Petrol Price on October 31: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಅ.31ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ
ಪ್ರತಿದಿನದಂತೆ ಇಂದು ಕೂಡ ಸರ್ಕಾರಿ ಪೆಟ್ರೋಲಿಯಂ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ನ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಕಚ್ಚಾತೈಲ ಬೆಲೆ ಕೂಡ ಈಗ ಪ್ರತಿ ಬ್ಯಾರೆಲ್ಗೆ 90 ಡಾಲರ್ಗಿಂತ ಕಡಿಮೆ ಆಗಿದೆ. ಆದಾಗ್ಯೂ ಕಚ್ಚಾತೈಲದ ಏರಿಳಿತಗಳು ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರ ಮೇಲೆ ಪರಿಣಾಮ ಬೀರಿಲ್ಲ.
ಪ್ರತಿದಿನದಂತೆ ಇಂದು ಕೂಡ ಸರ್ಕಾರಿ ಪೆಟ್ರೋಲಿಯಂ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ನ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಕಚ್ಚಾತೈಲ ಬೆಲೆ ಕೂಡ ಈಗ ಪ್ರತಿ ಬ್ಯಾರೆಲ್ಗೆ 90 ಡಾಲರ್ಗಿಂತ ಕಡಿಮೆ ಆಗಿದೆ. ಆದಾಗ್ಯೂ ಕಚ್ಚಾತೈಲದ ಏರಿಳಿತಗಳು ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗ್ರಾಹಕರ ಮೇಲೆ ಪರಿಣಾಮ ಬೀರಿಲ್ಲ.
ಕಚ್ಚಾತೈಲ ಪ್ರತಿ ಬ್ಯಾರೆಲ್ಗೆ 139 ಡಾಲರ್ ಇದ್ದಾಗಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹಚ್ಚಿಸಲಿಲ್ಲ, ಇಂದು 51 ಡಾಲರ್ಗಳಷ್ಟು ಅಗ್ಗವಾದ ನಂತರವೂ ಇಂಧನ ದರದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ದೇಶದ ತೈಲ ಮಾರುಕಟ್ಟೆ ಕಂಪನಿಗಳು ಅಕ್ಟೋಬರ್ 31 ಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡಿದೆ. ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮೇ 22, 2022 ರಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬದಲಾಯಿಸಿಲ್ಲ, ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಕಚ್ಚಾತೈಲದಲ್ಲಿ ಶೇ.2ಕ್ಕೂ ಹೆಚ್ಚು ಏರಿಕೆಯಾಗಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ದೆಹಲಿ ಸೇರಿದಂತೆ ಈ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೇಗಿದೆ? ದೆಹಲಿ ಪೆಟ್ರೋಲ್ 96.72ರೂ, ಡೀಸೆಲ್ 89.62 ರೂ. ಬೆಂಗಳೂರು ಪೆಟ್ರೋಲ್ 101.94 ರೂ., ಡೀಸೆಲ್ 87.89 ರೂ. ಲಕ್ನೋ ಪೆಟ್ರೋಲ್ 96.57 ರೂ., ಡೀಸೆಲ್ 89.76 ರೂ. ನೋಯ್ಡಾ ಪೆಟ್ರೋಲ್ 96.79ರೂ., ಡೀಸೆಲ್ 89.96 ರೂ. ಗುರುಗ್ರಾಮ ಪೆಟ್ರೋಲ್ 97.18ರೂ., ಡೀಸೆಲ್ 90.05ರೂ. ಚಂಡೀಗಢ ಪೆಟ್ರೋಲ್ 96.20 ರೂ., ಡೀಸೆಲ್ 84.26 ರೂ. ಇದೆ.
ಮತ್ತಷ್ಟು ಓದಿ: Petrol Price on October 30: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಅ.30ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ
ಬೆಲೆಗಳನ್ನು ಪ್ರತಿದಿನ ನವೀಕರಿಸಲಾಗುತ್ತದೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಂತಾದ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಮನೆಯಲ್ಲಿ ಕುಳಿತು ತೈಲ ಬೆಲೆಯನ್ನು ಪರಿಶೀಲಿಸಬಹುದು.
ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಈ ನಂಬರ್ಗೆ ಎಸ್‌ಎಂಎಸ್ ಕಳುಹಿಸಿ ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ಇದಕ್ಕಾಗಿ ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಹೋಗಬೇಕು ಅಥವಾ ಎಸ್‌ಎಂಎಸ್ ಕಳುಹಿಸಬೇಕು. ನೀವು ಇಂಡಿಯನ್ ಆಯಿಲ್ ಗ್ರಾಹಕರಾಗಿದ್ದರೆ, ನೀವು RSP ಜೊತೆಗೆ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು BPCL ಗ್ರಾಹಕರಾಗಿದ್ದರೆ ನೀವು RSP ಬರೆಯುವ ಮೂಲಕ 9223112222 ಸಂಖ್ಯೆಗೆ SMS ಕಳುಹಿಸಬಹುದು.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ