AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ವಿವಿಧ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್​ ದರ ಗಮನಿಸಿ!

Petrol Diesel Price Today in Bengaluru: ಪೆಟ್ರೋಲ್, ಡೀಸೆಲ್​ ದರ ಇಂದು ಶುಕ್ರವಾರ ಸ್ಥಿರವಾಗಿದೆ. ಸತತ 10 ದಿನಗಳಿಂದ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ವಿವಿಧ ನಗರಗಳಲ್ಲಿ ಇಂಧನ ದರ ಹೇಗಿದೆ ಎಂಬುದರ ವಿವರ ಇಲ್ಲಿದೆ.

Petrol Price Today: ಇಂದು ವಿವಿಧ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್​ ದರ ಗಮನಿಸಿ!
ಸಾಂದರ್ಭಿಕ ಚಿತ್ರ
shruti hegde
|

Updated on:Apr 19, 2021 | 12:14 PM

Share

ಬೆಂಗಳೂರು: ಸತತವಾಗಿ 10 ದಿನಗಳಿಂದ ಸರ್ಕಾರಿ ತೈಲ ಕಂಪನಿಗಳಿಂದ ಪೆಟ್ರೋಲ್​, ಡೀಸೆಲ್​ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಇಂದು ಶುಕ್ರವಾರವೂ ಪೆಟ್ರೋಲ್​, ಡೀಸೆಲ್​ ದರ ಸ್ಥಿರವಾಗಿಯೇ ಉಳಿದಿದೆ. ಹತ್ತು ದಿನಗಳ ಹಿಂದೆ ಪೆಟ್ರೋಲ್​ 22ಪೈಸೆ ಮತ್ತು ಡೀಸೆಲ್​ 23 ಪೈಸೆಯಷ್ಟು ಇಳಿಕೆಯಾಗಿತ್ತು. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 56 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 80 ರೂಪಾಯಿ 87 ಪೈಸೆಯಷ್ಟು ಇದೆ.

ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96 ರೂಪಾಯಿ 98 ಪೈಸೆ ಮತ್ತು ಪ್ರತಿ ಲೀಟರ್​ ಡೀಸೆಲ್​ ದರ 87 ರೂಪಾಯಿ 96 ಪೈಸೆಯಷ್ಟಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 77 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 83 ರೂಪಾಯಿ 75 ಪೈಸೆಯಷ್ಟಿದೆ. ಚೆನ್ನೈನಲ್ಲಿ ಪ್ರತಿ ಲಿಟರ್​ ಪೆಟ್ರೋಲ್​ ದರ 92 ರೂಪಾಯಿ 58 ಪೈಸೆ ಹಾಗೂ ಪ್ರತಿ ಲೀಟರ್​ ಡೀಸೆಲ್​ ದರ 85 ರೂಪಾಯಿ 88 ಪೈಸೆಗೆ ಮಾರಾಟವಾಗುತ್ತಿದೆ. ತೈಲ ಕಂಪನಿಗಳು ಪ್ರತಿನಿತ್ಯ ಕೆಲವು ಮಾನದಂಡಗಳ ಆಧಾರದ ಮೇಲೆ ಪೆಟ್ರೋಲ್​, ಡೀಸೆಲ್​ ದರವನ್ನು ನಿಗದಿಪಡಿಸುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ಪೆಟ್ರೋಲ್​, ಡೀಸೆಲ್​ ದರವನ್ನು ಪರಿಶೀಲನೆ ಮಾಡಲಾಗುತ್ತದೆ.

ವಿವಿಧ ನಗರಗಳಲ್ಲಿ ಪೆಟ್ರೋಲ್​ ದರ ಇಂಧನ ದರ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಶ್ರೀಗಂಗನಗರದಲ್ಲಿ ಪ್ರತಿ ಲಿಟರ್​ ಪೆಟ್ರೋಲ್​ ದರ 101 ರೂಪಾಯಿ 20 ಪೈಸೆ ಇದೆ. ಅನುಪ್ಪುರದಲ್ಲಿ ಪ್ರತಿ ಲಿಟರ್​ ಪೆಟ್ರೋಲ್​ ದರ 100 ರೂಪಾಯಿ 96 ಪೈಸೆ ಇದೆ. ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94 ರೂಪಾಯಿ 16 ಪೈಸೆ ಇದೆ. ಹಾಗೆಯೇ ಪಾಟ್ನಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92 ರೂಪಾಯಿ 89 ಪೈಸೆ ಆಗಿದೆ. ಜೈಪುರದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92 ರೂಪಾಯಿ 89 ಪೈಸೆ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 88 ರೂಪಾಯಿ 85 ಪೈಸೆಯಷ್ಟಿದೆ.

ವಿವಿಧ ನಗರಗಳಲ್ಲಿ ಡೀಸೆಲ್​ ದರ ಶ್ರೀಗಂಗನಗರದಲ್ಲಿ ಪ್ರತಿಲೀಟರ್​ ಡೀಸೆಲ್​ ದರ 93 ರೂಪಾಯಿ 14 ಪೈಸೆ ಇದೆ. ಅನುಪ್ಪುರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 91 ರೂಪಾಯಿ 33 ಪೈಸೆ ಇದೆ. ಹೈದರಾಬಾದ್​ನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 88 ರೂಪಾಯಿ 20 ಪೈಸೆ ಇದೆ ಹಾಗೆಯೇ ಪಾಟ್ನಾದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 86 ರೂಪಾಯಿ 12 ಪೈಸೆಯಷ್ಟಿದೆ. ಜೈಪುರದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 89 ರೂಪಾಯಿ 35 ಪೈಸೆ ಇದೆ. ಹಾಗೆಯೇ ಲಕ್ನೋದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 81 ರೂಪಾಯಿ27 ಪೈಸೆಯಷ್ಟಿದೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ

https://tv9kannada.com/business/diesel-price-today.html

Published On - 8:50 am, Fri, 9 April 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ