತಿಳಿಸಿರುವುದಾಗಿ ‘ಬ್ಲೂಮ್​ಬರ್ಗ್’ ತಾಣ ವರದಿ ಮಾಡಿದೆ. ಮುಂದಿನ ವರ್ಷದ ಹಣದುಬ್ಬರ ಮುನ್ಸೂಚನೆ ಆಧಾರದಲ್ಲಿ ಅಮೆರಿಕದ ಉದ್ಯೋಗಿಗಳ ರಿಯಲ್ ಟರ್ಮ್ಸ್ ವೇತನದಲ್ಲಿ ಶೇಕಡಾ 4.5ರ ಕುಸಿತವಾಗಿವ ಸಾಧ್ಯತೆ ಇದೆ. ಹೀಗಾಗಿ ಆ ದೇಶದ ಉದ್ಯೋಗಿಗಳಿಗೆ ಕೇವಲ ಶೇಕಡಾ 1ರಷ್ಟು ರಿಯಲ್ ಟರ್ಮ್ಸ್ ವೇತನ ಹೆಚ್ಚಳ ಸಿಗಬಹುದಷ್ಟೇ ಎಂದು ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ: ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಪಡೆಯುವ ಡಿವಿಡೆಂಡ್ ಎಷ್ಟು? ಇಲ್ಲಿದೆ ಮಾಹಿತಿ

ಇದನ್ನೂ ಓದಿ
Image
Petrol Price on October 27: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
Image
Gold Price Today: ಚಿನ್ನ, ಬೆಳ್ಳಿ ದರ ತುಸು ಹೆಚ್ಚಳ; ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ವಿವರ
Image
Fake Currency: ಎಟಿಎಂನಲ್ಲಿ ಬಂದ 200 ರೂ. ನಕಲಿ ನೋಟುಗಳು, ಗ್ರಾಹಕರು ತಬ್ಬಿಬ್ಬು
Image
Bank Holidays in November: ನವೆಂಬರ್​ನಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ, ಇಲ್ಲಿದೆ ವಿವರ

ಜಾಗತಿಕವಾಗಿ 2023 ಉದ್ಯೋಗಿಗಳಿಗೆ ಕಠಿಣ ವರ್ಷವಾಗಿರಲಿದೆ ಎಂಬುದನ್ನು ನಮ್ಮ ಸಮೀಕ್ಷೆ ಸೂಚಿಸುತ್ತದೆ ಎಂದು ‘ಇಸಿಎ ಇಂಟರ್​ನ್ಯಾಷನಲ್’ನ ಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಲೀ ಕ್ವಾನ್ ತಿಳಿಸಿದ್ದಾರೆ. ಸಮೀಕ್ಷೆಗೆ ಒಳಗಾದ ದೇಶಗಳ ಪೈಕಿ ಮೂರನೇ ಒಂದು ಭಾಗದಷ್ಟರಲ್ಲಿ ಮಾತ್ರ ರಿಯಲ್ ಟರ್ಮ್ಸ್ ಅಥವಾ ನೈಜ ಅವಧಿಯ ವೇತನ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಈ ದೇಶಗಳಲ್ಲಿ ಈ ವರ್ಷಕ್ಕಿಂತ ಹೆಚ್ಚಿನ ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

68 ದೇಶಗಳ 360 ಕಂಪನಿಗಳಿಂದ ಪಡೆದ ಮಾಹಿತಿ ಆಧಾರದಲ್ಲಿ ‘ಇಸಿಎ ಇಂಟರ್​ನ್ಯಾಷನಲ್’ ಸಮೀಕ್ಷಾ ವರದಿ ಸಿದ್ಧಪಡಿಸಿದೆ. ಉತ್ತಮ ರಿಯಲ್ ಟರ್ಮ್ಸ್ ಅಥವಾ ನೈಜ ಅವಧಿಯ ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವ ಅಗ್ರ 10 ದೇಶಗಳ ಪಟ್ಟಿ ಶೇಕಡಾವಾರು ಸಹಿತ ಇಲ್ಲಿ ನೀಡಲಾಗಿದೆ.

ಅಗ್ರ ಹತ್ತು ದೇಶಗಳ ಪಟ್ಟಿ

ಭಾರತ (4.6%)

ವಿಯೆಟ್ನಾಂ (4.0%)

ಚೀನಾ (3.8%)

ಬ್ರೆಜಿಲ್ (3.4%)

ಸೌದಿ ಅರೇಬಿಯಾ (2.3%)

ಮಲೇಷ್ಯಾ (2.2%)

ಕಾಂಬೋಡಿಯಾ (2.2%)

ಥಾಯ್ಲೆಂಡ್ (2.2%)

ಒಮಾನ್ (2.0%)

ರಷ್ಯಾ (1.9%)

ವೇತನದಲ್ಲಿ ಕಡಿತದ ಸಾಧ್ಯತೆ ಇರುವ ದೇಶಗಳ ಪಟ್ಟಿ ಶೇಕಡಾವಾರು ಸಹಿತ ಇಲ್ಲಿ ನೀಡಲಾಗಿದೆ.

ಪಾಕಿಸ್ತಾನ (-9.9%)

ಘನಾ (-11.9%)

ಟರ್ಕಿ (-14.4%)

ಶ್ರೀಲಂಕಾ (-20.5%)

ಅರ್ಜೆಂಟೀನಾ (-26.1%)

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Thu, 27 October 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್