1ರಿಂದ 25 ವರ್ಷದವರೆಗೆ ಹೂಡಿಕೆಯಲ್ಲಿ ಅತಿಹೆಚ್ಚು ಲಾಭ ಕೊಟ್ಟಿರೋದು ಈಕ್ವಿಟಿಯೇ: ಮಾರ್ಗನ್ ಸ್ಟಾನ್ಲೀ ವರದಿ

ದೀರ್ಘಾವಧಿ ಹೂಡಿಕೆಯಲ್ಲಿ ಚಿನ್ನ, ರಿಯಲ್ ಎಸ್ಟೇಟ್, ಎಫ್​ಡಿ, ಬಾಂಡ್ ಇತ್ಯಾದಿಗಿಂತ ಭಾರತೀಯ ಈಕ್ವಿಟಿಗಳು ಹೆಚ್ಚು ಲಾಭ ತಂದಿವೆ. 1 ವರ್ಷದಿಂದ 25 ವರ್ಷದವರೆಗೂ ವಿವಿಧ ಕಾಲಾವಧಿಯಲ್ಲಿ ಯಾವ್ಯಾವ ಆಸ್ತಿಗಳು ಎಷ್ಟೆಲ್ಲಾ ಲಾಭ ಮಾಡಿವೆ ಎನ್ನುವ ಮಾಹಿತಿ ಬಿಡುಗಡೆ ಮಾಡಿದೆ ಮಾರ್ಗನ್ ಸ್ಟಾನ್ಲೀ. 25 ವರ್ಷದಲ್ಲಿ ಈಕ್ವಿಟಿ ಶೇ. 15.1ರ ವಾರ್ಷಿಕ ದರದಲ್ಲಿ ಲಾಭ ತಂದಿದೆ. ಚಿನ್ನವು ಶೇ. 11.1ರ ವಾರ್ಷಿಕ ದರದಲ್ಲಿ ಮೌಲ್ಯ ಹೆಚ್ಚಿಸಿಕೊಂಡಿದೆ.

1ರಿಂದ 25 ವರ್ಷದವರೆಗೆ ಹೂಡಿಕೆಯಲ್ಲಿ ಅತಿಹೆಚ್ಚು ಲಾಭ ಕೊಟ್ಟಿರೋದು ಈಕ್ವಿಟಿಯೇ: ಮಾರ್ಗನ್ ಸ್ಟಾನ್ಲೀ ವರದಿ
ಷೇರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2024 | 6:57 PM

ನವದೆಹಲಿ, ನವೆಂಬರ್ 13: ಜನಸಾಮಾನ್ಯರು ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಷೇರು, ರಿಯಲ್ ಎಸ್ಟೇಟ್, ಚಿನ್ನ, ಬಾಂಡ್, ಎಫ್​ಡಿ ಇತ್ಯಾದಿ ಇವೆ. ದೀರ್ಘಾವಧಿಯಲ್ಲಿ ಯಾವ ಹೂಡಿಕೆ ಹೆಚ್ಚು ಲಾಭದಾಯಕ? ಖ್ಯಾತ ಹಣಕಾಸು ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ ಇದಕ್ಕೆ ಉತ್ತರ ನೀಡಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯು ದೀರ್ಘಾವಧಿಯಲ್ಲಿ ಬೇರೆ ಆಸ್ತಿಗಳಿಗಿಂತ ಹೆಚ್ಚು ರಿಟರ್ನ್ ತಂದಿದೆ ಎನ್ನುವ ಮಾಹಿತಿಯನ್ನು ಬಹಿರಂಗಗೊಳಿಸಿದೆ.

5, 10, 15, 20, ಮತ್ತು 25 ವರ್ಷ ಅವಧಿಯಲ್ಲೂ ಭಾರತದ ಈಕ್ವಿಟಿ ಹೆಚ್ಚು ಲಾಭ ತಂದಿದೆ. ಆದರೆ, ಈ ಅಧಿಕ ರಿಟರ್ನ್ ಪಡೆಯಲು ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರಬೇಕು. ಹೂಡಿಕೆ ಅವಧಿಯಲ್ಲಿ ಇರಬಹುದಾದ ವಿಚಲನಗಳನ್ನು ಮೀರಿ ಸಂಯಮ ತೋರುವ ಮನೋಭಾವ ಇರಬೇಕು ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಹೇಳಿದೆ. ವಿವಿಧ ಕಾಲಾವಧಿಯಲ್ಲಿ ಯಾವೆಲ್ಲಾ ಅಸೆಟ್​ಗಳು ಹೇಗೆ ಪರ್ಫಾರ್ಮ್ ಮಾಡಿವೆ ಎನ್ನುವ ವಿವರವನ್ನು ಅದು ನೀಡಿದೆ.

ಇದನ್ನೂ ಓದಿ: ಸ್ಪ್ಯಾಮ್ ಹಾವಳಿ; 18 ಲಕ್ಷ ನಂಬರ್​ಗಳನ್ನು ಡಿಸ್ಕನೆಕ್ಟ್ ಮಾಡಿದ ಟ್ರಾಯ್

ಕಳೆದ 1 ವರ್ಷ, 5 ವರ್ಷ, 10 ವರ್ಷ, 15 ವರ್ಷ, 20 ವರ್ಷ ಮತ್ತು 25 ವರ್ಷದ ಹೂಡಿಕೆ ರೇಸ್​ಗಳನ್ನು ತೆಗೆದುಕೊಂಡರೆ ಎಲ್ಲದರಲ್ಲೂ ಈಕ್ವಿಟಿಯೇ (ಬಿಎಸ್​ಇ ಸೆನ್ಸೆಕ್ಸ್) ಮುಂದಿದೆ. ಈ ಪೈಕಿ ಕಳೆದ 25 ವರ್ಷದ ರೇಸ್ ಅನ್ನು ಪರಿಗಣಿಸಿದರೆ, ಈಕ್ವಿಟಿಗಳು ಶೇ. 15.1ರ ವಾರ್ಷಿಕ ದರದಲ್ಲಿ (ಸಿಎಜಿಆರ್) ಲಾಭ ತಂದಿದೆ.

ಚಿನ್ನ ಶೇ. 11.1, ಬ್ಯಾಂಕ್ ಎಫ್​ಡಿ ಶೇ. 7.3, ಚಿರಾಸ್ತಿ ಶೇ. 7ರಷ್ಟು ರಿಟರ್ನ್ ತಂದಿವೆ. ಈಕ್ವಿಟಿಗೆ ಸಮೀಪ ಬಂದಿರುವುದು ಚಿನ್ನ ಮಾತ್ರವೇ. ಗಮನ ಸೆಳೆಯುವ ಸಂಗತಿ ಎಂದರೆ ಷೇರು ಮಾರುಕಟ್ಟೆ ವಿವಿಧ ಕಾಲಘಟ್ಟಗಳಲ್ಲಿ ಬೆಳೆಯುವ ವೇಗದಲ್ಲಿ ಸ್ಥಿರತೆ ಹೊಂದಿದೆ. ಶೇ. 14.5ರಿಂದ ಶೇ. 18.7ರ ಶ್ರೇಣಿಯ ವಾರ್ಷಿಕ ದರದಲ್ಲಿ ಈಕ್ವಿಟಿಗಳು ಲಾಭ ತೋರಿರುವುದು ಗೊತ್ತಾಗುತ್ತದೆ.

ಆದರೆ, ಈ ಹಾದಿಯಲ್ಲಿ ಈಕ್ವಿಟಿಗಳು ಹೆಚ್ಚು ಏರಿಳಿತಗಳನ್ನು ಕಂಡಿವೆ. ಸಂಯಮಗೆಟ್ಟು ಅಪಕ್ವ ಕಾಲದಲ್ಲಿ ಷೇರುಗಳನ್ನು ಮಾರಿದವರು ಕೈಸುಟ್ಟುಕೊಂಡಿರುತ್ತಾರೆ. ಸಂಯಮ ಕಾಯ್ದುಕೊಂಡವರು ಭರ್ಜರಿ ಲಾಭ ಮಾಡಿರುತ್ತಾರೆ. ಇದು ಮಾರ್ಗನ್ ಸ್ಟಾನ್ಲೀ ಬಿಡುಗಡೆ ಮಾಡಿರುವ ದತ್ತಾಂಶದಿಂದ ತಿಳಿದುಬರುವ ಸಂಗತಿ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ…

ಇದೇ ವೇಳೆ ಕಳೆದ ಒಂದು ದಶಕದಲ್ಲಿ ಭಾರತೀಯರು 8.5 ಟ್ರಿಲಿಯನ್ ಡಾಲರ್ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಇದರಲ್ಲಿ ಸುಮಾರು ಒಂದು ಟ್ರಿಲಿಯನ್ ಡಾಲರ್​ನಷ್ಟು ಸಂಪತ್ತು ಈಕ್ವಿಟಿಗಳಿಂದಲೇ ಬೆಳೆದಿದೆ ಎನ್ನುವ ಅಂಶವೂ ಬೆಳಕಿಗೆ ಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ