ನವದೆಹಲಿ, ನವೆಂಬರ್ 13: ಯುವಜನರಲ್ಲಿ ಉದ್ದಿಮೆಯ ನೈಜ ಕೌಶಲ್ಯಗಳನ್ನು ಹೆಚ್ಚಿಸುವ ಉದ್ದೇಶದಿಂದ ಆರಂಭಿಸಲಾದ ಪಿಎಂ ಇಂಟರ್ನ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್ಲೈನ್ ಸಮೀಪಿಸಿದೆ. ನವೆಂಬರ್ 15ಕ್ಕೆ ಅರ್ಜಿ ಸಲ್ಲಿಕೆ ಅವಕಾಶ ಮುಕ್ತಾಯವಾಗುತ್ತದೆ. ಯುವಜನರಲ್ಲಿ ಅವಶ್ಯಕ ಕೌಶಲ್ಯಗಳನ್ನು ಒದಗಿಸಿ ಅವರ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಇಂಟರ್ನ್ಶಿಪ್ ಸ್ಕೀಮ್ ಅನ್ನು ನಡೆಸಲಾಗುತ್ತಿದೆ. ದೇಶದ ಟಾಪ್-500 ಕಂಪನಿಗಳಲ್ಲಿ ಒಂದು ವರ್ಷ ಇಂಟರ್ನ್ಶಿಪ್ ಮಾಡುವ ಅವಕಾಶ ಇದೆ. ಸರ್ಕಾರದಿಂದ ಅಭ್ಯರ್ಥಿಗಳಿಗೆ ಸಹಾಯಧನವೂ ಸಿಗುತ್ತದೆ.
ಇದನ್ನೂ ಓದಿ: ಬಡ್ಡಿದರ ಫೆಬ್ರುವರಿಯಲ್ಲೂ ಕಡಿಮೆ ಮಾಡುವ ಸಾಧ್ಯತೆ ಇಲ್ಲ: ಎಸ್ಬಿಐ ರಿಸರ್ಚ್
ಐಟಿ ಕಂಪನಿಗಳಿಂದ ಹಿಡಿದು ಜವಳಿ ಉದ್ಯಮದವರೆಗೂ ವಿವಿಧ ಕ್ಷೇತ್ರಗಳಲ್ಲಿರುವ 300ಕ್ಕೂ ಅಧಿಕ ಪ್ರಮುಖ ಕಂಪನಿಗಳು ಈ ವರ್ಷ ಇಂಟರ್ನ್ಶಿಪ್ ಆಫರ್ ಮಾಡುತ್ತಿವೆ. ಅಭ್ಯರ್ಥಿಗಳು ತಮ್ಮಿಚ್ಛೆಯ ಕ್ಷೇತ್ರದಲ್ಲಿ ಇಂಟರ್ನ್ ಆಗುವ ಅವಕಾಶ ನೀಡಲಾಗುತ್ತದೆ. ಒಂದು ವರ್ಷ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಬಹುದು.
ಯೋಜನೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಸರ್ಕಾರ ಲಂಪ್ಸಮ್ ಆಗಿ 6,000 ರೂ ಒದಗಿಸುತ್ತದೆ. ಜೊತೆಗೆ, ಇಂಟರ್ನ್ಶಿಪ್ನ ಒಂದು ವರ್ಷದಲ್ಲಿ ಪ್ರತೀ ತಿಂಗಳು 4,500 ರೂ ಸಹಾಯಧನವನ್ನು ಸರ್ಕಾರ ನೀಡುತ್ತದೆ. ಕಂಪನಿ ವತಿಯಿಂದಲೂ ಮಾಸಿಕವಾಗಿ 500 ರೂವರೆಗೆ ನೀಡಲಾಗುತ್ತದೆ. ತಿಂಗಳಿಗೆ ಒಟ್ಟು 5,000 ರೂ ಹಣವನ್ನು ಈ ತರಬೇತಿ ಅವಧಿಯಲ್ಲಿ ಪಡೆಯಬಹುದು.
ಇದನ್ನೂ ಓದಿ: ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ
ಇಂಟರ್ನ್ಶಿಪ್ ಅವಧಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ಸರ್ಕಾರದ ವತಿಯಿಂದ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆಯ ನೆರವು ಸಿಗುತ್ತದೆ. ಇದರ ಜೊತೆಗೆ ಕಂಪನಿ ವತಿಯಿಂದ ಹೆಚ್ಚುವರಿ ಅಪಘಾತ ವಿಮಾ ಕವರೇಜ್ ಕೂಡ ಸಿಗುತ್ತದೆ.
ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ, ಅಭ್ಯರ್ಥಿಗಳಿಗೆ ಬಹುತೇಕ ನೈಜ ಕೆಲಸದ ಅನುಭವ ಸಿಗುತ್ತದೆ. ಈ ಅನುಭವವನ್ನು ಬಳಸಿಕೊಂಡು ಅವರು ಬೇರೆ ಉದ್ಯೋಗಗಳನ್ನು ಅರಸಬಹುದು. ಅದೇ ಕಂಪನಿ ಇಚ್ಛಿಸಿದರೆ ಇವರನ್ನು ಪೂರ್ಣಾವಧಿ ಉದ್ಯೋಗಿಯಾಗಿ ನೇಮಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ