AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಜಿಡಿಪಿ ಮತ್ತು ಸಾಲ ಅನುಪಾತ ಶೇ. 65ಕ್ಕೆ ಇಳಿಕೆ; ಭಾರತ ಹಾಗೂ ಇತರ ದೇಶಗಳಲ್ಲಿ ಎಷ್ಟಿದೆ ನೋಡಿ…

Pakistan debt to GDP ratio: ಪಾಕಿಸ್ತಾನದ ಸಾಲ ಮತ್ತು ಜಿಡಿಪಿ ನಡುವಿನ ಅನುಪಾತ ಗಮನಾರ್ಹವಾಗಿ ಕಡಿಮೆ ಆಗುತ್ತಿದೆ. ಸೆಪ್ಟೆಂಬರ್​ನಲ್ಲಿ ಅದರ ಡೆಟ್ ಟು ಜಿಡಿಪಿ ರೇಶಿಯೋ ಶೇ. 65.7ರಷ್ಟಿದೆ. ಪಾಕಿಸ್ತಾನದ ಸಾಲದ ಪ್ರಮಾಣ ಆಗಸ್ಟ್​ನಲ್ಲಿ 70.362 ಲಕ್ಷ ಕೋಟಿ ರೂನಷ್ಟು ಇದ್ದದ್ದು ಸೆಪ್ಟೆಂಬರ್​ನಲ್ಲಿ 69.57 ಲಕ್ಷ ಕೋಟಿ ರೂಗೆ ಇಳಿದಿದೆ. ಭಾರತದ ಡೆಟ್ ಟು ಜಿಡಿಪಿ ರೇಶಿಯೋ ಶೇ. 58ರಷ್ಟಿದೆ.

ಪಾಕಿಸ್ತಾನದ ಜಿಡಿಪಿ ಮತ್ತು ಸಾಲ ಅನುಪಾತ ಶೇ. 65ಕ್ಕೆ ಇಳಿಕೆ; ಭಾರತ ಹಾಗೂ ಇತರ ದೇಶಗಳಲ್ಲಿ ಎಷ್ಟಿದೆ ನೋಡಿ...
ಪಾಕಿಸ್ತಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2024 | 4:37 PM

Share

ನವದೆಹಲಿ, ನವೆಂಬರ್ 13: ಪಾಕಿಸ್ತಾನದ ಆರ್ಥಿಕತೆಯನ್ನು ಮೇಲೆತ್ತಲು ಅಲ್ಲಿನ ಸರ್ಕಾರ ಅವಿರತವಾಗಿ ಪ್ರಯತ್ನಿಸುತ್ತಿದೆ. ಅದು ಒಂದಿಷ್ಟು ಪರಿಣಾಮ ಬೀರಲು ಆರಂಭಿಸಿದ್ದು, ಅದರ ಫಲವಾಗಿ ಪಾಕಿಸ್ತಾನದ ಡೆಟ್ ಟು ಜಿಡಿಪಿ ರೇಶಿಯೋ ಗಣನೀಯವಾಗಿ ಇಳಿಕೆ ಆಗಿದೆ. ಪಾಕಿಸ್ತಾನದ ಡಾನ್ ವಾಹಿನಿಯ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಜಿಡಿಪಿ ಮತ್ತು ಸಾಲ ನಡುವಿನ ಅನುಪಾತ ಶೇ. 65.7ರಷ್ಟಿದೆ. 2018ರ ಜೂನ್ ಬಳಿಕ ಇದು ಪಾಕಿಸ್ತಾನದ ಅತಿ ಸಕಾರಾತ್ಮಕ ಸ್ಥಿತಿ ಎನಿಸಿದೆ.

ಪಾಕಿಸ್ತಾನ ಸರ್ಕಾರದ ಸಾಲ ಸೆಪ್ಟೆಂಬರ್​ನಲ್ಲಿ 79,200 ಕೋಟಿ ರೂಪಾಯಿಯಷ್ಟು (ಪಾಕ್ ರು) ಕಡಿಮೆ ಆಗಿದೆ. ಆಗಸ್ಟ್ ತಿಂಗಳಿಗೆ ಹೋಳಿಸಿದರೆ ಸೆಪ್ಟೆಂಬರ್​ನಲ್ಲಿ ಸರ್ಕಾರ ಹೊಂದಿದ ಸಾಲದ ಪ್ರಮಾಣದಲ್ಲಿ ಶೇ. 1ರಷ್ಟು ಕಡಿಮೆ ಆಗಿದೆ. ಸರ್ಕಾರದ ಒಟ್ಟು ಸಾಲ ಸೆಪ್ಟೆಂಬರ್ ಅಂತ್ಯದಲ್ಲಿ 69.57 ಲಕ್ಷ ಕೋಟಿ ರೂ ಇದೆ. ಆಗಸ್ಟ್​ನಲ್ಲಿ ಇದು 70.362 ಲಕ್ಷ ಕೋಟಿ ರೂ ಇತ್ತು.

ಇದನ್ನೂ ಓದಿ: ಬಡ್ಡಿದರ ಫೆಬ್ರುವರಿಯಲ್ಲೂ ಕಡಿಮೆ ಮಾಡುವ ಸಾಧ್ಯತೆ ಇಲ್ಲ: ಎಸ್​ಬಿಐ ರಿಸರ್ಚ್

ಪಾಕಿಸ್ತಾನದ ಡೆಟ್ ಟು ಜಿಡಿಪಿ ರೇಶಿಯೋ ಶೇ 65.7 ರಷ್ಟಿದೆ. ಇದರಲ್ಲಿ ಆಂತರಿಕವಾಗಿ ಸಾಲದ ಅನುಪಾತ ಶೇ. 43.1ರಷ್ಟಿದೆ. ಬಾಹ್ಯ ಸಾಲದ ಪ್ರಮಾಣ ಶೇ. 22.7 ರಷ್ಟಿದೆ.

ಭಾರತದ ಡೆಟ್ ಟು ಜಿಡಿಪಿ ಅನುಪಾತ ಎಷ್ಟಿದೆ?

2023-24ರಲ್ಲಿ ಭಾರತದ ಡೆಟ್ ಟು ಜಿಡಿಪಿ ರೇಶಿಯೋ ಶೇ. 58.2ರಷ್ಟಿತ್ತು. ಇದರಲ್ಲಿ ಬಾಹ್ಯ ಸಾಲದ ಅನುಪಾತ ಶೇ. 18.8ರಷ್ಟಿದೆ. ಸರ್ಕಾರ ಪ್ರತೀ ವರ್ಷ ಒಂದು ಪ್ರತಿಶತದಷ್ಟು ಪ್ರಮಾಣದಲ್ಲಿ ಈ ಅನುಪಾತವನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಒಟ್ಟಾರೆಯಾಗಿ ಸಾಲ ಮತ್ತು ಜಿಡಿಪಿ ಅನುಪಾತ ಶೇ. 50ಕ್ಕೆ ತಂದು ನಿಲ್ಲಿಸುವುದು ಭಾರತ ಸರ್ಕಾರದ ಗುರಿಯಾಗಿದೆ.

ಅತಿಹೆಚ್ಚು ಡೆಟ್ ರೇಶಿಯೋ ಇರುವ ದೇಶಗಳು

  1. ಜಪಾನ್: ಶೇ. 264
  2. ವೆನಿಜುವೆಲಾ: ಶೇ. 241
  3. ಸುಡಾನ್: ಶೇ. 186
  4. ಗ್ರೀಸ್: ಶೇ. 173
  5. ಸಿಂಗಾಪುರ್: ಶೇ. 168
  6. ಎರಿಟ್ರಿಯಾ: ಶೇ. 164
  7. ಲೆಬನಾನ್: ಶೇ. 151
  8. ಇಟಲಿ: ಶೇ. 142
  9. ಅಮೆರಿಕ: ಶೇ. 129
  10. ಕೇಪ್ ವೆರ್ಡೆ: ಶೇ. 127

ಇದನ್ನೂ ಓದಿ: 5,000 ಸ್ವಿಗ್ಗಿ ಉದ್ಯೋಗಿಗಳಿಗೆ 9,0000 ಕೋಟಿ ರೂ ಮೊತ್ತದ ಷೇರುಗಳು; ಕೋಟ್ಯಧಿಪತಿಗಳಾದ 500 ಮಂದಿ

ಅತಿ ಕಡಿಮೆ ಸಾಲ ಅನುಪಾತ ಇರುವ ದೇಶಗಳು

  1. ಬ್ರೂನೇ: ಶೇ. 2.1
  2. ಕುವೇತ್: ಶೇ. 2.9
  3. ಕೇಮನ್ ಐಲ್ಯಾಂಡ್ಸ್: ಶೇ. 4.5
  4. ಅಫ್ಘಾನಿಸ್ತಾನ್: ಶೇ. 7.4
  5. ತುರ್ಕ್​ಮೆನಿಸ್ತಾನ್: ಶೇ. 8
  6. ಅಜರ್​ಬೈಜನ್: ಶೇ. 11.7
  7. ಬುರುಂಡಿ: ಶೇ. 14.5
  8. ಡಿಆರ್ ಕಾಂಗೋ: ಶೇ. 14.6
  9. ರಷ್ಯಾ: ಶೇ. 17.2
  10. ಪ್ಯಾಲಸ್ಟೀನ್: ಶೇ. 18.5

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!