PF interest: ಈ ದಿನದೊಳಗೆ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ ಶೇ 8.5ರಷ್ಟು ಪಿಎಫ್​ ಬಡ್ಡಿ, ಪರಿಶೀಲನೆ ಮಾಡಿಕೊಳ್ಳಿ

| Updated By: Srinivas Mata

Updated on: Jun 02, 2021 | 12:26 PM

2020- 21ನೇ ಸಾಲಿಗೆ ಪಿಎಫ್​ ಬಡ್ಡಿ ದರ ಶೇ 8.5ರಷ್ಟು ಚಂದಾದಾರರ ಖಾತೆಗೆ ಯಾವಾಗ ಜಮೆ ಆಗಲಿದೆ ಎಂಬ ವಿವರ ಇಲ್ಲಿದೆ. ಕಳೆದ ವರ್ಷ ಬಡ್ಡಿ ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.

PF interest: ಈ ದಿನದೊಳಗೆ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ ಶೇ 8.5ರಷ್ಟು ಪಿಎಫ್​ ಬಡ್ಡಿ, ಪರಿಶೀಲನೆ ಮಾಡಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us on

ಪ್ರಮುಖ ದಿನಪತ್ರಿಕೆಗಳ ವರದಿ ಪ್ರಕಾರ, ಇಪಿಎಫ್​ಒದಿಂದ ಬಡ್ಡಿ ದರವನ್ನು ಜುಲೈ ಕೊನೆ ಹೊತ್ತಿಗೆ ಕ್ರೆಡಿಟ್ ಮಾಡಲಾಗುತ್ತದೆ. ಯಾರೆಲ್ಲ ಇಪಿಎಫ್ ಚಂದಾದಾರರಿದ್ದಾರೋ ಅವರ ಖಾತೆಗಳಿಗೆ 2020- 21ನೇ ಹಣಕಾಸು ವರ್ಷದ ಶೇ 8.5ರಷ್ಟು ಬಡ್ಡಿ ದರವು ಖಾತೆಗೆ ಜಮೆ ಆಗುತ್ತದೆ. ಅಂದ ಹಾಗೆ ಶೇ 8.5ರ ಬಡ್ಡಿ ದರಕ್ಕೆ ಕಾರ್ಮಿಕ ಸಚಿವಾಲಯದಿಂದಲೂ ಒಪ್ಪಿಗೆ ಸಿಕ್ಕಿತ್ತು. ಮಾರ್ಚ್​ನಲ್ಲಿ ಶ್ರೀನಗರ್​ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂಡಳಿ ಟ್ರಸ್ಟಿಗಳ (CBT) ಸಭೆಯಲ್ಲಿ ಇಪಿಎಫ್​ ದರವನ್ನು ಶೇ 8.5 ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು.

ಅಂದಹಾಗೆ ದೇಶದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಇಪಿಎಫ್​ಒದಿಂದ ತನ್ನ ಸದಸ್ಯರಿಗೆ ಕೋವಿಡ್- 19 ಮುಂಗಡ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಹೇಗೆ ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ ಪಿಎಫ್​ ವಿಥ್​ಡ್ರಾಗೆ ಅರ್ಜಿ ಹಾಕಿಕೊಳ್ಳಲಾಗಿತ್ತೋ ಅದೇ ರೀತಿಯಲ್ಲಿ ಈ ಸಲವೂ ಅಪ್ಲೈ ಮಾಡಬಹುದಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ಜೂನ್ 1ರಿಂದ ಅನ್ವಯ ಆಗುವಂತೆ ಪಿಎಫ್​ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಡದಿದ್ದಲ್ಲಿ ಉದ್ಯೋಗದಾತರ ಪಿಎಫ್​ ಕೊಡುಗೆ ಖಾತೆಗೆ ಜಮೆ ಆಗುವುದಿಲ್ಲ. ಈ ಬಾರಿ ಆಧಾರ್ ಜೋಡಣೆ ಜವಾಬ್ದಾರಿಯನ್ನು ಉದ್ಯೋಗದಾತರಿಗೆ ನೀಡಲಾಗಿದೆ. ತಮ್ಮ ಉದ್ಯೋಗಿಗೆ ಸೂಚನೆ ನೀಡಿ, ಆಧಾರ್ ಜತೆಗೆ ಪಿಎಫ್ ಖಾತೆ ಜೋಡಣೆ ಆಗಿದೆಯಾ ಎಂಬುದನ್ನು ಖಾತ್ರಿ ಪಡಿಸಬೇಕಾಗುತ್ತದೆ.

ಇದನ್ನೂ ಓದಿ: How to Link Aadhaar Card with EPF Account: ಆಧಾರ್ ಜತೆಗೆ ಪಿಎಫ್​ ಖಾತೆ ಜೋಡಣೆ ಮಾಡುವುದು ಹೇಗೆ?

ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್​ ವಿಥ್​ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ

(EPFO will credit PF interest of 8.5% to subscribers account by this date)

Published On - 12:23 pm, Wed, 2 June 21