
ನವದೆಹಲಿ, ಏಪ್ರಿಲ್ 23: ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಬೆಲೆಯ ನಿರ್ದಿಷ್ಟ ಐಷಾರಾಮಿ ವಸ್ತುಗಳ ಮೇಲೆ ಶೇ. 1ರಷ್ಟು ಟಿಸಿಎಸ್ ಆದಾಯ ತೆರಿಗೆ (TCS) ವಿಧಿಸುವ ಕ್ರಮವನ್ನು ಜಾರಿಗೊಳಿಸಲಾಗುತ್ತದೆ. ಈ ಸಂಬಂಧ ಕೇಂದ್ರೀಯ ನೇರ ತೆರಿಗೆ ಮಂಡಳಿಯಾದ ಸಿಬಿಡಿಟಿ ಎರಡು ಅಧಿಸೂಚನೆಗಳನ್ನು ನೀಡಿದೆ. ಮೊದಲ ಅಧಿಸೂಚನೆಯಲ್ಲಿ, ಟಿಸಿಎಸ್ ತೆರಿಗೆ ವಿಧಿಸಲಾಗುವ ಐಷಾರಾಮಿ ವಸ್ತುಗಳ ಪಟ್ಟಿ ಇದೆ. ಎರಡನೇ ಅಧಿಸೂಚನೆಯಲ್ಲಿ, ಈ ಐಷಾರಾಮಿ ವಸ್ತುಗಳ ಮೇಲೆ ಟಿಸಿಎಸ್ ವಿಧಿಸಲು ಕನಿಷ್ಠ ಬೆಲೆ ಮಟ್ಟವನ್ನು ನಮೂದಿಸಲಾಗಿದೆ.
ಕಳೆದ ವರ್ಷದ ಬಜೆಟ್ನಲ್ಲೇ (2024ರ ಜುಲೈ) ಲಕ್ಷುರಿ ವಸ್ತುಗಳ ಮೇಲೆ ಟಿಸಿಎಸ್ ವಿಧಿಸುವ ಕ್ರಮವನ್ನು ಘೋಷಿಸಲಾಗಿತ್ತು. 2025ರ ಜನವರಿ 1ರಿಂದಲೇ ಈ ಕ್ರಮ ಜಾರಿಗೊಳಿಸುವ ನಿರೀಕ್ಷೆ ಇತ್ತು. ಆದರೆ, ಇನ್ನೂ ಕೂಡ ಅಧಿಸೂಚನೆ ಪ್ರಕಟಿಸಿರಲಾಗಲಿಲ್ಲ. ಇದೀಗ ನಿನ್ನೆ (ಏಪ್ರಿಲ್ 22) ಅಧಿಸೂಚನೆ ಹೊರಡಿಸಲಾಗಿದೆ. ಇದರೊಂದಿಗೆ, ಲಕ್ಷುರಿ ವಸ್ತುಗಳ ಮೇಲೆ ಶೇ. 1ರಷ್ಟು ಟಿಸಿಎಸ್ ವಿಧಿಸುವ ನಿಯಮ ನಿನ್ನೆಯಿಂದ ಜಾರಿಗೆ ಬಂದಿದೆ. ಬಜೆಟ್ನಲ್ಲಿ ಘೋಷಣೆಯಾದಂತೆ 2025ರ ಜನವರಿ 1ರಿಂದ ಅದು ಜಾರಿ ಇರುವುದಿಲ್ಲ. ಏಪ್ರಿಲ್ 22ಕ್ಕೆ ಮುನ್ನ ಖರೀದಿಸಲಾದ ಐಷಾರಾಮಿ ವಸ್ತುಗಳಿಗೆ ಟಿಸಿಎಸ್ ಅನ್ವಯ ಆಗೋದಿಲ್ಲ. ಏಪ್ರಿಲ್ 22ರಿಂದ ಅದು ಚಾಲನೆಯಲ್ಲಿರುತ್ತದೆ.
ಇದನ್ನೂ ಓದಿ: ಆಸ್ತಿ ಮಾರಲ್ಲ, ಸಾಲ ಬಿಡಲ್ಲ… ಶ್ರೀಮಂತರ ಟ್ರಿಕ್ಸ್ ಹೀಗಿರುತ್ತೆ ನೋಡಿ
ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ಲಕ್ಷುರಿ ವಸ್ತುಗಳ ಮೇಲಿನ ಟಿಸಿಎಸ್ ಅನ್ನು ಗ್ರಾಹಕರಿಂದ ಮಾರಾಟಗಾರರೇ ನೇರವಾಗಿ ಸಂಗ್ರಹಿಸುತ್ತಾರೆ. ಈ ಐಷಾರಾಮಿ ವಸ್ತುಗಳ ಪಟ್ಟಿ ಇಲ್ಲಿದೆ:
ಈ ಮೇಲಿನ ವಸ್ತುಗಳ ಖರೀದಿಸಿದಾಗ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 206ಸಿ ಅಡಿ ಟಿಸಿಎಸ್ ಅನ್ವಯ ಆಗುತ್ತದೆ.
ಟಿಸಿಎಸ್ ಎಂಬುದು ಮೂಲದಲ್ಲೇ ಕಡಿತ ಮಾಡಲಾಗುವ ತೆರಿಗೆಯಾಗಿದೆ. ಇದು ಜಿಎಸ್ಟಿಗೆ ಹೆಚ್ಚುವರಿಯಾಗಿ ವಿಧಿಸಲಾಗುವ ಆದಾಯ ತೆರಿಗೆಯಾಗಿದೆ. ಮೇಲೆ ತಿಳಿಸಲಾದ ಐಷಾರಾಮಿ ವಸ್ತುವಿನ ಬೆಲೆ 10 ಲಕ್ಷ ರೂ ಹಾಗೂ ಮೇಲ್ಪಟ್ಟು ಇದ್ದರೆ ಮಾತ್ರವೇ ಟಿಸಿಎಸ್ ವಿಧಿಸಲಾಗುತ್ತದೆ. 10 ಲಕ್ಷ ರೂ ಒಳಗಿನ ವಸ್ತುಗಳಿಗೆ ಟಿಸಿಎಸ್ ಇರುವುದಿಲ್ಲ.
ಇದನ್ನೂ ಓದಿ: ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು
ನೀವು 10 ಲಕ್ಷ ರೂ ಮೇಲ್ಪಟ್ಟ ಬೆಲೆಯ ಹೋಮ್ ಥಿಯೇಟರ್ ಖರೀದಿಸಿದರೆ ಶೇ. 1 ಟಿಸಿಎಸ್ ಅನ್ವಯ ಆಗುತ್ತದೆ. 20 ಲಕ್ಷ ರೂ ಮೌಲ್ಯದ ಐಷಾರಾಮಿ ವಸ್ತು ಖರೀದಿಸಿದರೆ 20,000 ರೂ ಟಿಸಿಎಸ್ ಪಾವತಿಸಬೇಕಾಗುತ್ತದೆ. ಅಂದರೆ, ಮಾರಾಟಗಾರರು ನಿಮ್ಮಿಂದ 20 ಲಕ್ಷ ರೂ ಬದಲು 20,20,000 ರೂ ಪಡೆಯುತ್ತಾರೆ.
ನೀವು ಐಷಾರಾಮಿ ವಸ್ತುವನ್ನು ಖರೀದಿಸಿದಾಗ ಮಾರಾಟಗಾರರು ನಿಮ್ಮಿಂದ ಟಿಸಿಎಸ್ ಸಂಗ್ರಹಿಸುತ್ತಾರೆ. ನಿಮ್ಮ ಪ್ಯಾನ್ ನಂಬರ್ಗೆ ಈ ಟಿಸಿಎಸ್ ಪಾವತಿಯನ್ನು ಸೇರಿಸುತ್ತಾರೆ. ವರ್ಷದ ಕೊನೆಯಲ್ಲಿ ಸಲ್ಲಿಸಲಾಗುವ ಐಟಿ ರಿಟರ್ನ್ಸ್ ವೇಳೆ, ಸಾಧ್ಯವಾದರೆ ರೀಫಂಡ್ ಪಡೆಯುವ ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ