ಸ್ಪ್ಯಾಮ್ ಹಾವಳಿ; 18 ಲಕ್ಷ ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಿದ ಟ್ರಾಯ್
Trai crack down on spams: ಮೊಬೈಲ್ ಬಳಕೆದಾರರ ಪ್ರೈವೆಸಿ ಹಾಳು ಮಾಡುವ ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ಟ್ರಾಯ್ ಸಂಸ್ಥೆ 18 ಲಕ್ಷ ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಿದೆ. ಈ ಸ್ಪ್ಯಾಮ್ ಕರೆಗೆ ಕಾರಣವಾದ 800 ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್ಗೆ ಹಾಕಿದೆ. ಟೆಲಿಕಾಂ ಆಪರೇಟರುಗಳ ಸಹಕಾರದೊಂದಿಗೆ ಟ್ರಾಯ್ ಸಂಸ್ಥೆ ಸ್ಪ್ಯಾಮ್ ಪಿಡುಗಿನ ವಿರುದ್ಧ ಹೋರಾಡುತ್ತಿದೆ.
ನವದೆಹಲಿ, ನವೆಂಬರ್ 13: ಯಾವುದೇ ಕಮರ್ಷಿಲ್ ಕಾಲ್ ಮಾಡಬೇಕಾದರೆ 140 ಸೀರೀಸ್ನ ನಂಬರ್ಗಳಿಂದ ಮಾಡಬೇಕು ಎನ್ನುವ ನಿಯಮವನ್ನು ಟ್ರಾಯ್ ರೂಪಿಸಿದೆ. ಆದಾಗ್ಯೂ ಬಹಳಷ್ಟು ಸಂಸ್ಥೆಗಳು ವೈಯಕ್ತಿಕ ನಂಬರ್ ಮೂಲಕ ಸ್ಪ್ಯಾಮ್ ಅಥವಾ ಕಮರ್ಷಿಯಲ್ ಕಾಲ್ಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಪಿಡುಗನ್ನು ನಿಗ್ರಹಿಸಲು ಟ್ರಾಯ್ ಬಿಗಿ ಕ್ರಮ ತೆಗೆದುಕೊಳ್ಳುತ್ತಿದೆ. ಟೆಲಿಮಾರ್ಕೆಟಿಂಗ್ನಲ್ಲಿರುವವರು ಪರ್ಸನಲ್ ನಂಬರ್ಗಳಿಂದ ಸ್ಪ್ಯಾಮ್ ಕರೆ ಮತ್ತು ಮೆಸೇಜ್ಗಳನ್ನು ಮಾಡಿದರೆ ಆ ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಲಾಗುತ್ತದೆ.
ಈ ರೀತಿ ವೈಯಕ್ತಿಕ ನಂಬರ್ಗಳಿಂದ ಸ್ಪ್ಯಾಮ್ ಕರೆಗಳನ್ನು ಮಾಡುವ ಸಂಸ್ಥೆಗಳನ್ನು ಬ್ಲ್ಯಾಕ್ಲಿಸ್ಟ್ನಲ್ಲಿ ಇಡಲಾಗುತ್ತಿದೆ. ಟ್ರಾಯ್ ಛೇರ್ಮನ್ ಅನಿಲ್ ಕುಮಾರ್ ಲಾಹೋಟಿ ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ತಿಂಗಳಲ್ಲಿ 18 ಲಕ್ಷಕ್ಕೂ ಹೆಚ್ಚು ನಂಬರ್ಗಳನ್ನು ಡಿಸ್ಕನೆಕ್ಟ್ ಮಾಡಲಾಗಿದೆ. 800 ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್: ನ. 15, ಶುಕ್ರವಾರ ನೊಂದಣಿಗೆ ಕೊನೆಯ ದಿನ; ತ್ವರೆ ಮಾಡಿ…
ಕೆಲ ಟೆಲಿಮಾರ್ಕೆಟಿಂಗ್ ಕಂಪನಿಗಳು ವ್ಯವಸ್ಥೆಯ ಲೋಪದೋಷಗಳನ್ನು ಹೇಗೆ ದುರುಪಯೋಗಪಡಿಸಿ ಕೊಳ್ಳಬಹುದು ಎನ್ನುವುದನ್ನು ಕೂಲಂಕಷವಾಗಿ ಪರಿಶೀಲಿಸಿರುವ ಟ್ರಾಯ್, ಅದಕ್ಕೆ ಅನುಗುಣವಾಗಿ ನಿಯಮಗಳನ್ನು ಬಿಗಿ ಮಾಡುತ್ತಾ ಬಂದಿದೆ. ಟೆಲಿಕಾಂ ಆಪರೇಟರುಗಳೂ ಈ ನಿಟ್ಟಿನಲ್ಲಿ ಟ್ರಾಯ್ಗೆ ಸಹಕಾರ ನೀಡಿವೆ. ಇದರಿಂದಾಗಿ ಸ್ಪ್ಯಾಮ್ ಮೆಸೇಜ್ಗಳನ್ನು ಕಳುಹಿಸುವುದು ಈಗ ಮೊದಲಿನಷ್ಟು ಸುಲಭವಾಗಿಲ್ಲ.
‘ಟೆಲಿಕಾಂ ಉದ್ಯಮದ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ತಾಂತ್ರಿಕ ಕೆಲಸ ಮುಗಿದಿದೆ. ಸ್ಪ್ಯಾಮ್ ಮೆಸೇಜ್ ಮತ್ತು ಕಾಲ್ಗಳ ಸಂಖ್ಯೆ ಕಡಿಮೆ ಆಗಿದೆ,’ ಎಂದು ಟ್ರಾಯ್ ಛೇರ್ಮನ್ ಅನಿಲ್ ಕುಮಾರ್ ಲಾಹೋಟಿ ಅವರು ಎನ್ಡಿಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಈ ವರ್ಷವೇ ರಚನೆಯಾಗುತ್ತಾ 8ನೇ ವೇತನ ಆಯೋಗ? ಕನಿಷ್ಠ ವೇತನ ಡಬಲ್ ಆಗುತ್ತಾ? ಇಲ್ಲಿದೆ ಮಾಹಿತಿ
ಕಮರ್ಷಿಯಲ್ ಕಾಲ್ಗಳನ್ನು 140 ಸೀರೀಸ್ ನಂಬರ್ನಿಂದಲೇ ಮಾಡಬೇಕು ಎಂದು ಕಡ್ಡಾಯ ಮಾಡಲಾಗಿದೆ. ಈ ಕರೆಗಳು ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ ಪ್ಲಾಟ್ಫಾರ್ಮ್ ಮೂಲಕ ರೂಟ್ ಆಗುತ್ತವೆ. ಇನ್ನು, ಮೆಸೇಜ್ಗಳ ಮೂಲಕ ಸ್ಪ್ಯಾಮ್ ಲಿಂಕ್ಗಳನ್ನು ಕಳುಹಿಸುವ ವಿಚಾರದಲ್ಲೂ ಇದೇ ಟೆಕ್ನಾಲಜಿ ಅನುಸರಿಸಲಾಗುತ್ತಿದೆ. ಈ ಮೆಸೇಜ್ಗಳು ಡಿಸ್ಟ್ರಿಬ್ಯೂಶನ್ ಲೆಡ್ಜರ್ ಟೆಕ್ನಾಲಜಿ ಪ್ಲಾಟ್ಫಾರ್ಮ್ ಮೂಲಕ ಹೋಗಬೇಕು. ಸ್ಪ್ಯಾಮ್ ಲಿಂಕ್ ಇದ್ದರೆ ಆ ಮೆಸೇಜ್ ಅಲ್ಲಿಯೇ ಬ್ಲಾಕ್ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ