ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬಿಡುಗಡೆ ಮಾಡುತ್ತವೆ. ಮಾರ್ಚ್ 26, ಮಂಗಳವಾರ ದರಗಳು ಎಷ್ಟಿದೆ ಎಂಬುದನ್ನು ನೋಡೋಣ. ಭಾರತದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯು ಸರಕು ಸಾಗಣೆ ಶುಲ್ಕಗಳು, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸ್ಥಳೀಯ ತೆರಿಗೆಗಳಂತಹ ಪ್ರಭಾವಗಳಿಗೆ ಒಳಪಟ್ಟಿರುತ್ತದೆ, ಇದರ ಪರಿಣಾಮವಾಗಿ ರಾಜ್ಯಗಳಾದ್ಯಂತ ವಿಭಿನ್ನ ದರಗಳು ಕಂಡುಬರುತ್ತವೆ.
ಭಾರತದಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ಬೆಲೆ
‘ಇಂದು ಮುಂಬೈನಲ್ಲಿ ಪೆಟ್ರೋಲ್ ಬೆಲೆ
ಮಾರ್ಚ್ 26 ರ ಹೊತ್ತಿಗೆ, ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ ಗಡಿ ದಾಟುತ್ತಲೇ ಇತ್ತು, ಪ್ರತಿ ಲೀಟರ್‌ಗೆ 104.21 ರೂ ತಲುಪಿದೆ.
ಮುಂಬೈನಲ್ಲಿ ಇಂದು ಡೀಸೆಲ್ ಬೆಲೆ
ಮಾರ್ಚ್ 26 ರ ಹೊತ್ತಿಗೆ ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 92.15 ರೂ. ಆಗಿದೆ.
ದೆಹಲಿ: ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ., ಪೆಟ್ರೋಲ್ ಬೆಲೆ 94.72 ರೂ. ಆಗಿದೆ.
ಚೆನ್ನೈನಲ್ಲಿ ಪೆಟ್ರೋಲ್ 100.98 ರೂ. ಡೀಸೆಲ್ 92.56 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 103.94 ರೂ., ಡೀಸೆಲ್ 90.76 ರೂ.,
ನೋಯ್ಡಾದಲ್ಲಿ 94.80 ರೂ., 87.93 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 99.84 ರೂ., ಡೀಸೆಲ್ 85.93 ರೂ., ತಿರುವನಂತಪುರಂನಲ್ಲಿ ಪೆಟ್ರೋಲ್ 107.25 ರೂ., ಡೀಸೆಲ್ 96.13 ರೂ., ಜೈಪುರದಲ್ಲಿ ಪೆಟ್ರೋಲ್ 104.88 ರೂ. 90.36 ರೂ. ಇದೆ.
ಮತ್ತಷ್ಟು ಓದಿ: Petrol Diesel Price on March 25: ಬಿಹಾರ, ಪಂಜಾಬ್ ಹಾಗೂ ಗುಜರಾತ್ನಲ್ಲಿ ಪೆಟ್ರೋಲ್ ದುಬಾರಿ
ಕಚ್ಚಾ ತೈಲ ಬೆಲೆ: ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗೆ ಪ್ರಾಥಮಿಕ ಕಚ್ಚಾ ವಸ್ತು ಕಚ್ಚಾ ತೈಲ, ಮತ್ತು ಅದರ ಬೆಲೆ ನೇರವಾಗಿ ಈ ಇಂಧನಗಳ ಅಂತಿಮ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ.
ಭಾರತೀಯ ರೂಪಾಯಿ ಮತ್ತು ಯುಎಸ್ ಡಾಲರ್ ನಡುವಿನ ವಿನಿಮಯ ದರ: ಕಚ್ಚಾ ತೈಲದ ಪ್ರಮುಖ ಆಮದುದಾರರಾಗಿ, ಭಾರತದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಭಾರತೀಯ ರೂಪಾಯಿ ಮತ್ತು ಯುಎಸ್ ಡಾಲರ್ ನಡುವಿನ ವಿನಿಮಯ ದರದಿಂದ ಪ್ರಭಾವಿತವಾಗಿವೆ.
ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ತೆರಿಗೆ: ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿವಿಧ ತೆರಿಗೆಗಳನ್ನು ವಿಧಿಸುತ್ತವೆ. ಈ ತೆರಿಗೆಗಳು ರಾಜ್ಯಗಳಾದ್ಯಂತ ಭಿನ್ನವಾಗಿರಬಹುದು, ಪೆಟ್ರೋಲ್ ಮತ್ತು ಡೀಸೆಲ್‌ನ ಅಂತಿಮ ಬೆಲೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರುತ್ತವೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ